ಚೆಸ್ ಪಂದ್ಯಾವಳಿ: ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ

ರಾಯಚೂರು.ನ.06- ತಾರಾನಾಥ ಶಿಕ್ಷಣ ಸಂಸ್ಥೆಯ ಎಲ್‌ವಿಡಿ ಮಹಾವಿದ್ಯಾಲಯದ ಚೆಸ್ ಕ್ರೀಡಾಪಟುಗಳು ಗುಲ್ಬರ್ಗಾ ವಿಶ್ವವಿದ್ಯಾಲಯದ ಪುರುಷ ಮತ್ತು ಮಹಿಳೆಯರ ಚೆಸ್ ಆಯ್ಕೆ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನೆ ನೀಡಿ ಗುಲ್ಬರ್ಗಾ ವಿವಿ ತಂಡಕ್ಕೆ ಆಯ್ಕೆಯಾಗಿರುತ್ತಾರೆ.
ಇತ್ತೀಚಿಗೆ ನಡೆದ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯಗಳ ಪುರುಷರ ಚೆಸ್ ಪಂದ್ಯಾವಳಿಯೂ ಕೊಯ್ಯುಂಬತ್ತೂರಿನ ಕೆಪಿಆರ್ ಇನ್ಸ್‌ಟ್ಯೂಟ್ ಆಫ್ ಇಂಜಿಯರಿಂಗ್ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ನಡೆಯಿತು. ಬಿಎಸ್ಇ ಅಂತಿಮ ವರ್ಷದ ಜಿ.ಶರತ್ ಕುಮಾರ ಪ್ರಥಮ, ಬಿಎಸ್ಇ ದ್ವಿತೀಯ ವರ್ಷದ ಗಿರೀಶ್ ದ್ವಿತೀಯ ಸ್ಥಾನ ಪಡೆದು ಗುಲ್ಬರ್ಗಾ ವಿವಿ ಪುರುಷರ ಚೆಸ್ ತಂಡದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ತಮಿಳುನಾಡಿನ ಸವಿತಾ ವಿಶ್ವವಿದ್ಯಾಲಯದಲ್ಲಿ ನಡೆದ ದಕ್ಷಿಣ ವಲಯ ಮಹಿಳೆಯರ ಚೆಸ್ ಅಂತರ್ ವಿಶ್ವವಿದ್ಯಾಲಯದಲ್ಲಿ ಬಿಎಸ್ಇ ಪ್ರಥಮ ವರ್ಷದ ಪೂಜಾ ಯಾದವ್ ಪ್ರಥಮ ಸ್ಥಾನ ಹಾಗೂ ಪ್ರಸನ್ನ ಲಕ್ಷ್ಮಿ ಯಾದವ್ ಸ್ಥಾನ ಪಡೆದು, ಈ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ದೈಹಿಕ ನಿರ್ದೇಶಕ ರಂಗನಾಥ ಅವರ ಸಾಧನೆ ಮೆಚ್ಚಿ ಸಂಸ್ಥೆ ಅಧ್ಯಕ್ಷರಾದ ಪಾರಸಮಲ್ ಸುಖಾಣಿ, ಪ್ರಧಾನ ಕಾರ್ಯದರ್ಶಿ ಮಸ್ಕಿ ನಾಗರಾಜ ವಕೀಲರು, ಸದಸ್ಯರು, ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷರಾದ ನಂದಾಪೂರ ಶ್ರೀನಿವಾಸರಾವ್, ಕಾರ್ಯದರ್ಶಿಗಳಾದ ಜಟ್ರಂ ಶ್ರೀನಿವಾಸ, ಪ್ರಾಂಶುಪಾಲರಾದ ಡಾ.ಎಸ್.ಎಂ.ಖೇಣದ್, ಉಪ ಪ್ರಾಂಶುಪಾಲರಾದ ಡಾ.ವೆಂಕಟೇಶ, ಚಂದ್ರಕಾಂತ ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.

Leave a Comment