ಚೀನಾ ಕರೋನಾ ವೈರಸ್‌ಸೋಂಕು ಸತ್ತವರ ೯ಕ್ಕೆ ಏರಿಕೆ

ಬೀಜಿಂಗ್, ಜ. ೨೨- ಚೀನಾದಲ್ಲಿ ಕಾಣಿಸಿಕೊಂಡಿರುವ ವಿಚಿತ್ರ ಸಾರ್ಸ್ ಮಾದರಿಯ ಕೋರೋನಾ ವೈರಸ್ ಸೋಂಕಿಗೆ ಇದುವರೆವಿಗೆ ಮೃತಪಟ್ಟವರ ಸಂಖ್ಯೆ ೯ ಕ್ಕೆ ಏರಿದೆ.
ಕೋರೋನ ವೈರಸ್ ಸೋಂಕು ಪೀಡಿತ ೪೪೦ ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಸೋಂಕಿನ ಅನುಮಾನ ಬಂದ ವ್ಯಕ್ತಿಗಳನ್ನು ಹೆಚ್ಚಿನ ಆರೋಗ್ಯ ತಪಾಸಣೆಗೆ ಒಳ ಪಡಿಸಲಾಗುತ್ತಿದೆ. ಬಹಳಷ್ಟು ಮಂದಿಯಲ್ಲಿ ಈ ಮಾರಣಾಂತಿಕ ಸೋಂಕು ಪತ್ತೆಯಾಗಿದೆ.
ಚೀನಾದ ವುಹಾನ್‌ನಲ್ಲಿ ಮೊದಲು ಕಾಣಿಸಿಕೊಂಡ ಕೊರೋನಾ ವೈರಸ್ ಸೊಂಕು ವ್ಯಕ್ತಿಯಿಂದ ವ್ಯಕ್ತಿಗೆ ಹಬ್ಬುವ ಸೋಂಕು ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಉಪ ಆಯುಕ್ತ ಲೀ ಬಿನ್ ಈಗಾಗಲೇ ಹೇಳಿದ್ದಾರೆ.
ಇದೇ ವೇಳೆ ಈ ಸೋಂಕು ಜಪಾನ್, ಥೈಲ್ಯಾಂಡ್ ದಕ್ಷಿಣ ಕೊರಿಯಾಗಳಲ್ಲಿಯೂ ಕಂಡು ಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಈ ದೇಶಗಳ ಮುಖ್ಯ ನಗರಗಳಿಗೆ ಚೀನಾದಿಂದ ಆಗಮಿಸುವ ಪ್ರಯಾಣಿರಿಗೆ ವಿಮಾನ ನಿಲ್ದಾಣಗಳಲ್ಲಿಯೇ ಕಡ್ಡಾಯ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ.
ಹಾಂಕ್‌ಕಾಂಗ್ ವಿಮಾನ ನಿಲ್ದಾಣದಲ್ಲಿ ಚೀನಾದ ವುಹಾನ್ ನಿಂದ ಆಗಮಿಸುವವರಿಗೆ ಕಟ್ಟುನಿಟ್ಟಾದ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಭಾರತವು ಸಹ ಈ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಿದ್ದು ಅಂತರ ರಾಷ್ಟ್ರೀಯ ನಿಲ್ದಾಣಗಳಲ್ಲಿ ವೈದ್ಯಕೀಯ ತಪಾಸಣೆಯನ್ನು ಚುರುಕುಗೊಳಿಸಲಾಗಿದೆ.
ಕೊರೋನಾ ವೈರಸ್ ಸೊಂಕಿನಿಂದ ನರಳುತ್ತಿವವರ ಶುಶ್ರೂಶೆಯಲ್ಲಿ ತೊಡಗಿರುವ ಆರೋಗ್ಯ ಇಲಾಖೆ ಸಿಬ್ಬಂದಿಯಲ್ಲಿ ಹಲವರಿಗೆ ಈ ಸೋಂಕು ಹಬ್ಬಿರುವುದರಿಂದ ವೈದ್ಯಕೀಯ ಸಿಬ್ಬಂದಿಗೆ ಹೆಚ್ಚಿನ ಸೋಂಕು ನಿರೋಧಕ ರಕ್ಷಣೆ ಒದಗಿಸಲಾಗಿದೆ ಎಂದು ಚೀನಾ ವೈದ್ಯಕೀಯ ಇಲಾಖೆ ಮೂಲಗಳು ತಿಳಿಸಿವೆ.

Leave a Comment