ಚೀನಾ ವಿದೇಶಾಂಗ ಸಚಿವರೊಂದಿಗೆ ಡಾ.ಜೈಶಂಕರ್ ಚರ್ಚೆ

ಬೀಜಿಂಗ್, ಆ 12- ಮೂರು ದಿನಗಳ ಚೀನಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು ಸೋಮವಾರ ರಾಜ್ಯ ಕೌನ್ಸಿಲರ್ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್ ಯಿಯನ್ನು ಭೇಟಿಯಾಗಿ ಮುಂಬರುವ ಉನ್ನತ ಮಟ್ಟದ ಸಭೆಯ ಸಿದ್ಧತೆಗಳ ಕುರಿತು ಚರ್ಚಿಸಿದರು.

 ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತಮ್ಮ ಎರಡನೇ ಅನೌಪಚಾರಿಕ ಶೃಂಗಸಭೆಯನ್ನು ಈ ವರ್ಷದ ಅಕ್ಟೋಬರ್‌ನಲ್ಲಿ ಭಾರತದಲ್ಲಿ ನಡೆಸಲಿದ್ದಾರೆ.

ಮೊದಲ ಅನೌಪಚಾರಿಕ ಶೃಂಗಸಭೆಯನ್ನು ಚೀನಾ 2018 ಏಪ್ರಿಲ್‌ನಲ್ಲಿ ಆಯೋಜಿಸಿತ್ತು.

 ಡಾ. ಜೈಶಂಕರ್ ಅವರು ಚೀನಾದ ವಿದೇಶಾಂಗ ಸಚಿವರೊಂದಿಗೆ ದ್ವಿಪಕ್ಷೀಯ ಸಂಬಂಧಗಳ ಅಭಿವೃದ್ಧಿ ಕುರಿತು  ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ. ನಂತರ ಮುಂಬರುವ ಉನ್ನತ ಮಟ್ಟದ ಸಭೆ ಸೇರಿದಂತೆ, ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಕುರಿತು ಚರ್ಚಿಸುತ್ತಾರೆ ಎಂದು ವಿದೇಶಾಂಗ ಸಚಿವಾಲಯದ ಪ್ರಕಟಣೆ ತಿಳಿಸಿದೆ.

 ಅವರು ಸೋಮವಾರ ಚೀನಾ ಉಪಾಧ್ಯಕ್ಷ ವಾಂಗ್ ಕ್ಯಶನ್ ಅವರನ್ನು ಭೇಟಿಯಾದರು. ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಪರ್ಕ ವಿನಿಮಯ ಕುರಿತ ಭಾರತ-ಚೀನಾ ಉನ್ನತ ಮಟ್ಟದ ಎರಡನೇ ಸಭೆಯ ಸಹ-ಅಧ್ಯಕ್ಷರಾಗಲು ಡಾ.ಜೈಶಂಕರ್ ಮೂರು ದಿನಗಳ ಚೀನಾ ಭೇಟಿಯಲ್ಲಿದ್ದಾರೆ.

 ಡಾ.ಜೈಶಂಕರ್ ಅವರು ಅಧಿಕಾರ ವಹಿಸಿಕೊಂಡ ನಂತರ ಇದು ಚೀನಾಕ್ಕೆ ಅವರ ಮೊದಲ ಭೇಟಿ. ಡಾ.ಜೈಶಂಕರ್ ಅವರು 2009 ಮತ್ತು 2013 ರ ನಡುವೆ ಭಾರತದ ರಾಯಭಾರಿಯಾಗಿ ಬೀಜಿಂಗ್‌ಗೆ ಹೋಗಿದ್ದಾರೆ.

Leave a Comment