ಚಿರತೆ ದಾಳಿಗೆ 55 ಕುರಿಗಳು ಬಲಿ

ಚಿಕ್ಕಬಳ್ಳಾಪುರ, ಜೂ ೧೬- ಜಿಲ್ಲೆಯ ಗುಡಿ ಬಂಡೆ ತಾಲ್ಲೂಕಿನ ನಲ್ಲಾಳ ಹಳ್ಳಿಯಲ್ಲಿ ಚಿರತೆಯೊಂದು ಕುರಿ ಮಂದೆಯ ಮೇಲೆ ಹಠಾತ್ ದಾಳಿ ನಡೆಸಿ ಸುಮಾರು 55 ಕುರಿಗಳನ್ನು ಬಲಿತೆಗೆದುಕೊಂಡಿರುವ ಪ್ರಕರಣ ನಿನ್ನೆ ನಡೆದಿದೆ.
ಗುಡಿಬಂಡೆ ತಾಲ್ಲೂಕಿನ ನಲ್ಲಾಳ ಹಳ್ಳಿ ಗ್ರಾಮದ ವೆಂಕಟರಮಣಪ್ಪ ರವರಿಗೆ ಸೇರಿದ ಕುರಿ ಮಂದೆಯ ಮೇಲೆ ಚಿರತೆ ದಾಳಿ ನಡೆಸಿದ್ದು ಈ ಕಾರಣದಿಂದಾಗಿ 55 ಕುರಿಗಳು ಬಲಿಯಾಗಿದೆ.
ಜೀವನೋಪಾಯಕ್ಕೆ ಇದ್ದ ಏಕೈಕ ಆಸರೆ ಕುರಿಗಳು ನಾಶವಾಗಿದ್ದು ಕುರಿ ಮಾಲೀಕ ವೆಂಕಟರಮಣಪ್ಪ ಕಣ್ಣೀರು ಹಾಕುತ್ತಾ ಸರ್ಕಾರ ತನಗೆ ಸಹಾಯ ಹಸ್ತ ನೀಡಬೇಕೆಂದು ಪ್ರಾರ್ಥಿಸಿದ್ದಾನೆ.

Leave a Comment