ಚೀನಾ ಗಡಿಗೆ ಹತ್ತಿರವಿದ್ದರೂ ಕೊರೊನಾ ನಿಯಂತ್ರಿಸಿದ ವಿಯೆಟ್ನಾಂ

ಸೋಂಕಿಗೆ ಒಬ್ಬರೂ ಬಲಿಯಾಗಿಲ್ಲ

ಕೊರೊನಾ ಹೆಮ್ಮಾರಿಯ ರೌದ್ರಾವತಾರಕ್ಕೆ ಅಕ್ಷರಶ: ಇಡೀ ವಿಶ್ವವೇ ನಲುಗಿ ಹೋಗಿದೆ. ಆದರೆ ಸೋಂಕು ಇನ್ನೂ ನಿಯಂತ್ರಣಕ್ಕೆ ಬಾರದಿರವುದು ಜಗತ್ತಿನ ಬಲಿಷ್ಠ ರಾಷ್ಟ್ರಗಳ ನಾಯಕರಿಗೆ ಸವಾಲಾಗಿ ಪರಿಣಮಿಸಿದೆ. ಅದರೆ ಕೆಲ ದೇಶಗಳು ಈ ಸೋಂಕು ತಡೆಯಲು ಸಫಲವಾಗಿವೆ. ಈ ಪಟ್ಟಿಗೆ ವಿಯೆಟ್ನಾಂ ಸೇರ್ಪಡೆಯಾಗಿದೆ. ಹೌದು ಜಗತ್ತಿನಲ್ಲಿ ಕೊರೊನಾ ವೈರಾಣು ತನ್ನ ಕಬಂಧ ಬಾಹು ಚಾಚಿಕೊಂಡಿರುವಾಗಲೇ ವಿಯೆಟ್ನಾಂನಲ್ಲಿ ಸೋಂಕು ತಡೆಗೆ ಕೈಗೊಂಡ ಕಠಿಣ ಕ್ರಮಗಳು ಇತರ ದೇಶಗಳಿಗೆ ಮಾದರಿಯಾಗಿವೆ.
ಚೀನಾದೊಂದಿಗೆ ಸುದೀರ್ಘ ಗಡಿ ಮತ್ತು ೯೭ ದಶಲಕ್ಷ ಜನಸಂಖ್ಯೆಯ ಹೊಂದಿರುವ  ವಿಯೆಟ್ನಾಂನಲ್ಲಿ ೩೦೦ ಕ್ಕೂ ಹೆಚ್ಚು ಕೋವಿಡ್ -೧೯ ಪ್ರಕರಣಗಳು ದಾಖಲಾಗಿದ್ದವು. ಅದರೆ ಇದುವರೆಗೂ ಒಬ್ಬರು ಈ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಿರಲಿಲ್ಲ. ಸೋಂಕು  ಸಮುದಾಯಕ್ಕೆ ಹರಡುವುದು ಒಂದು ತಿಂಗಳಿನಿಂದ ಇಳಿಕೆಯಾಗಿದೆ. ಇದರಿಂದಾಗಿ ದೇಶದಲ್ಲಿ ಈಗಾಗಲೇ ಆರ್ಥಿಕ ಚಟುವಟಿಕೆಗಳು ಗರಿಗೆದರಿ, ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

v1
ಜಗತ್ತಿನ ಇತರ ದೇಶಗಳಲ್ಲಿ ಸಾವು-ನೋವು ಹಾಗೂ ಸೋಂಕಿತರ ಪ್ರಮಾಣ ಅತ್ಯಂತ ವೇಗವಾಗಿ ಹಬ್ಬಿದ್ದವು.  ಆದರೆ ವಿಯೆಟ್ನಾಂನಲ್ಲಿ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕಿನಿಂದ ಎಚ್ಚೆತ್ತುಕೊಂಡ ವಿಯೆಟ್ನಾಂ ಸರ್ಕಾರ ವೈರಾಣು ಹರಡುವುದನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಂಡಿದ್ದರಿಂದ ಸೋಂಕನ್ನು ಹಿಮ್ಮೆಟ್ಟಿಸಿದೆ. ಆದರೆ ಕೊರೊನಾ ಸೋಂಕಿನ ಪರಿಣಾಮ ಅರಿಯವಲ್ಲಿ ಅಭಿವೃದ್ಧಿ ಹೊಂದಿದ ದೇಶಗಳಿಗೆ  ತಡವಾಗಿ ಜ್ಞಾನದೋಯವಾಗಿದೆ   ಡಾ. ಟಾಡ್ ಪೊಲಾಕ್ ವಿಶ್ಲೇಷಿಸಿದ್ದಾರೆ.
ಕೊರೊನಾ ಸೋಂಕು ವ್ಯಾಪಕವಾಗಿ ಹರಡಿಕೊಂಡು ಬಿಟ್ಟರೆ,  ಇಡೀ  ವೈದ್ಯಕೀಯ ವ್ಯವಸ್ಥೆಯೇ ಅದನ್ನು ನಿಯಂತ್ರಿಸುವುದರಲ್ಲೇ ತಲ್ಲೀನವಾಗಬೇಕಾಗುತ್ತದೆ ಎಂಬುದನ್ನು ಮನಗಂಡ ವಿಯೆಟ್ನಾಂ, ಮುಂಚಿತವಾಗಿಯೆ ಸಾಂಕ್ರಾಮಿಕ ರೋಗವನ್ನು ತಡೆಯಲು ಮುಂದಾಯಿತು.  ಆ ಸಮಯದಲ್ಲಿ ವುಹಾನ್‌ನಲ್ಲಿ ಇಬ್ಬರು  ಸೋಂಕಿಗೆ ಬಲಿಯಾದರು. ಜನವರಿ ೨೩ ರಂದು  ವೂಹಾನ್‌ನಿಂದ ಹೋ ಚಿ ಮಿನ್ಹ್ ನಗರದಲ್ಲಿ ತನ್ನ ಮಗನನ್ನು ಭೇಟಿ ಮಾಡಲು ತೆರಳಿದ್ದ ವ್ಯಕ್ತಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿತ್ತು. ಆಗ ತಕಣವೇ  ವಿಯೆಟ್ನಾಂನಲ್ಲಿ  ತುರ್ತು ಯೋಜನೆ ಕಾರ್ಯರೂಪಕ್ಕೆ ಬಂದಿತು. ಹೋ ಚಿ ಮಿನ್ಹ್ ನಗರದ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ  ಕ್ಲಿನಿಕಲ್ ಸಂಶೋಧನಾ ಘಟಕ ಸೋಂಕು ತಡೆಯಲು  ಸರ್ಕಾರದ ಜತೆ ಕೈಜೋಡಿಸಿತು.

v2
ಪ್ರಯಾಣ ನಿರ್ಬಂಧ, ನಿಕಟವಾಗಿ ಮೇಲ್ವಿಚಾರಣೆ ಮಾಡುವುದು ಮತ್ತು ಅಂತಿಮವಾಗಿ ಚೀನಾದ ಗಡಿಯನ್ನು ಮುಚ್ಚಲು ಮುಂದಾಯಿತು. ಗಡಿಗಳು ಮತ್ತು ಇತರ ದುರ್ಬಲ ಸ್ಥಳಗಳಲ್ಲಿ ಆರೋಗ್ಯ ತಪಾಸಣೆ ಹೆಚ್ಚಿಸಿತು. ಜನವರಿಯ ಕೊನೆಯಲ್ಲಿ  ಹೊಸ ವರ್ಷದ ರಜೆಗಾಗಿ ಶಾಲೆಗಳನ್ನು ಮೇ ಮಧ್ಯದವರೆಗೆ ಮುಚ್ಚಲಾಯಿತು.
೨೦೦೩ ರಲ್ಲಿ ಸಾರ್ಸ್‌ನಿಂದ ೨೦೧೦ ರಲ್ಲಿ ಏವಿಯನ್ ಇನ್ಫ್ಲುಯೆನ್ಸಾ, ದಡಾರ ಮತ್ತು ಡೆಂಗ್ಯೂ ಪ್ರಕರಣಗಳು ಏಕಾಏಕಿ  ದೊಡ್ಡ ಪ್ರಮಾಣದಲ್ಲಿ ಹರಡಿತು. ಮಾರ್ಚ್ ಮಧ್ಯದ ಹೊತ್ತಿಗೆ, ವಿಯೆಟ್ನಾಂ ದೇಶವನ್ನು ಪ್ರವೇಶಿಸಿದ ಪ್ರತಿಯೊಬ್ಬರಲ್ಲೂ ಸೋಂಕು ದೃಢಪಟ್ಟ ನಂತರ   ಸಂಪರ್ಕ ಹೊಂದಿದ ವ್ಯಕ್ತಿಯನ್ನು ೧೪ ದಿನಗಳ ಕಾಲ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿತ್ತು.
ಕ್ವಾರಂಟೈನ್‌ಗೆ ಒಳಪಟ್ಟ ವೇಳೆ ವೆಚ್ಚವನ್ನು ಸರ್ಕಾರವೇ ಭರಿಸುತ್ತಿತ್ತು. ಆದರೆ ಇವೆಲ್ಲವೂ ಐಷಾರಾಮಿ ಕೊಠಡಿಯಾಗಿರಲಿಲ್ಲ. ವಿಯೆಟ್ನಾಂ ಅತ್ಯಂತ ಸುರಕ್ಷಿತ ಸ್ಥಳವೆಂದು ಭಾವಿಸಿ ಆಸ್ಟ್ರೇಲಿಯಾದಿಂದ ಬಂದ ಮಹಿಳೆಯೊಬ್ಬಳಿಗೆ “ಕೇವಲ ಒಂದು ಚಾಪೆ, ದಿಂಬುಗಳು ಇಲ್ಲ, ಕಂಬಳಿಗಳಿಲ್ಲ” ಸಾಕಾಷ್ಟು ತಾಪಮಾನ ಹೆಚ್ಚಾಗಿದ್ದ ಈ  ಕೋಣೆಗೆ ಒಂದು ಫ್ಯಾನ್ ಮಾತ್ರವಿತ್ತು ಎಂದು ತನ್ನ ಅನುಭವ ಹಂಚಿಕೊಂಡರು.

v3
ವಿದ್ಯಾಥಿಗಳು, ಪ್ರವಾಸಿಗರು, ವ್ಯಾಪಾರಕ್ಕೆ ಸಂಬಂಧಿಸಿದ ಪ್ರಯಾಣಿಕರು ವಿಯೆಟ್ನಾಂಗೆ ಅಗಮಿಸಿ ಅವರೆಲ್ಲರೂ ಯುವಕರಾಗಿ ಆರೋಗ್ಯವಂತರಾಗಿದ್ದೇವೆ ಎಂದು ಹೇಳಿಕೊಂಡಿದ್ದರು. ಆದರೂ ಅವರೆಲ್ಲರನ್ನೂ ತಪಾಸಣೆಗೆ ಒಳಪಡಿಸಲಾಯಿತು. ಆದರೆ ಸೋಂಕು ಕಾಣಿಸಿಕೊಂಡಾಗಿನಿಂದಲೂ ದೇಶದಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಗೆ ತರಲಿಲ್ಲ ಅಷ್ಟರಮಟ್ಟಿಗೆ ಸೋಂಕು ತಡೆಗೆ ಸರ್ಕಾರ ಕ್ರಮಕೈಗೊಂಡಿತ್ತು. ಫೆಬ್ರವರಿ ತಿಂಗಳಿನಲ್ಲಿ ಉತ್ತರ ಹನೋಯಿಯ ಸಾನ್ ಲೋಯಿ ಜನರು ಮತ್ತು   ರಾಜಧಾನಿಗೆ ಸಮೀಪವಿರುವ ಹಾ ಲೋಯಿಯಲ್ಲಿ ೧೧ ಸಾವಿರ ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಅದರೆ ಅವರಿಗೆ ಸೋಂಕಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಹೊರಗಡೆ ತೆರಳಲು ಅನುಮತಿ ನೀಡಲಾಗುತ್ತಿತ್ತು.
ಒಂದು ವೇಳೆ ಕೊರೊನಾ ಸೋಂಕು ಮತ್ತೆ ಹರಡಿದರೆ ನಿರ್ಬಂಧಿತ ಪ್ರದೇಶಳಗಳನ್ನು ಮತ್ತೆ ಮರು ಬಳಕೆ ಮಾಡಿಕೊಳ್ಳಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಬೃಹತ್ ಸಮುದಾಯದ ವ್ಯಾಪ್ತಿಯಲ್ಲಿ ಪರೀಕ್ಷೆಗಳನ್ನು ಕೈಗೊಳ್ಳದ ಕಾರಣ ಈ ಕ್ರಮ ಕೈಗೊಳ್ಳಲಾಗಿತ್ತು ಎಂದು ಪ್ರೊ. ಥ್ವಾಯಿಟಿಸ್ ತಿಳಿಸುತ್ತಾರೆ.
ಸೋಂಕು ಪ್ರಾಥಮಿಕ ಹಂತದಲ್ಲಿರುವಾಗಲೇ  ನಿಮ್ಮನ್ನು ನೀವು ರಕ್ಷಿಸಕೊಳ್ಳುವಂತೆ ಸರ್ಕಾರಿ ಅಧಿಕಾರಿಗಳು ಜನತೆಗೆ ಎಸ್ ಎಂ ಎಸ್ ಮೂಲಕ ಸಂದೇಶ ರವಾನಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನ ನಡೆಸಿದ್ದು ಕೂಡ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಯಿತು. ಯಾವುದೇ ಒಂದು ರೋಗವನ್ನು ಗುಣಪಡಿಸುವುದಕ್ಕಿಂತ ಹೆಚ್ಚಾಗಿ ಸೋಂಕು ಹರಡುವುದನ್ನು ತಡೆಯುವುದು ಅತ್ಯಂತ ಮುಖ್ಯ ಎಂ ಅಂಶವನ್ನು ಮನಗಂಡು ವಿಯೆಟ್ನಾಂನಲ್ಲಿ ಕೈಗೊಂಡ ಕ್ರಮಗಳಿಂದಾಗಿ ಮಹಾಮಾರಿ ಕೊರೊನಾ ನಿಯಂತ್ರಣದಲ್ಲಿದೆ. ಇಂತಹ ಕಠಿಣ ಕ್ರಮಗಳು ಎಲ್ಲ ದೇಶಗಳಿಗೂ ಮಾದರಿಯಾಗಬೇಕು. ಆಗ ಮಾತ್ರ ಕೊರೊನಾ ಹಿಮ್ಮೆಟ್ಟಿಸಲು ಸಾಧ್ಯ.

Leave a Comment