ಚೀನಾದ ಹೈಪರ್ ಸಾನಿಕ್ ವೇವ್ ರೈಡರ್

ಪರಮಾಣು ಸಿಡಿತಲೆಗಳನ್ನು ಹೊತ್ತು ಹೈಪರ್ ಸಾನಿಕ್ ವೇಗದಲ್ಲಿ ಪ್ರಯಾಣಿಸಬಲ್ಲಂತ ವೇವ್ ರೈಡರ್ ವಿಮಾನವನ್ನು ಚೀನಾ ಎರಡು ದಿನಗಳ ಮುಂದೆ ಯಶಸ್ವಿಯಾಗಿ ಉಡಾವಣೆ ಮಾಡಿದೆ.ಜಿಂಗ್ ಕಾಂಗ್-೨ ಅಥವಾ ಸ್ಟಾರಿ-೨ ಕೆಸರಿನ ಈ ಹೈಪರ್ ಸಾನಿಕ್ ವಿಮಾನವನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವುದಾಗಿ ಚೀನಾದ ಅಧಿಕೃತ ಮಾಧ್ಯಮಗಳು ವರದಿ ಮಾಡಿವೆ.

ಹೈಪರ್ ಸಾನಿಕ್ ವೇಗದಲ್ಲಿ ಪರಮಾಣು ಸಿಡಿತಲೆಗಳನ್ನು ರವಾನಿಸುವ ಸಾಮರ್ಥ್ಯವಿರುವ ವೇವ್ ರೈಡರ್ ಅನ್ನು ಚೀನಾ ಎರಡು ದಿನಗಳ ಹಿಂದೆ ಯಶಸ್ವಿಯಾಗಿ ಉಡಾವಣೆ ಮಾಡಿದೆ.  
ಇದರಿಂದ ಹಾರುವ ಪರಮಾಣು ಸಿಡಿತಲೆಗಳನ್ನು ಗುರುತಿಸುವುದು ಸದ್ಯದ ತಲೆಮಾರಿನ ಯಾವುದೇ ಕ್ಷಿಪಣಿ ನಿರೋಧಕ ವ್ಯವಸ್ಥೆಗೆ ದುಸಾಧ್ಯವಾಗಿದೆ. ಕಾರಣ ವೇಗ 6 ಮ್ಯಾಕ್ (ಗಂಟೆಗೆ 98,425 ಕಿ.ಮಿ.) ಹೀಗಾಗಿ ಬಲಾಢ್ಯ ಸೇನೆಗಳಿಗೆ ಇದರ ಸಿಡಿತಲೆಗಳಿಂದ ರಕ್ಷಣೆ ಪಡೆಯಲು ಹೊಸ ತಲೆನೋವಾಗಿದೆ.

12vichara2

ಚೀನಾದ ವಾಯುವ್ಯ ಭಾಗದಲ್ಲಿಯ ನಿಗದಿ ಪಡಿಸಿದ್ದ ಗುರಿಗಳನ್ನು ಬೇಧಿಸುವ ಗುರಿಯೊಂದಿಗೆ ಪರೀಕ್ಷಾ ಉಡಾವಣೆ ಮಾಡಿದ್ದ ಈ ವಿಮಾನದಲ್ಲಿಯ ಸಿಡಿತಲೆಗಳು ಗುರಿಗಳನ್ನು ಯಶಸ್ವಿಯಾಗಿ ಭೇದಿಸಿವೆ ಎಂದು ಚೀನಾ ಬಾಹ್ಯಾಕಾಶ ಸಂಶೋಧನಾ ಮೂಲಗಳು ಹೇಳಿವೆ.

ಸದ್ಯದ ತಲೆಮಾರಿನ ಯಾವುದೇ ರಾಷ್ಟ್ರ ಕ್ಷಿಪಣಿ ನಿರೋಧಕ ವ್ಯವಸ್ಥೆಗಳ ಕಣ್ಣಿಗೆ ಮಣ್ಣೆರೆಚಿ ಕ್ಷಣಾರ್ಧದಲ್ಲಿ ಶತೃಗುರಿಗಳನ್ನು ಭೇದಿಸುವ ಸಾಮರ್ಥ್ಯ ಜಿಂಗ್-ಕಾಂಗ್-೨ ಹೊಂದಿದೆ.

ಶತೃ ಪಡೆಯಿಂದ ನುಗ್ಗಿ ಬರುವ ಕ್ರೂಸ್ ಮತ್ತು ಬ್ಯಾಲೆಸ್ಟಿಕ್ ಕ್ಷಿಪಣಿಗಳನ್ನು ಸುಲಭವಾಗಿ ಗುರುತಿಸುವ ಮತ್ತು ಅವು ದೂರದಲ್ಲಿರುವಾಗಲೇ ಧ್ವಂಸಗೊಳಿಸುವ ಈಗಿನ ಕ್ಷಿಪಣಿ ನಿರೋಧಕ ವ್ಯವಸ್ಥೆಗಳಿಗೆ ಚೀನಾದ ಈ ನೂತನ ಜಿಂಗ್ ಕಾಂಗ್-೨ ಪರಮಾಣು ಸಿಡಿತಲೆಗಳನ್ನು ಪತ್ತೆ ಹಚ್ಚುವುದು ಕಷ್ಟಕರವಾಗಿದೆ. ಇದರ ವೇಗದಿಂದ ಕ್ಷಣರ್ಧಾದಲ್ಲಿ ಇದು ತನ್ನ ಗುರಿಗಳತ್ತ ನುಗ್ಗಬಲ್ಲ ಸಾಮರ್ಥ್ಯ ಹೊಂದಿದ್ದು ಸದ್ಯ ಅಮೆರಿಕಾ, ರಷ್ಯಾ ಸೇರಿದಂತೆ ಹಲವು ಬಲಾಢ್ಯ ಸೇನೆಗಳು ಇದರಿಂದ ರಕ್ಷಣೆ ಪಡೆಯುವ ಬಗ್ಗೆ ತಲೆಕೆಡಿಸಿಕೊಳ್ಳಬೇಕಿದೆ.

ಈ ಹೊಸ ವೇವ್ ರೈಡರ್ ಹೈಪರ್ ವೇಗ ಹೊಂದಿದ್ದು ಇದರ ವೇಗ ೬ ಮ್ಯಾಕ್ (ಗಂಟೆಗೆ ೯೮,೪೨೫ ಕಿ.ಮಿ.) ಆಗಿದ್ದು, ಈ ವೇಗದಲ್ಲಿ ನುಗ್ಗಿಬರುವ ಪರಮಾಣು ಸಿಡಿತಲೆಗಳನ್ನು ಗುರುತಿಸುವುದು ಅತ್ಯಂತ್ಯ ಕಠಿಣ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸ್ಟಾರಿ ಸ್ಕೈ-2 ಉಡಾವಣೆಯ ನಂತರ ರಾಕೆಟ್‌ನಿಂದ ಬೇರ್ಪಟ್ಟು ತನ್ನದೇ ಇಂಜಿನ್ ಮೂಲಕ ವೇಗವನ್ನು ವೃದ್ದಿಸಿಕೊಂಡು ಹೈಪರ್ ಸಾನಿಕ್ ವೇಗ ಪಡೆಯಲಿದೆ. ಇದು ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದ್ದರೂ ಇದರಲ್ಲಿ ಸಾಂಪ್ರದಾಯಕ ಸಿಡಿತಲೆಗಳನ್ನು ಬಳಸಲಾಗುವುದು ಎಂದು ತೀರಾ ಸರ್ಕಾರದ ಮೂಲಗಳು ಹೇಳುವೆಯಾದರೂ, ಅಗತ್ಯ ಬಿದ್ದಲ್ಲಿ ಇದರ ಮೂಲಕ ಪರಮಾಣು ಸಿಡಿತಲೆಗಳನ್ನು ರವಾನಿಸುವುದು ಚೀನಾದ ಮೂಲ ಉದ್ದೇಶ ಎಂದು ರಕ್ಷಣಾ ತಜ್ಞರು ವ್ಯಾಖ್ಯಾನಿಸಿದ್ದಾರೆ.

ಉತ್ತನೂರು ವೆಂಕಟೇಶ್

Leave a Comment