ಚುಚ್ಚುಮದ್ದು ಸೋಂಕು: ಯುವತಿ ಸಾವು

ಹೆಚ್.ಡಿ.ಕೋಟೆ, ನ.14- ತಾಲೂಕಿನ ಹಂಪಾಪುರದ ಕಾಳಿಹುಂಡಿ ಗ್ರಾಮದಲ್ಲಿ ಚುಚ್ಚುಮದ್ದು ಸೋಂಕಿನಿಂದ ಯುವತಿ ಮೃತಪಟ್ಟಿದ್ದಾಳೆ.
ಕಾಳಿಹುಂಡಿ ಗ್ರಾಮದ ಬಿ.ಎಸ್ಸಿ ಪದವೀಧರೆ ಅಂಕುಷ (21) ಮೃತ ದುರ್ದೈವಿ. ಈಕೆಗೆ ಹಂಪಾಪುರದ ಕ್ಲಿನಿಕ್‍ನಲ್ಲಿ ವೈದ್ಯ ಡಾ.ರಾಜು ಚುಚ್ಚುಮದ್ದು ನೀಡಿದ್ದರು. ಆದರೆ, ಚುಚ್ಚುಮದ್ದು ನೀಡಿದ್ದ ಜಾಗದಲ್ಲಿ ಸೋಂಕು ಉಂಟಾಗಿತ್ತು. ಹೀಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಆಕೆ ಆಸ್ಪತ್ರೆಯಲ್ಲೇ ಸಾವಿಗೀಡಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ವೈದ್ಯ ರಾಜು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹಂಪಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment