ಚಿನ್ನ ಕಳ್ಳಸಾಗಣೆ: ಮಂಗಳೂರು ವಿಮಾನ ನಿಲ್ದಾಣದಲ್ಲಿ   ಓರ್ವನ ಸೆರೆ

ಮಂಗಳೂರು, ಜೂ 13  ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು   ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ದುಬೈ ನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ   ಬಂದಿಳಿದ ವ್ಯಕ್ತಿಯ ಬಳಿಯಿದ್ದ 131 ಗ್ರಾಮ್ ಚಿನ್ನವನ್ನು  ಕಸ್ಟಮ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಆರೋಪಿಯು ಈ ಚಿನ್ನವನ್ನು ಚಿನ್ನದ ಪೇಸ್ಟ್ ರೂಪದಲ್ಲಿ   ಪ್ಯಾಂಟಿನೊಳಗ್ಗೆ ಅಡಗಿಸಿಟ್ಟಿದ್ದ ಎಂದು ಹೇಳಲಾಗಿದ್ದು, ಆತನನ್ನು ವಿಚಾರಣೆಗೆ ಒಳಪಡಿಸಿರುವುದಾಗಿ   ಮೂಲಗಳು ತಿಳಿಸಿವೆ.

 

Leave a Comment