ಚುಟ್ಟಾ ಆಕಾರದ ಕ್ಷುದ್ರಗ್ರಹ ಪತ್ತೆ

ಮೊಟ್ಟ ಮೊದಲ ಬಾರಿಗೆ ಖಗೋಳ ವಿಜ್ಞಾನಿಗಳು ಚುಟ್ಟಾ (ಸಿಗಾರ್) ಆಕಾರದ ಕ್ಷುದ್ರಗ್ರಹವೊಂದನ್ನು ಪತ್ತೆಹಚ್ಚಿದ್ದಾರೆ.
ಸೌರಮಂಡಲದ ಆಚೆಯಿಂದ ನಮ್ಮ ಸೌರಮಂಡಲಕ್ಕೆ ಆಗಮಿಸಿ, ವೇಗವಾಗಿ ಚಲಿಸುತ್ತಿರುವ ಈ ಕ್ಷುದ್ರಗ್ರಹವನ್ನು ಕಳೆದ ತಿಂಗಳೇ ವಿಜ್ಞಾನಿಗಳು ಗಮನಿಸಿದ್ದು, ಇದರ ವಿಚಿತ್ರ ಆಕಾರಕ್ಕೆ ಕುತೂಹಲಗೊಂಡಿದ್ದಾರೆ.
ಸಾಮಾನ್ಯವಾಗಿ ಕ್ಷುದ್ರಗ್ರಹಗಳು ಅರೆಬರೆ ವೃತ್ತಾಕಾರಕ್ಕೆ ಬದಲಾಗಿ, ಇದು ಬಾರೀ ಉದ್ದವಾಗಿ ಹಾಗೂ ಉದ್ದಕ್ಕೆ ಹೋಲಿಸಿದರೆ ಅಗಲ ಬಾರೀ ಕಡಿಮೆ. ಇದು ಸಿಗಾರ್ ಆಕಾರದಲ್ಲಿದ್ದದ್ದೇ ಕುತೂಹಲಕ್ಕೆ ಕಾರಣವಾಗಿದೆ ಎಂದು ಹಲಾಯನ್‌ನ ಖಗೋಳ ಕೇಂದ್ರದ ಕರೆನ್ ಮೀಸ್ ಹೇಳಿದ್ದಾರೆ.
ಈ ಕ್ಷುದ್ರಗ್ರಹಕ್ಕೆ ಉಮು (೦೪ ಎಂಎಚ್‌ಎ ಎಂಎಚ್ಡಿ) ಎಂದು ಹೆಸರಿಡಲಾಗಿದೆ. ಹವಾಯಿ ಭಾಷೆಯಲ್ಲಿ ಹಾಗೆಂದರೆ ದೂರದಿಂದ ನಮಗೆ ಸಂದೇಶ ತಂದದ್ದು ಎಂಬ ಅರ್ಥವಿದೆ.
ಇದು ಸುಮಾರು ೪೦೦ ಮೀಟರ್ ಉದ್ದವಿದ್ದು, ಇದಕ್ಕೆ ಹೊಲೀಸಿದರೆ ಅಗಲ ೧೦ ಪಟ್ಟು ಕಡಿಮೆ ಇದೆ. ಉದ್ದ – ಅಗಲಗಳಲ್ಲಿ ಅತಿ ಏರುಪೇರಾಗಿರುವ ಇಂತಹ ಕ್ಷುದ್ರಗ್ರಹಗಳು ನಮ್ಮ ಸೌರಮಂಡಲದಲ್ಲಿ (ಕ್ಷೀರ ಪಥದಲ್ಲಿ) ಈವರೆಗೆ ಪತ್ತೆಯಾಗಿಲ್ಲ. ಹೀಗಾಗಿ ಇದು ಅನ್ಯ ಸೌರಮಂಡಲಕ್ಕೆ ಸೇರಿರುವುದಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಕುರಿತ ವರದಿ ನೇಚರ್ ನಿಯತ ಕಾಲಿಕದ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟವಾಗಿದೆ.
ನಕ್ಷತ್ರಗಳ ನಿಯಂತ್ರಣ ಇಲ್ಲ
ನಮ್ಮ ಸೌರಮಂಡಲದಲ್ಲಿ ಯಾವುದೇ ನಕ್ಷತ್ರಗಳ ಗುರುತ್ವಾಕರ್ಷಣೆಗೆ ಒಳಪಡದೆ ಇದು ಸೌರಮಂಡಲದಲ್ಲಿ ಅಡ್ಡಾಡುತ್ತಿದೆ. ಅನ್ಯ ಸೌರಮಂಡಲಗಳಿಂದ ಕ್ಷುದ್ರಗ್ರಹಗಳು ನಮ್ಮ ಸೌರಮಂಡಲಕ್ಕೆ ಬರುತ್ತವೆ ಎಂದು ಗೊತ್ತಿತ್ತಾದರೂ, ಇದರ ಪತ್ತೆಯಿಂದ ಪ್ರತ್ಯಕ್ಷವಾಗಿ ನೋಡಿದಂತಾಯಿತು ಎಂದು ಹೇಳಿದ್ದಾರೆ
ನಾಸಾದ ಸಹ ಆಡಳಿತಗಾರ ಥಾಮಸ್ ಜುರ್ ಬುಚೇನ್ ಹೇಳಿದ್ದಾರೆ.
ಈ ಕ್ಷುದ್ರಗ್ರಹದ ಪತ್ತೆಯಿಂದಾಗಿ ನಮ್ಮ ಸೌರಮಂಡಲದ ಆಚೆಗಿನ ಸೌರಮಂಡಲಗಳ ಅಧ್ಯಯನ ನಡೆಸಲು ಇದು ಸಹಕಾರಿಯಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಮೊದಲು ಇದನ್ನು ಗಮನಿಸಿದಾಗ ಇದು ಧೂಮಕೇತು ಇರಬಹುದು ಎಂದು ಭಾವಿಸಿದ್ದ ವಿಜ್ಞಾನಿಗಳು ನಂತರದಲ್ಲಿ ಅದರಲ್ಲಿ ಧೂಮಕೇತುವಿನ ಲಕ್ಷಣಗಳು ಇಲ್ಲದಿರುವುದನ್ನು ಗಮನಿಸಿ, ಕ್ಷುದ್ರಗ್ರಹವೆಂದು ತೀರ್ಮಾನಿಸಿದ್ದಾರೆ.
ಇದು ಕಡು ಕಂದು ಬಣ್ಣದಿಂದ ಕೂಡಿದ್ದು ಹೊರಮೇಲ್ಮೈ ಧೂಳು ಚೂರುಪಾರು ಇಲ್ಲದೆ ಕಲ್ಲಿನಂತಿದೆ. ಇದು ಲೋಹದ ಮುದ್ದೆಯಂತಿದ್ದು, ಇದರಲ್ಲಿ ನೀರಾಗಲಿ, ಹಿಮವಾಗಲಿ ಇಲ್ಲ ಎಂದಿದ್ದಾರೆ.

 

ಅನ್ಯ ಸೌರಮಂಡಲದಿಂದ ಬಂದು ನಮ್ಮ ಸೌರ ಮಂಡಲದಲ್ಲಿ ಅಡ್ಡಾಡುತ್ತಿರುವ ಸಿಗಾರ್ ಆಕಾರದ ಕ್ಷುದ್ರಗ್ರಹವನ್ನು ಖಗೋಳ ವಿಜ್ಞಾನಿಗಳು ಇತ್ತೀಚೆಗೆ ಪತ್ತೆ ಹಚ್ಚಿದ್ದಾರೆ.
ಹವಾಯಿ ದ್ವೀಪದಲ್ಲಿರುವ ಶಕ್ತಿಯುತ ಫ್ಯಾನ್ ಸ್ವಾಸ್ಟನ್ – ೧ ಟೆಲಿಸ್ಕೋಪ್ ಮೂಲಕ ಇದನ್ನು ಪತ್ತೆ ಹಚ್ಚಲಾಗಿದೆ. ಅಗಲದಲ್ಲಿ ಚಿಕ್ಕದಿದ್ದರೂ ಉದ್ದದಲ್ಲಿ ೪೦೦
ಮೀಟರ್
ನಷ್ಟಿರುವ ಇದು ಗಂಟೆಗೆ ೯೫ ಸಾವಿರ ಕಿ.ಮೀ. ವೇಗದಲ್ಲಿ ಸಂಚರಿಸುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದು, ಈ ಕುರಿತ ವರದಿ ನೇಚರ್ ನಿಯತಕಾಲಿಕದ ಇತ್ತೀಚಿನ ಸಂಚಿಕೆಯಲ್ಲಿ ವರದಿಯಾಗಿದೆ.ಅನ್ಯ ಸೌರಮಂಡಲದಿಂದ ಬಂದು ನಮ್ಮ ಸೌರ ಮಂಡಲದಲ್ಲಿ ಅಡ್ಡಾಡುತ್ತಿರುವ ಸಿಗಾರ್ ಆಕಾರದ ಕ್ಷುದ್ರಗ್ರಹವನ್ನು ಖಗೋಳ ವಿಜ್ಞಾನಿಗಳು ಇತ್ತೀಚೆಗೆ ಪತ್ತೆ ಹಚ್ಚಿದ್ದಾರೆ.
ಹವಾಯಿ ದ್ವೀಪದಲ್ಲಿರುವ ಶಕ್ತಿಯುತ ಫ್ಯಾನ್ ಸ್ವಾಸ್ಟನ್ – ೧ ಟೆಲಿಸ್ಕೋಪ್ ಮೂಲಕ ಇದನ್ನು ಪತ್ತೆ ಹಚ್ಚಲಾಗಿದೆ. ಅಗಲದಲ್ಲಿ ಚಿಕ್ಕದಿದ್ದರೂ ಉದ್ದದಲ್ಲಿ ೪೦೦
ಮೀಟರ್
ನಷ್ಟಿರುವ ಇದು ಗಂಟೆಗೆ ೯೫ ಸಾವಿರ ಕಿ.ಮೀ. ವೇಗದಲ್ಲಿ ಸಂಚರಿಸುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದು, ಈ ಕುರಿತ ವರದಿ ನೇಚರ್ ನಿಯತಕಾಲಿಕದ ಇತ್ತೀಚಿನ ಸಂಚಿಕೆಯಲ್ಲಿ ವರದಿಯಾಗಿದೆ.

Leave a Comment