‘ಚೌಕ’ ಆಟ ಶುರು

ದ್ವಾರಕೀಶ್ ನಿರ್ಮಾಣ ಸಂಸ್ಥೆಯ ೫೦ನೇ ಚಿತ್ರ ಎಂಬುದೂ ಸೇರಿದಂತೆ ಹಲವಾರು ಕಾರಣಗಳಿಂದ ಕುತೂಹಲ ಹುಟ್ಟಿಸಿರುವ ಚಿತ್ರ ‘ಚೌಕ’.  ಹೊಸಾ ವರ್ಷದ ಹೊಸ್ತಿಲಲ್ಲಿ ಚಿತ್ರೀಕರಣ ಮುಗಿಸಿಕೊಂಡಿದೆ.

ಇದೇ ಜನವರಿ ತಿಂಗಳ ೧೯ನೇ ತಾರೀಕಿನಂದು ಬಿಡುಗಡೆ ಮಾಡಲೂ ಚಿತ್ರ ತಂಡ ಬಿರುಸಿನಿಂದ ತಯಾರಿ ಮಾಡಿಕೊಳ್ಳುತ್ತಿದೆ. ಈ ಚಿತ್ರದ ಪ್ರಥಮ ಪ್ರತಿಯ ಕೆಲಸಗಳೂ ಕೂಡಾ ಮುಕ್ತಾಯದ ಹಂತದಲ್ಲಿವೆ.

ಚೌಕ ಒಂದು ಅಪರೂಪದ ಮಲ್ಟಿಸ್ಟಾರ್ ಚಿತ್ರವಾಗಿದ್ದು ಇದುವರೆಗೂ ಅಣ್ಣ ನಂದಕಿಶೋರ್ ನಿರ್ದೇಶನದ ಚಿತ್ರಗಳಲ್ಲಿ ಅನುಭವ ಪಡೆದುಕೊಂಡಿದ್ದ ತರುಣ್ ಸುಧೀರ್ ನಿರ್ದೇಶನದ ಮೊದಲ ಚಿತ್ರವಿದು. ಪ್ರೇಮ್, ದಿಗಂತ್, ಪ್ರಜ್ವಲ್ ದೇವರಾಜ್ ಹಾಗೂ ವಿಜಯರಾಘವೇಂದ್ರ  ನಾಯಕರುಗಳಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರತಂಡ ಪ್ರತಿಯೊಂದರಲ್ಲಿಯೂ ಒಂದಿಲ್ಲೊಂದು ವಿಶೇಷತೆ, ವಿಭಿನ್ನತೆಯನ್ನು ಪ್ರದರ್ಶಿಸುತ್ತಲೇ ಬಂದಿದೆ. ಅದೆಲ್ಲದರಿಂದಲೂ ಸದಾ ಚಾಲ್ತಿಯಲ್ಲಿರುವ ಚೌಕ, ಇದೀಗ ಭಾರೀ ಸದ್ದು ಮಾಡುತ್ತಿರೋದು ಹಾಡುಗಳಿಂದ. ಈಗಾಗಲೇ ಯೋಗರಾಜ ಭಟ್ ಬರೆದಿರುವ ಅಲ್ಲಾಡ್ಸು ಅಲ್ಲಾಡ್ಸು ಹಾಡು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಅದಾದ ಬಳಿಕ ಬಿಡುಗಡೆಯಾದ ‘ಅಪ್ಪ ಐ ಲವ್ ಯೂ ಪಾ’ ಹಾಡು ಎಲ್ಲರ ಕಣ್ಣಾಲಿಗಳನ್ನೂ ತೇವಗೊಳಿಸುವಲ್ಲಿ ಯಶ ಕಂಡಿದೆ.

ಅಪ್ಪನ ಬಗ್ಗೆ ವಿ ನಾಗೇಂದ್ರ ಪ್ರಸಾದ್ ಬರೆದಿರುವ ಭಾವುಕ ಹಾಡನ್ನು ರಕ್ಷಿತ, ಅಮೂಲ್ಯ, ಶ್ರುತಿ, ಶ್ರುತಿ ಹರಿಹರನ್, ತಾರಾ, ಸುಧಾರಾಣಿ. ಭಾವನ  ಮುಂತಾದ ನಟಿಯರು ಕೇಳಿ ಥ್ರಿಲ್ ಆಗಿದ್ದಾರೆ. ಹಾಡುಗಳ ಮೂಲಕವೂ ಕುತೂಹಲ ಹುಟ್ಟಿಸಿರುವ ಚೌಕ ಚಿತ್ರದ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗಿದೆ.

ಕೃಷ್ಣ, ಸತ್ಯ ಹೆಗ್ಡೆ, ಸಂತೋಷ್ ರೈ ಪತಾಜೆ, ಶೇಖರ್ ಚಂದ್ರು, ಸುಧಾಕರ್ ಎಸ್ ರಾಜ್ ಛಾಯಾಗ್ರಹಣ, ಅರ್ಜುನ್ ಜನ್ಯ, ಹರಿಕೃಷ್ಣ, ವಿ.ಶ್ರೀಧರ್, ಅನೂಪ್ ಸೀಳಿನ್, ಗುರುಕಿರಣ್ ಸಂಗೀತ ನಿರ್ದೇಶನ, ಯೋಗಾನಂದ್ ಮುದ್ದಾನ್, ಎ.ಪಿ.ಅರ್ಜುನ್, ಸುನಿ, ಅನಿಲ್ ಕುಮಾರ್, ಚಿಂತನ್ ಸಂಭಾಷಣೆ ಹಾಗೂ ಶಿವಕುಮಾರ್, ಮೋಹನ್ ಬಿ ಕೆರೆ, ಅರುಣ್ ಸಾಗರ್, ರವಿ ಸಂತೆಹಕ್ಲು, ಹೊಸ್ಮನೆ ಮೂರ್ತಿ ಅವರ ಕಲಾ ನಿರ್ದೇಶನವಿದೆ.

Leave a Comment