ಛತ್ತೀಸ್‌ಘರ್‌ನಲ್ಲಿ ರಾಹುಲ್ ಪ್ರಚಾರ ಆರಂಭ

ಕಂಕೇರ್ (ಛತ್ತೀಸ್‌ಘರ್), ನ. ೯- ಸಾಲ ತೀರಿಸದೆ ಭಾರತ ಬಿಟ್ಟು ಪರಾರಿಯಾದವರ ದೊಡ್ಡಪಟ್ಟಿ ಮತ್ತು ನೋಟು ಅಮಾನ್ಯೀಕರಣದ ಅವಳಿ ಗಧಾ ಪ್ರಹಾರದೊಡನೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ರಾಜ್ಯದಲ್ಲಿ ತಮ್ಮ 2 ದಿನಗಳ ಪ್ರಚಾರವನ್ನು ಆರಂಭಿಸಿದರು.
ನೋಟು ಅಮಾನ್ಯೀಕರಣದ ನಂತರ ಒಂದೆಡೆ ಶ್ರೀಸಾಮಾನ್ಯ ಉದ್ದುದ್ದದ ಸಾಲಿನಲ್ಲಿ ನಿಲ್ಲಬೇಕಾಗಿ ಬಂದರೆ, ಕೋಟ್ಯಂತರ ರೂ. ಸಾಲ ಮಾಡಿದವರು ವಿದೇಶಗಳಿಗೆ ಪರಾರಿಯಾಗಲು ಅವಕಾಶ ಮಾಡಿಕೊಡಲಾಯಿತು ಎಂದವರು, ಕಂಕೇರ್ ಜಿಲ್ಲೆಯ ಪಾಖಂಜೋರೆ ಎಂಬಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.
ನೋಟುಗಳನ್ನು ರದ್ದುಪಡಿಸಿದಾಗ ನೀವೆಲ್ಲರೂ ಸಾಲುಗಳಲ್ಲಿ ನಿಂತಿದ್ದೀರಿ, ಅಲ್ಲಿ ಕಪ್ಪುಹಣ ಹೊಂದಿದ್ದ ಒಬ್ಬನೂ ಇರಲಿಲ್ಲ. ನಿಮ್ಮ ಹಣವನ್ನು ನೀರವ್ ಮೋದಿ, ಮೆಹುಲ್ ಚೋಕ್ಸಿ, ವಿಜಯ್ ಮಲ್ಯ, ಲಲಿತ್ ಮೋದಿ ಅವರೆಲ್ಲಾ ಕದ್ದು ವಿದೇಶಗಳಿಗೆ ಪರಾರಿಯಾಗುತ್ತಿದ್ದರು ಎಂದೂ ರಾಹುಲ್ ಹೇಳಿದರು.

Leave a Comment