ಚಿಪ್ಪಂದಿ ವಶ ಇಬ್ಬರ ಸೆರೆ

ಬೆಂಗಳೂರು, ಅ. ೨೧- ಬಳ್ಳಾರಿಯ ಸಂಡೂರಿನ ಕುಮಾರಸ್ವಾಮಿ ಗುಡ್ಡದ ಕಾಡಿನಿಂದ ಚಿಪ್ಪಂದಿ (ಪಂಗೋಲಿನ್) ಹಿಡಿದು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಂದಿನಿ ಲೇ ಔಟ್ ಪೊಲೀಸರು ಬಂಧಿಸಿದ್ದಾರೆ.
ಸಂಡೂರಿನ ಸುರೇಶ್ (40) ಆಂಧ್ರದ ರಾಯದುರ್ಗದ ಮಧುಸೂದನ್ ಅಲಿಯಾಸ ಮಧು ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಎರಡು ಚಿಪ್ಪಂದಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಕುಮಾರಸ್ವಾಮಿ ಗುಡ್ಡದ ಬಳಿಯ ಕಾಡಿನಿಂದ ಚಿಪ್ಪಂದಿ ಹಿಡಿದು ತಂದು ಕೂಲಿ ನಗರ ಬ್ರಿಡ್ಜ್ ಬಳಿಯ ಸರ್ವಿಸ್ ರಸ್ತೆಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದರು.
ಖಚಿತ ಮಾಹಿತಿ ಮೇಲೆ ಕಾರ್ಯಾಚರಣೆ ಕೈಗೊಂಡ ನಂದಿನಿ ಲೇಔಟ್ ಪೊಲೀಸ್ ಇನ್ಸ್‌ಪೆಕ್ಟರ್ ಲೋಹಿತ್ ಮತ್ತ ಅವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Leave a Comment