ಚಿರತೆ ದಾಳಿಗೆ ಆಕಳು ಕರು ಬಲಿ

ಹುಬ್ಬಳ್ಳಿ,ಫೆ,16- ಧಾರವಾಡ ಜಿಲ್ಲೆಯ  ಕಲಘಟಗಿ ತಾಲೂಕಿನ ಹುಲಗಿನಕಟ್ಟಿ ಗ್ರಾಮದಲ್ಲಿ ಮತ್ತೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿ, ಚಿರತೆಯೊಂದು ದಾಳಿ ನಡೆಸಿ ಆಕಳು ಕರುವನ್ನು ಹೊತ್ತೊಯ್ಯದು ತಿಂದು ಹಾಕಿರುವ ಘಟನೆ ನಡೆದಿದೆ.
ತಾಲೂಕಿನ ಹುಲುಗಿನಕಟ್ಟಿ ಗ್ರಾಮದ ಶಾಂತವ್ಯ ಹನುಮಂತಪ್ಪ ಅವರಿಗೆ ಸೇರಿದ ಜಮೀನಲ್ಲಿ ಎರಡು ಆಕಳು ಕಟ್ಟಿಹಾಕು ಕರುವನ್ನು ಹಾಗೆ ಬಿಟ್ಟಿದ್ದರು. ಶನಿವಾರ ರಾತ್ರಿ ಜಾನುವಾರಗಳ ಮೇಲೆ ಚಿರತೆ ದಾಳಿ ಮಾಡಿದ್ದು, ಕರುವನ್ನು ತಿಂದು ಹಾಕಿದೆ ಎಂದು ಹೇಳಲಾಗುತ್ತಿದೆ.
ಇಂದು ಬೆಳಿಗ್ಗೆ ನಾಗರಾಜ್ ಭಜಂತ್ರಿ ಅವರು ಜಮೀನು ನೋಡಲು ಹೊಲಕ್ಕೆ ಹೋಗಿದ್ದಾಗ ಜಮೀನನಲ್ಲಿ ಕಟ್ಟಿ ಹಾಕಿದ್ದ ಎರಡು ಆಕಳು ಹಾಗೆ ಇದ್ದವು. ಆದರೆ ಕರು ಮಾತ್ರ ಕಾಣದಿದ್ದಾಗ ಜಮೀನಲ್ಲಿ ಹುಡುಕಿದಾಗ ಕರುವನ್ನು ತಿಂದು ಹಾಕಿರುವುದು ಬೆಳಕಿಗೆ ಬಂದಿದೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿ ಚಿರತೆ ದಾಳಿ ನಡೆಸಿ ಕರುವನ್ನು ತಿಂದು ಹಾಕಿರುವುದು ಖಚಿತ ಪಡಿಸಿದ್ದಾರೆ.
ತಾಲೂಕು ಅರಣ್ಯ ಇಲಾಖೆ ರೆಂಜರ್ ಶ್ರೀಕಾಂತ್ ಪಾಟೀಲ್, ಫಾರೆಸ್ಟರ್ ಆರ್.ಬಿ ಕಡೆಮನಿ, ಸಿಬ್ಬಂದಿಗಳಾದ ಎಸ್.ಬಿ. ಕಡೆಮನಿ, ಸವಿತಾ ಮಿರ್ಜಿ, ನಾರಾಯಣ ಭಾಗ್ವೆ ಸ್ಥಳದಲ್ಲಿ ಪರಿಶೀಲನೆ ನಡೆಸಿದರು.
ಪರಿಹಾರಕ್ಕೆ ಆಗ್ರಹ

ಚಿರತೆದಾಗೆ ಸಿಲುಕಿದ ಕರು ಕಳೆದುಕೊಂಡು ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಬೇಕೆಂದು ಮುಖಂಡರಾದ ಜಾವೀದ್ ಅಣ್ಣಿಗೇರಿ, ರೈತರಾದ ಈರಪ್ಪ ಚಿಕ್ಕಮ್ಮನ್ನವರ್ ಆಗ್ರಹಿಸಿದ್ದಾರೆ.
ಕಾಡು ಪ್ರಾಣಿ ತಡೆಗೆ ಆಗ್ರಹ
ಈಗಾಗಲೇ ಕಲಘಟಗಿ ತಾಲೂಕಿನಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಹುಲಿ ಕಾಣಿಸಿಕೊಂಡು ಜನರಲ್ಲಿ ಭಯ ಹುಟ್ಟು ಹಾಕಿದೆ. ಇದೀಗ ನಮ್ಮ ಗ್ರಾಮಕ್ಕೆ ಸೇರಿದ ಹೊಲದಲ್ಲಿ ಚಿರತೆಯೊಂದು ದಾಳಿ ಆಕಳು ಕರು ಅನ್ನು ತಿಂದು ಹಾಕಿದೆ. ಚಿರತೆ ದಾಳಿಗೆ ಸಿಲುಕಿ 5ನೇ ಕರು ಈಗ ಬಲಿಯಾಗಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಹಿಡಿದು ಬೇರೆ ಕಡೆ ಸ್ಥಳಾಂತರಿಸಬೇಕು ಎಂದು ಹುಲಗಿನಕಟ್ಟಿ ಗ್ರಾಮದ ಯುವಕರಾದ ಗಿರೀಶ್ ಭಜಂತ್ರಿ, ಪ್ರಭುಜನ್ ಹುಲಿಕಟ್ಟಿ, ಆಕಾಶ್ ಹುಲಿಕಟ್ಟಿ, ನವೀನ್ ಹುಲಿಕಟ್ಟಿ, ಮನೋಜ್ ಹುಲಿಕಟ್ಟಿ, ಬಸು ಹೊಟಗಾರ ಒತ್ತಾಯಿಸಿದ್ದಾರೆ.

Leave a Comment