ಚೌಡಮ್ಮದೇವಿ ಜಾತ್ರಾ ಮಹೋತ್ಸವ

ಹುಳಿಯಾರು, ಮೇ ೧೯- ಪಟ್ಟಣದ ವಸಂತನಗರದ ಕೆರೆ ಕೋಡಿಯಲ್ಲಿ ನೆಲೆಸಿರುವ ಶ್ರೀ ಚೌಡಮ್ಮನವರ 7ನೇ ವರ್ಷದ ಜಾತ್ರಾ ಮಹೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಜಾತ್ರೆಯ ಅಂಗವಾಗಿ ಅಮ್ಮನವರಿಗೆ ಅಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ನೆರವೇರಿಸಿ ಕಳಸೋತ್ಸವ ನಡೆಸಲಾಯಿತು. ನಂತರ ಪಾನಕ ಫಲಹಾರ ವಿತರಿಸಲಾಯಿತು.

ಜಾತ್ರಾ ಮಹೋತ್ಸವದಲ್ಲಿ ವಸಂತನಗರ, ಕೇಶವಾಪುರ, ತಿಪಟೂರು ರಸ್ತೆ ಹಾಗೂ ಕೆರೆ ಕೋಡಿಯ ಅಪಾರ ಸಂಖ್ಯೆಯ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

Leave a Comment