ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಕೊಚ್ಚಿವರೆಗೆ ವಿಸ್ತರಣೆ

ತಿರುವನಂತಪುರ, ಸೆ 19 -ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್‌ ಅನ್ನು ಕೊಯಮತ್ತೂರು ಮಾರ್ಗವಾಗಿ ಕೇರಳದ ಕೊಚ್ಚಿವರೆಗೆ ವಿಸ್ತರಿಸಲಾಗುತ್ತದೆ.

ಇದರಿಂದ ಕೇರಳದಲ್ಲಿ ಉತ್ಪಾದನಾ ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚಿನ ಅವಕಾಶ ದೊರೆಯಲಿದೆ.

ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಮತ್ತು ಅನುಷ್ಠಾನ ಟ್ರಸ್ಟ್ (ಎನ್‌ಐಸಿಡಿಐಟಿ) ಈ ವಿಷಯದಲ್ಲಿ ಕೇಂದ್ರದ ನಿರ್ಧಾರವನ್ನು ರಾಜ್ಯ ಸರ್ಕಾರಕ್ಕೆ ತಿಳಿಸಿದೆ ಎಂದು ಮುಖ್ಯಮಂತ್ರಿ ಕಚೇರಿಯ ಹೇಳಿಕೆಯನ್ನು ಉಲ್ಲೇಖಿಸಿ ಮೂಲಗಳು ತಿಳಿಸಿವೆ.

ಕಾರಿಡಾರ್‌ನ ಭಾಗವಾಗಿ, ಪಾಲಕ್ಕಾಡ್ ಮತ್ತು ಸೇಲಂನಲ್ಲಿ ಎರಡು ಇಂಟಿಗ್ರೇಟೆಡ್ ಉತ್ಪಾದನಾ ಕ್ಲಸ್ಟರ್‌ಗಳು (ಐಎಂಸಿ) ಅಸ್ತಿತ್ವಕ್ಕೆ ಬರಲಿವೆ, ಅದು 10,000 ಕೋಟಿ ರೂ.ಗಳ ಹೂಡಿಕೆಯನ್ನು ಆಕರ್ಷಿಸುತ್ತದೆ ಮತ್ತು ಸಾವಿರಾರು ಉದ್ಯೋಗಗಳನ್ನು ಒದಗಿಸಲಿದೆ.

ಐಎಂಸಿ ನಡೆಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಂಟಿಯಾಗಿ ವಿಶೇಷ ಉದ್ದೇಶಕ ವಾಹಕ (ಎಸ್‌ಪಿವಿ) ಸ್ಥಾಪಿಸಲಿವೆ. ಈ ಯೋಜನೆಗಾಗಿ ಕೇಂದ್ರ ಸರ್ಕಾರ 870 ಕೋಟಿ ರೂ. ಹೂಡಿಕೆ ಮಾಡಲಿದ್ದು, ಭೂಮಿಯ ಖರ್ಚನ್ನು ರಾಜ್ಯ ಸರ್ಕಾರ ಭರಿಸಲಿದೆ.

ಐಎಂಸಿ ಸ್ಥಾಪಿಸಲು 2000 ರಿಂದ 5000 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಈ ಹಿಂದೆ ಕೇಂದ್ರ ಸರ್ಕಾರ ಸೂಚಿಸಿತ್ತು. ಆದರೆ, ಅಷ್ಟು ಭೂಮಿಯನ್ನು ಒದಗಿಸಲು ರಾಜ್ಯ ಸರ್ಕಾರ ಹಿಂದೇಟು ಹಾಕಿತ್ತು.  ಈಗ ಅದನ್ನು 1,800 ಎಕರೆಗೆ ಇಳಿಸಲು ಕೇಂದ್ರಕ್ಕೆ ಮತ್ತೊಮ್ಮೆ ರಾಜ್ಯ ಸರ್ಕಾರ ಮನವಿ ಮಾಡಿದೆ.

ಪಾಲಕ್ಕಾಡ್, ಕಣ್ಣಂಪರ, ಉಜಲಪತಿ, ಪುದುಚೇರಿಯಲ್ಲಿ ಜಮೀನನ್ನು ರಾಜ್ಯ ಸರ್ಕಾರ ಈಗಾಗಲೇ ಗುರುತಿಸಿದೆ. ಕಾರಿಡಾರ್ ಕೊಚ್ಚಿ-ಪಾಲಕ್ಕಾಡ್ ಪ್ರದೇಶವನ್ನು ಕೇರಳದ ತಯಾರಿಕಾ ಕೈಗಾರಿಕಾ ಕೇಂದ್ರವನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ಮುಂದಾಗಿದೆ.

Leave a Comment