ಚಿನ್ನದ ಆಸೆಗಾಗಿ ಮಗಳನ್ನೇ ಬಲಿಕೊಟ್ಟ ದಂಪತಿ

ಚಿನ್ನದ ಆಸೆಗಾಗಿ ತಂದೆ ತಾಯಿಯೇ ಮಗಳನ್ನು ಬಲಿ ಕೊಟ್ಟ ಆಘಾತಕಾರಿ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿರುವುದನ್ನು ನೋಡಿದರೆ ನಾಗರೀಕ ಸಮಾಜ ಎತ್ತ ಸಾಗುತ್ತಿದೆ ಎನ್ನುವ ಅನುಮಾನ ಕಾಡುತ್ತಿದೆ. ಲಕ್ನೋದ ಕನೌಜ್ ನಿವಾಸಿಯಾದ ಆಭರಣ ವ್ಯಾಪಾರಿ ಮಹಾವೀರ್ ಪ್ರಸಾದ್ ತನ್ನ ಉದ್ಯಮದಲ್ಲಿ ಆರ್ಥಿಕ ಸಂಕಷ್ಟ ಅನುಭವಿಸಿದ್ದ.ತನ್ನ ಕಷ್ಟಗಳೆಲ್ಲಾ ಆದಷ್ಟು ಬೇಗ ಪರಿಹಾರವಾಗಲಿ ಎಂದು ಬಯಸಿದ್ದ.ಅದಕ್ಕಾಗಿ ಆತ ಏನು ಮಾಡಿದ ಎಂದು ಕೇಳಿದರೆ ನಿಜಕ್ಕೂ ಆಘಾತವಾಗುತ್ತದೆ.ಈ ರೀತಿಯ ತಂದೆ ತಾಯಿಯೂ ಇದ್ದಾರಾ ಎನ್ನುವ  ಎಂದು ಗಾಬರಿಯಾಗಬೇಕಾಗುತ್ತದೆ.

ಲಕ್ನೋದ ಕನೌಜ್‌ನ ವ್ಯಾಪಾರಿ ೫೫ ವರ್ಷದ ಮಹಾವೀರ್ ಪ್ರಸಾದ್ ಮತ್ತಾತನ ಪತ್ನಿ ಪುಷ್ಪ ಮಗಳನ್ನೇ ಬಲಿ ಕೊಟ್ಟ ಪಾಪಿ ದಂಪತಿಯಾಗಿದೆ ಕೃಷ್ಣ ಶರ್ಮಾ ಎಂಬ ಸ್ವಯಂ ಘೋಷಿತ ಮಂತ್ರವಾದಿಯೊಬ್ಬ ತಾನು ಹೇಳಿದಂತೆ ಮಾಡಿದರೆ ಹಣಕಾಸಿನ ತೊಂದರೆ ಪರಿಹಾರವಾಗುತ್ತದೆ ಎಂದು ಮಹಾವೀರ್ ದಂಪತಿಯನ್ನು ನಂಬಿಸಿದ್ದಾನೆ. ಅರೆಕಾಲಿಕ ಡ್ರೈವರ್ ಆಗಿದ್ದ ಸ್ವಯಂ ಘೋಷಿತ ಮಂತ್ರವಾದಿ ಶರ್ಮಾ, ದೇವರನ್ನ ಒಲಿಸಿಕೊಳ್ಳಲು ನಿಮ್ಮ ೧೫ ವರ್ಷದ ಮಗಳನ್ನು ಬಲಿ ಕೊಟ್ಟರೆ ಶೀಘ್ರದಲ್ಲೇ ಹೂತಿಟ್ಟ ೫ ಕೆಜಿ ಚಿನ್ನ ಸಿಗುತ್ತದೆ ಹೇಳಿದ್ದನ್ನು ದಂಪತಿಗೆ ನಂಬಿದ್ದಾರೆ.

ಶರ್ಮಾ ಹೇಳಿದ ಮಾತಿಗೆ ಮರುಳಾದ ಮಹಾವೀರ್ ಪುಷ್ಪ ದಂಪತಿಯು ಮಗಳು ಕವಿತಾಳನ್ನು ಬಲಿ ಕೊಡಲು ಒಪ್ಪಿದ್ದರು ಮಗಳಿಗೆ ಮತ್ತು ಬರುವ ಔಷಧಿ ನೀಡಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಪೂಜೆ ಸಲ್ಲಿಸಿ ನಂತರ ಕನೌಜ್‌ನ ಇಲ್ಲಿನ ಪಿಪಾರಿಯಾ ಮತ್ತು ಬಧೋಸಾ ಗ್ರಾಮಗಳ ನಡುವೆ ಇರುವ ಅರಳಿ ಮರದ ಬಳಿ ಮಗಳನ್ನ ಕರೆದುಕೊಂಡು ಹೋಗಿದ್ದರು. ಕೃಷ್ಣ ಶರ್ಮಾ ಪೂಜೆಯ ಭಾಗವಾಗಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ಬಾಲಕಿಯನ್ನ ತಂದೆ ತಾಯಿಯ ಮುಂದೆಯೇ ವಿವಸ್ತ್ರಗೊಳಿಸಿದ್ದನು,ನಂತರ ಆಕೆಯನ್ನು ಕತ್ತು ಹಿಸುಕಿ ಕೊಂದಿದ್ದು, ಹತ್ತಿರದಲ್ಲೆ ಶವವನ್ನ ಎಸೆದಿದ್ದನು ಶವವನ್ನ ಹೂತಿಡುವ ವೇಳೆ ತಂದೆ ತಾಯಿಯ ಎದುರೇ ಬಾಲಕಿಯ ಶವದ ಮೇಲೆ ಅತ್ಯಾಚಾರವೆಸಗಿದ್ದ. ಬಳಿಕ ಬಾಲಕಿಯ ಕತ್ತು ಸೀಳಿ ದೇವರಿಗೆ ಅರ್ಪಿಸಲೆಂದು ಆಕೆಯ ರಕ್ತವನ್ನ ಸಂಗ್ರಹಿಸಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಹೇಳಿದ್ದಾನೆ.

ಆದರೆ ಶರ್ಮಾ ಹೇಳಿದಂತೆ ಮಗಳನ್ನ ಬಲಿ ಕೊಟ್ಟ ಮೇಲೂ ಯಾವುದೇ ಚಿನ್ನ ಸಿಗದೇ ಇದ್ದಾಗ ಮಹಾವೀರ್ ಪೊಲೀಸರ ಬಳಿ ಹೋಗಿದ್ದಾನೆ. ಈ ಹಿನ್ನೆಲೆಯಲ್ಲಿ ಬುಧವಾರದಂದು ಕೃಷ್ಣ ಶರ್ಮಾನನ್ನು ಕನೌಜ್ ಜಿಲ್ಲೆಯ ಥಾಟಿಯಾ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ.ಕವಿತಾ ಮೃತದೇಹವನ್ನು ಪತ್ತೆ ಮಾಡಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳಿಹಿಸಲಾಗಿದೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಕೇಶವ್ ಗೋಸ್ವಾಮಿ ತಿಳಿಸಿದ್ದಾರೆ. ಸದ್ಯ ತಂದೆ ತಾಯಿ ಪೊಲೀಸರ ವಶದಲ್ಲಿದ್ದು, ವಿಚಾರಣೆ ಮುಂದುವರೆದಿದೆ. ಮಹಾವೀರ್ ದಂಪತಿಗೆ ಮತ್ತೊಬ್ಬ ವಿವಾಹಿತ ಮಗಳಿದ್ದು, ಕವಿತಾಳನ್ನು ಬಲಿ ಕೊಟ್ಟ ಪ್ರದೇಶದಿಂದ ೨.ಕಿ.ಮೀ ದೂರದಲ್ಲಿರುವ ಗ್ರಾಮದಲ್ಲಿ ವಾಸವಿರುವುದಾಗಿ ವರದಿಯಾಗಿದೆ

Leave a Comment