ಚಿನ್ನದ ಪದಕ ಗೆದ್ದ ಹಿಮಾದಾಸ್ ಕುರಿತು ಚಿತ್ರ

ಮುಂಬೈ, ಜು ೩೦- ಫಿನ್‌ಲ್ಯಾಂಡ್‌ನಲ್ಲಿ ನಡೆದ ೨೦ ವರ್ಷದೊಳಗಿನವರ ವಿಶ್ವ ಕ್ರೀಡಾಕೂಟದಲ್ಲಿ ಮಹಿಳೆಯರ ೪೦೦ ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದ ಭಾರತದ ಹಿಮಾದಾಸ್ ಈಗ ಬಾಲಿವುಡ್ ಪರದೆ ಮೇಲೆ ಮಿಂಚಲಿದ್ದಾರೆ.

ಇಂತಹದೊಂದು ಆಲೋಚನೆ ಮಾಡಿರುವುದು ಬಿಟೌನ್ ಸೂಪರ್ ಅಕ್ಷಯ್ ಕುಮಾರ್. ಹೌದು, ಇತ್ತೀಚಿಗಷ್ಟೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅಕ್ಷಯ್ ಕುಮಾರ್, ”ಹಿಮಾದಾಸ್ ಬಗ್ಗೆ ಬಯೋಪಿಕ್ ಮಾಡುವ ಯೋಚನೆ ಇದೆ” ಎಂದು ಹೇಳುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

ಈ ವರೆಗೆ ರನ್ನಿಂಗ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಸಿಕ್ಕಿರಲಿಲ್ಲ. ಈಗ ಹಿಮಾದಾಸ್ ಆ ಸಾಧನೆಯನ್ನು ಮಾಡಿದ್ದಾರೆ. ಈ ಮೂಲಕ ದೇಶದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟಕ್ಕೆ ಹಾರಿಸಿದ್ದಾರೆ. ಹಾಗಾಗಿ ಅವರ ಕುರಿತು ಒಂದು ಸಿನಿಮಾ ಮಾಡುವುದರಲ್ಲಿ ತಪ್ಪಿಲ್ಲ” ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬಯೋಪಿಕ್ ಚಿತ್ರಗಳಿಗೆ ಹಾಗೂ ನೈಜಕಥೆಯಾಧರಿತ ಚಿತ್ರಗಳಿಗೆ ಹೆಚ್ಚು ಸೂಕ್ತವಾದ ನಟ ಅಂದ್ರೆ ಅಕ್ಷಯ್ ಕುಮಾರ್. ಈಗಾಗಲೇ ಹಲವು ಬಯೋಪಿಕ್ ಸಿನಿಮಾಗಳನ್ನ ಮಾಡಿರುವ ಅಕ್ಷಯ್ ಈ ಬಾರಿ ಮತ್ತೊಂದು ಸವಾಲಿನ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವ ಸೂಚನೆ ನೀಡಿದ್ದಾರೆ. ಒಂದು ವೇಳೆ ಹಿಮಾದಾಸ್ ಬಗ್ಗೆ ಬಯೋಪಿಕ್ ಸೆಟ್ಟೇರಿದರೇ, ಹಿಮಾ ಪಾತ್ರವನ್ನ ಯಾರು ಮಾಡಲಿದ್ದಾರೆ ಎಂಬುದು ಕುತೂಹಲವಾಗಿದೆ.

Leave a Comment