ಚೌಲ್ಟ್ರಿ ಮಂಜ ಸೆರೆ: 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಬೆಂಗಳೂರು, ಅ. ೨೧- ಒಂಟಿ ವೃದ್ಧೆಯರಿಗೆ ಉಚಿತವಾಗಿ ರೇಷನ್ ಕಾರ್ಡ್, ವೃದ್ಧಾಪ್ಯ ವೇತನ ಕೊಡಿಸುವುದಾಗಿ ನಂಬಿಸಿ, ಚಿನ್ನಾಭರಣಗಳನ್ನು ಬಿಚ್ಚಿಸಿಕೊಂಡು ಪರಾರಿಯಾಗುತ್ತಿದ್ದ ಕುಖ್ಯಾತ ಕಳ್ಳ ಚೌಲ್ಟ್ರೀ ಮಂಜ, ಬಾಗಲಗುಂಟೆ ಪೊಲೀಸರಿಗೆ ಸಿಕ್ಕಿದ್ದು ಆತನಿಂದ 30 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹುರುಳಿ ಚಿಕ್ಕನಹಳ್ಳಿಯ ಚೌಲ್ಟ್ರಿ ಮಂಜ ಅಲಿಯಾಸ್ ಮಂಜೇಶ್ (36)ನಿಂದ 30 ಲಕ್ಷ ಮೌಲ್ಯದ 880 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಮೋಜು, ಕುಡಿತ ವೇಶ್ಯೆಯರ ಸಂಗಕ್ಕಾಗಿ 17 ವರ್ಷಗಳಿಂದಲೇ ಕಳ್ಳತನಕ್ಕೆ ಇಳಿದ ಮಂಜೇಶ್ ಇಲ್ಲಿಯವರೆಗೆ 100ಕ್ಕೂ ಹೆಚ್ಚು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಚಿನ್ನಾಭರಣ ಕಳವು ಪ್ರಕರಣದಲ್ಲಿ ಬಂಧಿತನಾಗಿ ಮೈಸೂರಿನ ಜೈಲು ಸೇರಿದ ಆರೋಪಿಯು ಕಳೆದ ಫೆಬ್ರವರಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದು ಮತ್ತೇ ಕಳ್ಳತನಕ್ಕಿಳಿದಿದ್ದ.
ನಗರಕ್ಕೆ ಬಂದಿದ್ದ ಆರೋಪಿಯು ಸ್ಕೂಟರ್‌ನಲ್ಲಿ ಸಂಚರಿಸುತ್ತಾ ಒಂಟಿಯಾಗಿ ಓಡಾಡುವ ವೃದ್ಧೆಯರನ್ನು ಗುರುತಿಸಿ ಅವರನ್ನು ಪರಿಚಯಮಾಡಿಸಿಕೊಂಡು ಉಚಿತವಾಗಿ ರೇಷನ್ ಕಾರ್ಡ್, ವೃದ್ಧಾಪ್ಯ ವೇತನ ಕೊಡಿಸುವುದಾಗಿ ಪರಿಚಯ ಮಾಡಿಕೊಳ್ಳುತ್ತಿದ್ದು ನಂತರ ಅವರ ಮನೆಗೆ ಹೋಗಿ ಮೈಮೇಲೆ ಚಿನ್ನಾಭರಣಗಳು ಇದ್ದರೆ ರೇಷನ್ ಕಾರ್ಡ್ ಉಚಿತ ಕೊಡುವುದಿಲ್ಲ ಎಂದು ಹೇಳಿ ಆಭರಣಗಳನ್ನು ಬಿಚ್ಚಿಸಿ, ಮನೆಯಲ್ಲಿ ಇಟ್ಟು ಬೀಗ ಹಾಕಿಸದೆ ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ ಸ್ವಲ್ಪ ದೂರ ಹೋದ ನಂತರ ರೇಷನ್ ಬಳಿ ಹೆಚ್ಚು ಜನ ಇದ್ದಾರೆ. ಇಲ್ಲಿಯೇ ಕುಳಿತಿರು ಎಂದು ಹೇಳಿ ವಾಪಸ್ ಮನೆಗಹೋಗಿ ಚಿನ್ನಾಭರಣವನ್ನು ದೋಚಿ ಪರಾರಿಯಾಗುತ್ತಿದ್ದ.
ಚೌಲ್ಟ್ರಿ ಮಂಜ ಕುಖ್ಯಾತಿ
ಕಳೆದ ಸೆ. 14 ರಂದು ಬೆಳಿಗ್ಗೆ ಮಲ್ಲಸಂದ್ರದ ಪೈಪ್ ಲೇನ್ ಚನ್ನಮ್ಮ (72) ಎಂಬುವರ ಚಿನ್ನಾಭರಣವನ್ನು ರೇಷನ್ ಕಾರ್ಡ್ ಕೊಡಿಸುವುದಾಗಿ ನಂಬಿಸಿ ಕಳುವು ಮಾಡಿ ಪರಾರಿಯಾಗಿ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸ್ ಇನ್ಸ್‌ಪೆಕ್ಟರ್ ವೆಂಕಟೇಗೌಡ ಅವರು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯು 17ನೇ ವಯಸ್ಸಿದಿಂದ ಕಳ್ಳತನಕ್ಕಿಳಿದಿದ್ದು ಮೊದಲಿಗೆ ಕಲ್ಯಾಣ ಮಂಟಪಗಳಿಗೆ ಮದುವೆ ಗಂಡು, ಹೆಣ್ಣಿನಿ ಸಂಬಂಧಿಕರ ನೆಪದಲ್ಲಿ ಹೋಗಿ ಚಿನ್ನಾಭರಣ ಕಳುವು ಮಾಡುತ್ತಿದ್ದ ಅದರಿಂದಾಗಿಯೇ ಮಂಜೇಶ್ ಆಗಿದ್ದ ಆರೋಪಿಗೆ ಚೌಲ್ಟ್ರಿ ಮಂಜ ಎನ್ನುವ ಕುಖ್ಯಾತಿ ಬಂಧಿತ್ತು ಎಂದು ಶಶಿಕುಮಾರ್ ತಿಳಿಸಿದ್ದಾರೆ.
ಆರ್ ಟಿ ನಗರ ಎರಡು, ಬೇಲೂರು 1, ಹೊಳೇನರಸಿಪುರ, ಮಂಗಳೂರು ದಕ್ಷಿಣ, ಮಣಿಪಾಲ್, ತಾಮ್ಲಗೊಂಡು, ಅಮೃತಹಳ್ಳಿ, ಸೋಲದೇವನಹಳ್ಳಿ, ಬಾಗಲಗುಂಟೆ, ಸೇರಿದಂತೆ ತಲಾ 5 ಮನೆ ಕಳವು 9 ಮೋಸದ ಪ್ರಕರಣಗಳು ಪತ್ತೆಯಾಗಿದೆ. ಇಲ್ಲಿಯವರೆಗೆ ಆರೋಪಿಯು 100ಕ್ಕೂ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಕಂಡು ಬಂದಿದೆ ಎಂದು ಅವರು ತಿಳಿಸಿದರು.

ಹುರುಳಿ ಚಿಕ್ಕನಹಳ್ಳಿಯ ಮಂಜೇಶ್ 17 ವರ್ಷಗಳಿಂದಲೇ ಕಳ್ಳತನಕ್ಕೆ ಇಳಿದಿದ್ದು, ಮಂಜ, ಚೌಲ್ಟ್ರಿ ಮಂಜ, ಹೊಟ್ಟೆ ಮಂಜ, ಇನ್ನಿತರ ಹೆಸರುಗಳಲ್ಲಿ ಪರಿಚಯ ಮಾಡಿಕೊಂಡು ಇಲ್ಲಿಯವರೆಗೆ 100ಕ್ಕೂ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ವಿವಾಹವಾಗದ ಈತ ಮೋಜು, ಕುಡಿತ, ವೇಶ್ಯೆಯ ಸಹವಾಸಕ್ಕಾಗಿ ಕಳ್ಳತನವನ್ನೇ ವೃತ್ತಿಮಾಡಿಕೊಂಡಿದ್ದ. ಮೈಸೂರು, ಮಂಗಳೂರು ಇನ್ನಿತರ ಕಡೆಗಳಲ್ಲಿ ಜೈಲು ವಾಸ ಅನುಭವಿಸಿದ್ದರೂ ಕಳ್ಳತನ ಬಿಡದೆ ಹಳೆ ವೃತ್ತಿಯನ್ನೇ ಮುಂದುವರಿಸಿಕೊಂಡು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ.
ಶಶಿಕುಮಾರ್, ಡಿಸಿಪಿ ಉತ್ತರಹಳ್ಳಿ ವಿಭಾಗ.

Leave a Comment