ಛತ್ತೀಸ್‌ಗಡ ೫ ಯೋಜನೆ ಹೆಸರು ಮರು ನಾಮಕರಣ

ರಾಯ್‌ಪುರ್, ಫೆ.೧೨ ಛತ್ತೀಸ್‌ಗಡ ರಾಜ್ಯದ ಕಾಂಗ್ರೆಸ್ ನೇತೃತ್ವದ  ನೂತನ ಸರಕಾರ  ಈ ಹಿಂದಿನ ಬಿಜೆಪಿ ಸರಕಾರ ಆರಂಭಿಸಿದ್ದ ೫ ಯೋಜನೆಗಳ ಹೆಸರುಗಳನ್ನು ಮರು ನಾಮಕರಣ ಮಾಡಿದೆ,

ಜನಸಂಗ್ ನಾಯಕ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಅವರ ಹೆಸರಿನಲ್ಲಿದ್ದ ಯೋಜನೆಗಳಿಗೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಅಂಬೇಡ್ಕರ್ ಹೆಸರಿನಲ್ಲಿ ಮರು ನಾಮಕರಣಮಾಡಿದೆ.  ಛತ್ತಿಸ್‌ಗಡ ಸರಕಾರದ ಈ ಕ್ರಮವನ್ನು ಬಿಜೆಪಿ ಕಟುವಾಗಿ ಟೀಕಿಸಿದೆ.

ಪಂಡಿತ್ ದೀನದಯಾಳ್ ಉಪಾಧ್ಯಾಂii ಸ್ವಾವಲಂಭನ್ ಯೋಜನೆಯನ್ನು ರಾಜೀವ್ ಗಾಂಧಿ ಸ್ವಾವಲಂಬನ್ ಯೋಜನೆ ಎಂದು, ಪಂಡಿತ್ ದೀನದಯಾಳ್ ಉಪಾಧ್ಯಾಯ ಸರ್ವ ಸಮಾಜ್ ಮಂಗಲಿಕ್ ಭವನ್ ಯೋಜನೆಯನ್ನು ಡಾ.ಬಿ.ಆರ್. ಆಂಬೇಡ್ಕರ್ ಸವ್ ಸಮಾಜ್ ಮಂಗಲಿಕ್ ಭವನ್ ಯೋಜನೆ ಎಂದು

ದೀನ್ ದಯಾಳ್ ಉಪಾಧ್ಯಾಯ್ ಪಥ್ ಪ್ರಕಾಶ್ ಯೋಜನೆಯನ್ನು ಇಂದಿರಾ ಪ್ರಿಯದರ್ಶಿನಿ ಪಥ ಪ್ರಕಾಶ್ ಯೋಜನೆ ಹಾಗೂ ಉಪಾಧ್ಯಾಯ ಅವರ ಹೆಸರಿನ

ಇನ್ನೆರಡು ಯೋಜನೆಗಳನ್ನು ರಾಜೀವ್ ಗಾಂಧಿ ಮತ್ತು ಅಂಬೇಡ್ಕರ್ ಹೆಸರಿಗೆ ಮರುನಾಮಕರಣ ಗೊಳಿಸಿ ಛತ್ತಿಸ್‌ಗಡ ಸರಕಾರ ಕಳೆದ ರಾತ್ರಿ ಆದೇಶ ಹೊರಡಿಸಿದೆ.

ಇದಕ್ಕೆ ವಿರೋಧ ವ್ಯಕ್ತ ಪಡಿಸಿರುವ ಬಿಜೆಪಿ “ಇದು ದ್ವೇಷದ ರಾಜಕೀಯ ” ಎಂದಿದೆ.

Leave a Comment