ಚೆನ್ನಪಟ್ಟಣದ ಗೊಂಬೆ ಹಾಡಿಗೂ ಸೈ ಜೂರಿಗೂ ಜೈ

* ಚಿಕ್ಕನೆಟಕುಂಟೆ ಜಿ.ರಮೇಶ್

ಚಿತ್ರವೊಂದರ ತಯಾರಿಕೆ ಅಥವಾ ಅದರ ಯಶಸ್ಸು ನಾಯಕ,ನಿರ್ದೇಶಕ, ಸಂಗೀತ ನಿರ್ದೇಶಕರಷ್ಟೇ ಪಾಲು ಹಾಡುಗಾರದ್ದೂ ಕೂಡ. ಸಿನಿಮಾದ ಕೆಲಸ ಸಂಘಟಿತ ಪ್ರಯತ್ನ, ಚಿತ್ರದ ಯಶ್ಸಸ್ಸಿನಲ್ಲಿ ಇಡೀ ತಂಡದ ಶ್ರಮ.

ಚಿತ್ರಮಂದಿರಕ್ಕೆ ಜನರನ್ನು ಕರೆತರುವಲ್ಲಿ ಹಾಡುಗಳು ಇನ್ವಿಟೇಶನ್ ಇದ್ದಹಾಗೆ. ಹಾಡುಗಳು ಹಿಟ್ ಆದರೆ ಬಹುತೇಕ ಸಿನಿಮಾ ಅರ್ದ ಗೆದ್ದಂತೆ.. ಎಲೆ ಮರೆಯ ಕಾಯಿಯಂತೆ ಇರುವ ಅನೇಕ ಪ್ರತಿಭೆಗಳು ಇದ್ದಾರೆ. ಅವರ ಪೈಕಿ ಗಾಯಕಿ ಶಶಿಕಲಾ ಸುನೀಲ್ ಕೂಡ ಒಬ್ಬರು.

shashikala2
ನಟ ಉಪೇಂದ್ರ ಅಭಿನಯದ “ಪರೋಡಿ” ಚಿತ್ರದಲ್ಲಿ ಟ್ರಾಕ್ ಹಾಡಲು ಬಂದ ಹುಡುಗಿ ಚಿತ್ರರಂಗದಲ್ಲಿ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಇದುವರಗೂ ನೂರಕ್ಕೂ ಹೆಚ್ಚು ಚಿತ್ರಗಳಿಗೆ ಹಾಡಿನ ಧ್ವನಿಯಾಗಿದ್ದಾರೆ. ಒಂದೊಳ್ಳೆ ಬ್ರೇಕ್‌ಗಾಗಿ ಎದುರು ನೋಡಿತ್ತಿದ್ದಾರೆ. ಹಾಗಂತ ಹಾಡುವುದನ್ನು ಬಿಟ್ಟಿಲ್ಲ. ಸಿಕ್ಕ ಯಾವುದೇ ಹಾಡಿರಲಿ ಅದಕ್ಕೆ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಇದರಲ್ಲಿ ಹಲವು ಚಿತ್ರಗಳಲ್ಲಿನ ಹಾಡಿಗೆ ಪ್ರಶಂಸೆಯ ಸುರಿಮಳೆಯೇ ಸಿಕ್ಕಿದೆ.

ಅದಕ್ಕೆ ಉದಾಹರಣೆ ಇತ್ತೀಚೆಗೆ ತೆರೆ ಕಂಡ ಮನೋಮೂರ್ತಿ ಸಂಗೀತ ನಿರ್ದೇಶನದ “ಸವರ್ಣದೀರ್ಘ ಸಂಧಿ ” ಚಿತ್ರದ ಚೇಸಿಂಗ್ ಹಾಡು “ದೂರ ದಾಹಿಯಾ” ಹೆಚ್ಚು ಜನಪ್ರಿಯತೆ ತಂದುಕೊಟ್ಟಿದೆ.

ಸಿನಿಮಾದ ಜೊತೆ ಜೊತೆಗೆ ಜೀ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಸಂಗೀತ ಕಾರ್ಯಕ್ರಮದಲ್ಲಿ ಕಳೆದ ಐದು ಆವೃತ್ತಿಗಳಲ್ಲಿ ಜೂರಿ ಯಾಗಿ ಕೆಲಸ ಮಾಡಿ ಸ್ಪರ್ಧಿಗಳನ್ನು ತಿದ್ದುವ ಮತ್ತು ಸಲಹೆ ಸಹಕಾರ ನೀಡಿತ್ತಾ ಬಂದಿದ್ದಾರೆ.

ಬಿಡುಗಡೆಗೆ ಸಜ್ಜಾಗಿರುವ “ಖುಲಾಲ್” ಚಿತ್ರದಲ್ಲಿ ಹಾಡು ಹಾಡಿದ್ದಾರೆ. ಚಿತ್ರದ ಪತ್ರಿಕಾಗೋಷ್ಠಿಯ ವೇಳೆ ಮಾತಿಗೆ ಸಿಕ್ಕ ಶಶಿಕಲಾ ಸುನೀಲ್ ತಮ್ನ ಸಿನಿಮಾ ರಂಗದಲ್ಲಿನ ಗಾನ ಯಾನದ ಬಗ್ಗೆ ಮಾಹಿತಿ ಹಂಚಿಕೊಂಡರು.

ಹಿಂದೂಸ್ತಾನಿ, ಕರ್ನಾಟಿಕ್ ಸಂಗೀತ ಕಲಿತಿದ್ದೇನೆ. ೨೦೦೩ ಎಂ.ಎಸ್‌ಐಎಲ್ ನಿತ್ಯೋತ್ಸವ, ೨೦೦೪ರಲ್ಲಿ ಎಸ್.ಪಿ ಬಾಲಸುಬ್ರಮಣ್ಯ ಅವರ ನೇತೃತ್ವದಲ್ಲಿ ಅನ್ವೇಷಣಾ ಗಾಯಕಿಯರು ತಂಡದಲ್ಲಿ ಹಾಡಿದ್ದೇನೆ.

shashikala3

ಮೊದಲು ಪರೋಡಿ ಚಿತ್ರದಲ್ಲಿ ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಹಾಡಲು ಅವಕಾಶ ನೀಡಿದರು ಅಲ್ಲಿಂದ ಇಲ್ಲಿಯವರೆಗೆ ತಿರುಗಿ ನೋಡಿಲ್ಲ. ಹಾಡಿನ ಗಾನ ಯಾನ ಮುಂದುವರಿದಿದೆ. ಸಿನಿಮಾದಲ್ಲಿ ಬಹುದೊಡ್ಡ ಗಾಯಕಿಯಾಗಿ ಗುರುತಿಸಿಕೊಳ್ಳುವ ಹಂಬಲವಿದೆ.

ಪರೋಡಿ ಹಾಡಿಗೂ ಮುನ್ನ ಯಾವುದೇ ಟ್ರಾಕ್ ಹಾಡಿರಲಿಲ್ಲ.ಈಗ ಟ್ರಾಕ್ ಹಾಗು ಹಾಡುಗಳನ್ನು ಹಾಡುತ್ತೇನೆ.ಜೀ ವಾಹಿನಿಯಲ್ಲಿ ೧೫ ಜನ ಜೂರಿ ಸದಸ್ಯೆಯಾಗಿ ಕೆಲಸ ಮಾಡುತ್ತಿದ್ದೇನೆ. ಸ್ಪರ್ಧಿಗಳಿಗೆ ಸಲಹೆ ನೀಡುತ್ತೇವೆ. ಸಮಯದ ಅಭಾವದಿಂದ ಅದು ಪ್ರಸಾರವಾಗುವುದಿಲ್ಲ. ನಾವು ಬರೀ ಅಂಕ ಕೊಡುವುದು ಎಲ್ಲರಿಗೂ ಕಾಣಿಸುತ್ತದೆ. ಸುಚೇತನ್ ಎಲ್ಲರಿಗೂ ತರಬೇತಿ ನೀಡುತ್ತಾರೆ. ತಪ್ಪು ಹಾಡಿದಾಗ ತಿದ್ದು ಕೆಲಸ ನಮ್ಮದು ಎನ್ನುತ್ತಾರೆ ಶಶಿಕಲಾ.

ಬಾಕ್ಸ್

ಮೂಲತಃ ಚನ್ನಪಟ್ಟಣದವರಾದ ಶಶಿಕಲಾ ಸುನೀಲ್ ಮದುವೆಯಾದ ನಂತರ ಬೆಂಗಳೂರಿನಲ್ಲಿ ನೆಲೆಗೊಂಡಿದ್ದಾರೆ. ಪಂಡಿತ್ ಬಿನ್ ನಾಗರಾಜ್ ಅವರ ಬಳಿ ಹಿಂದೂಸ್ತಾನಿ ಸಂಗೀತ ಹಾಗು ಹಿರಿಯ ಗಾಯಕಿ ಬಿ.ಕೆ ಸುಮಿತ್ರಾ ಅವರಿಂದ ಲಘು ಸಂಗೀತ ಕಲಿತುಕೊಂಡಿದ್ದಾರೆ.

Leave a Comment