ಚಿರತೆ ಹಾವಳಿ ನಿಯಂತ್ರಿಸಲು ಆಗ್ರಹ

ಪಿರಿಯಾಪಟ್ಟಣ, ಸೆ.12- ತಾಲ್ಲೂಕಿನ ರಾಮನಾಥ ತುಂಗ ಗ್ರಾಮದ ಸಾಮಾಜಿಕ ಅರಣ್ಯ ವ್ಯಾಪ್ತಿಯಲ್ಲಿ ಚಿರತೆಯ ಹಾವಳಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆಯು ಕ್ರಮ ಕೈಗೊಳ್ಳಬೇಕೆಂದು ತಾ.ಪಂ.ಸದಸ್ಯ ಆರ್.ಎಸ್.ಮಹದೇವ್ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತಾ.ಪಂ.ಸದಸ್ಯ ಆರ್.ಎಸ್.ಮಹದೇವ್ ಮಾತನಾಡಿ ಇತ್ತೀಚಿಗೆ ಗ್ರಾಮದ ಜಮೀನುಗಳಲ್ಲಿ ಚಿರತೆಯು ಕಂಡು ಬರುತ್ತಿದ್ದು, ಅಕ್ಕ-ಪಕ್ಕದ ಗ್ರಾಮಗಳಾದ ಸುಂಡವಾಳು, ದೊರೆಕೆರೆ, ಆಸ್ವಾಳು, ಸನ್ಯಾಸಿಪುರ, ದೊಡ್ಡಬೇಲಾಳು ಗ್ರಾಮಗಳಲ್ಲೂ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ. ರಾಮನಾಥ ತುಂಗ ಕೊಪ್ಪಲಿನ ಶಶಿ ಎಂಬುವವರಿಗೆ ಸೇರಿದ ಕುರಿಯನ್ನು ಚಿರತೆ ಕೊಂದು ಹಾಕಿರುವುದು ಕಂಡು ಬಂದಿದ್ದು, ಈ ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿಗಳು ಚಿರತೆಯನ್ನು ಸೆರೆಹಿಡಿಯಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

Leave a Comment