ಚೈಯ್ಯ ಚೈಯ್ಯಗೆ ೨೦ ಸಂಭ್ರಮದಲ್ಲಿ ಮಲ್ಲಿಕಾ ಅರೋರಾ

ದಿಲ್‌ಸೇ ಚಿತ್ರದಲ್ಲಿ ಮಲ್ಲಿಕಾ ಅರೋರಾ ಖಾನ್, ಚಲಿಸುವ ರೈಲಿನ ಮೇಲೆ ಹಾಡಿ ಕುಣಿದು ಕುಪ್ಪಳಿಸುವ ’ಚೈಯ್ಯ ಚೈಯ್ಯ’ ಹಾಡಿಗೆ ಇಪ್ಪತ್ತು ವರ್ಷ ಸಂದಿದೆ. ಈ ಹಿನ್ನೆಲೆಯಲ್ಲಿ ಖುಷಿ ಹಂಚಿಕೊಂಡಿದ್ದಾರೆ ಮಲ್ಲಿಕಾ..

ಎರಡು ದಶಕಗಳ ಹಿಂದೆ ತೆರೆಗೆ ಬಂದಿದ್ದ ’ಮಣಿರತ್ನಂ’ ನಿರ್ದೇಶನ ’ದಿಲ್‌ಸೇ’ ಚಿತ್ರ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯೇ ಉಳಿದಿದೆ. ಅದಕ್ಕೆ ಕಾರಣ ಹಲವು.

ಅದರಲ್ಲಿಯೂ ಮಲ್ಲಿಕಾ ಅರೋರಾ ಖಾನ್ ಚಲಿಸುವ ರೈಲಿನ ಮೇಲೆ ಮೈ ಚಳಿ ಬಿಟ್ಟು ನಟಿಸಿದ್ದ ’ಚೆಯ್ಯ ಚೆಯ್ಯ’ ಐಟಂ ಹಾಡು ಚಿತ್ರ ಬಿಡುಗಡೆಯಾದ ದಿನ ಬೆಳಗಾಗುವುದರಲ್ಲಿ ಯಶಸ್ವಿಯಾಗಿತ್ತು.ಅಲ್ಲದೆ ಇಡೀ ತಂಡಕ್ಕೆ ಯಶಸ್ಸಿನ ಕಿರೀಟ ತಂದುಕೊಟ್ಟಿತ್ತು.
ಚಿತ್ರ ಹಾಡಿಗೆ ಸುಖವೀಂದರ್ ಸಿಂಗ್ ಮೋಡಿ ಮಾಡಿದ ಧ್ವನಿ, ಶಾರುಖ್ ಖಾನ್ ಚಾರ್ಮ್,ಮಲ್ಲಿಕಾ ಅರೋರಾ ಖಾನ್ ಕುಣಿದ ಭಾವ ಭಂಗಿ, ಫರ್‍ಹಾ ಖಾನ್ ಚಲಿಸುವ ರೈಲಿನ ಮೇಲೆ ನೃತ್ಯ ಮಾಡಿಸುವ ನಿರ್ಧಾರ ತೆಗೆದುಕೊಂಡ ರೀತಿ ಎಲ್ಲವೂ ಚಿತ್ರಕ್ಕೆ ಫ್ಲಸ್ ಪಾಯಿಂಟ್ ಆಗಿತ್ತು.
೧೯೯೮ರಲ್ಲಿ ದಿಲ್‌ಸೇ ಚಿತ್ರ ತೆರೆಗೆ ಬಂದು ಈಗ ೨೦ ವರ್ಷ ಕಳೆದಿದೆ. ’ಚೆಯ್ಯ ಚೆಯ್ಯ’ ಹಾಡನ್ನು ಮಾಂತ್ರಿಕ ಸಂಗೀತ ಸಂಯೋಜಕ ಎ.ಆರ್ ರೆಹಮಾನ್ ಹಿಂದಿ ಚಿತ್ರಕ್ಕಾಗಿ ’ಥಯ್ಯ, ಥಯ್ಯ’ವಾಗಿ ಪರಿವರ್ತಿಸಿದ್ದರು.
ಈ ಸಂದರ್ಭದಲ್ಲಿ ತಮ್ಮ ನೆಚ್ಚಿನ ಹಾಡಿನ ಬಗ್ಗೆ ಮಲ್ಲಿಕಾ ಅರೋರಾ ಖಾನ್ ನೆನಪು ಮಾಡಿಕೊಂಡು ಅದರ ಖುಷಿಯನ್ನು ಅಭಿಮಾನಿಗಳಿಗೂ ಹಂಚುವ ರೀತಿ. ಹಾಡಿನ ತುಣುಕು, ಹಾಗೂ ಪೋಟೋಗಳನ್ನು ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.
ಮಲ್ಲಿಕಾ ಅರೋರಾ ಖಾನ್ ಅವರು ಯಾವಾಗ ಪೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಮಹಾಪೂರವೇ ಹರಿದು ಬಂದಿದೆ.ಇದರಿಂದ ಮಲ್ಲಿಕಾ ಮತ್ತಷ್ಟು ಕುಣಿದು ಕುಪ್ಪಳಿಸಿದ್ದಾರೆ. ಇಪ್ಪತ್ತು ವರ್ಷಗಳ ಹಿಂದೆ ತೆರೆಗೆ ಬಂದಿದ್ದ ಹಾಡು ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ ಎನ್ನುವುದಕ್ಕೆ ಅದರ ಖ್ಯಾತಿ ಬಿಂಬಿಸುತ್ತದೆ ಎಂದು ಮೆಚ್ಚುಗೆಯ ಮಾತನಾಡಿದ್ದಾರೆ.
ಬ್ರಿಟೀಷ್ ಬ್ರಾಡ್ ಕಾಸ್ಟಿಂಗ್ ಕಾರ್ಪರೇಷನ್ ನಡೆಸಿದ ಅಂತರಾಷ್ಟರೀಯ ಹಾಡಿನ ಸಮೀಕ್ಷೆಯಲ್ಲಿ ವಿಶ್ವದ ಹಾಡುಗಳ ಪೈಕಿ ಚೈಯ್ಯ ಚೈಯ್ಯ ಹಾಡು ಟಾಪ್ ಹತ್ತರಲ್ಲಿ ಒಂದು ಎನ್ನುವ ಸ್ಥಾನ ಪಡೆದಿದೆ. ಇದು ಸಹಜವಾಗಿ ಇಡೀ ತಂಡಕ್ಕೆ ಸಂದ ಗೌರವವಾಗಿದೆ.
ಅದರಲ್ಲಿಯೂ ಚಲಿಸುವ ರೈಲಿನಲ್ಲಿ ಹಾಡಿ ಕುಣಿದ ಮಲ್ಲಿಕಾ ಅರೋರಾ ಖಾನ್, ಶಾರುಖ್ ಖಾನ್ ಮತ್ತು ನೃತ್ಯ ನಿರ್ದೇಶಕಿ ಫರ್‍ಹಾ ಖಾನ್ ಶ್ರಮ ಎದ್ದು ಕಾಣುತ್ತಿದೆ.
ಸದ್ಯ ಮಲ್ಲಿಕಾ ಅರೋರಾ ಖಾನ್, ಹಲೋ ಹಲೋ ಹಾಡಿನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಹಾಡಿಗೆ ರೇಖಾ ಭಾರಧ್ವಜ್ ಗೀತೆಗೆ ಧ್ವನಿಯಾಗಿದ್ದು ಗುಲ್ಜಾರ್ ಗೀತರಚನೆ ಮಾಡಿದ್ದಾರೆ. ವಿಶಾಲ್ ಭಾರಧ್ವಜ್ ಸಂಗೀತ ಮತ್ತು ಗಣೇಶ್ ಆಚಾರ್ಯ ನೃತ್ಯ ನಿರ್ದೇಶನ ಮಾಡಿದ್ದಾರೆ.

 

 

Leave a Comment