ಚೆಂಡು ಹೂವಿನಲ್ಲಿದೆ ಮದ್ದು

ಚೆಂಡು ಹೂವು  ಅಲಂಕಾರಕ್ಕೆ ಬಳಕೆ ಮಾಡಲಾಗುವ ಹೂವು ಅಷ್ಟೇ ಎಂದು ನೀವು ಅಂದುಕೊಂಡಿರಬಹುದು, ಆದರೆ ಇದರಿಂದ ಆರೋಗ್ಯಕ್ಕೆ ಹಲವಾರು ಲಾಭಗಳು ಇವೆ.

ಇದರಿಂದ ಮಾಡಿದ ಪೇಸ್ಟ್‌ನ್ನು ಸನ್‌ಬರ್ನ್, ಮೊಡವೆ, ಕಲೆ, ಸ್ಕಿನ್, ಡ್ರೈ ಸ್ಕಿನ್ ಮೊದಲಾದ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.

ಈ ಹೂವಿನ ಎಣ್ಣೆ ಅಥವಾ ಅದರ ರಸ ಬೆರೆಸಿ ಗಾಯದ ಮೇಲೆ ಹಚ್ಚಿದರೆ ಗಾಯ ಬೇಗನೆ ನಿವಾರಣೆಯಾಗುತ್ತದೆ. ಇದರಿಂದ ಯಾವುದೆ ರೀತಿಯ ಸಮಸ್ಯೆ ಕೂಡ ಆಗೋದಿಲ್ಲ.

ಹೌದು ಇದರಿಂದ ಹಲ್ಲುಗಳ ಹೊಳಪು ಹೆಚ್ಚುತ್ತದೆ. ಹಲ್ಲಿನಲ್ಲಿ ಸೇರಿಕೊಂಡಿರುವ ಬ್ಯಾಕ್ಟೀರಿಯಾಗಳನ್ನು ಇದು ನಾಶ ಮಾಡುತ್ತದೆ. ಅದಕ್ಕಾಗಿ ನೀವು ಚೆಂಡು ಹೂವಿನ ಟಿಂಚರ್ ಬಳಕೆ ಮಾಡಿ ಬಾಯಿ ಮುಕ್ಕಳಿಸಬೇಕು.

ಚೆಂಡುಹೂವನ್ನು ಹಾಕಿಟ್ಟ ನೀರನ್ನು ಪ್ರತಿದಿನ ಸೇವನೆ ಮಾಡಿದರೆ ಹೊಟ್ಟೆಯಲ್ಲಿನ ಹುಳುಗಳ ಸಮಸ್ಯೆ ನಿವಾರಣೆಯಾಗುತ್ತದೆ.

ಪಿರಿಯಡ್ಸ್ ಸಮಯದಲ್ಲಿ ಮಹಿಳೆಯರಲ್ಲಿ ಉಂಟಾಗುವ ನೋವು, ಸೆಳೆತವನ್ನು ಈ ಹೂವು ನಿವಾರಣೆ ಮಾಡುತ್ತದೆ. ಈ ಹೂವನ್ನು ಒಣಗಿಸಿ ತಯಾರಿಸಿದಂತಹ ಚಹಾವನ್ನು ಸೇವನೆ ಮಾಡುವುದರಿಂದ ಮಸಲ್ಸ್‌ಗಳು ರಿಲ್ಯಾಕ್ಸ್ ಆಗಿ ನೋವು ನಿವಾರಣೆಯಾಗುತ್ತದೆ.

Leave a Comment