ಚಿತ್ರರಂಗದ ನಿವೃತ್ತಿ ಬಗ್ಗೆ ಸಮಂತಾ ಸುಳಿವು

ಹೈದಾರಬಾದ್, ಫೆ 8- ಮದುವೆ ಬಳಿಕವೂ ಸೌತ್ ಸಿನಿರಂಗದಲ್ಲಿ ಬೇಡಿಕೆ ಉಳಿಸಿಕೊಂಡ ನಟಿ ಎಂದರೆ ಅದು ಸಮಂತಾ ಅಕ್ಕಿನೇನಿ. ತನ್ನ ಗ್ಲಾಮರ್ ಬ್ಯೂಟಿಯಿಂದಲೇ ಪಡ್ಡೆಗಳ ನಿದ್ದೆಕದ್ದ ಈ ಚೆಲುವೆಗೆ ಅಪಾರ ಅಭಿಮಾನಿಗಳ ಬಳಗವೇ ಇದೆ. ಆದರೆ ಇತ್ತೀಚೆಗೆ ಜಾಲತಾಣದಲ್ಲಿ ಸಮಂತಾ ಚಿತ್ರರಂಗದಿಂದ ನಿವೃತ್ತಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಈಗ ಚಿತ್ರದಲ್ಲಿ ಅದ್ಭುತ ನಟನೆಯಿಂದ ದಕ್ಷಿಣ ಭಾರತದಲ್ಲಿ ಹೆಚ್ಚು ಖ್ಯಾತಿಗೆ ಬಂದ ಸಮಂತಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಮದುವೆ ಬಳಿಕವೂ ಸಮಂತಾಗೆ ಡಿಮ್ಯಾಂಡ್ ಏನು ಕಡಿಮೆಯಾಗಿರಲಿಲ್ಲ. ಒಂದು ಕಡೆ ಕುಟುಂಬ, ಇನ್ನೊಂದು ಕಡೆ ಚಿತ್ರರಂಗ ಸರಿದೂಗಿಸಲು ಸಮಂತಾಗೆ ಕೊಂಚ ಕಷ್ಟವೇ ಆಗಿದೆ.

samantha
ದೊಡ್ಮನೆ ಸೊಸೆ ಸಮಂತಾ ಅಕ್ಕಿನೇನಿ, ಸದ್ಯ ಟಾಲಿವುಡ್ ಮಾತ್ರವಲ್ಲದೇ ಕಾಲಿವುಡ್, ಬಾಲಿವುಡ್‌ನಲ್ಲಿಯೂ ತಮ್ಮ ವಿಭಿನ್ನ ನಟನೆ ಮೂಲಕ ಛಾಪು ಮೂಡಿಸುತ್ತಿರುವ ಬೆಡಗಿ. ಇದಲ್ಲದೇ ಸ್ಯಾಂಡಲ್‌ವುಡ್‌ಗೂ ಬರುತ್ತಾರೆ ಎಂಬ ಸುದ್ದಿ ಎಲ್ಲಡೆ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಸಮಂತಾ ಬಣ್ಣದ ಜಗತ್ತಿಗೆ ಇನ್ನು ಎರಡು-ಮೂರು ವರ್ಷದ ನಂತರ ನಿವೃತ್ತಿ ಹೊಂದಲಿದ್ದಾರೆ ಎಂದು ಹೇಳಲಾಗಿದೆ.

ಸಮಂತಾ ಸಿನಿಮಾರಂಗದಿಂದ ದೂರ ಹೋಗುವುದಕ್ಕೆ ಬಲವಾದ ಕಾರಣವಿದೆ. ಹೌದು ಸಮಂತಾ ಮದುವೆಯಾದ ಮೇಲೆ ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಕುಟುಂಬಕ್ಕೆ ಹೆಚ್ಚಿನ ಸಮಯ ನೀಡಲು ಚಿತ್ರರಂಗದಿಂದ ದೂರ ಉಳಿಯಬೇಕಾಗಿದೆ ಎನ್ನುತ್ತಾರೆ.

samantha1
ನನಗೆ ಮಗು ಬೇಕು ಅಂತ ನಿರ್ಧಾರ ಮಾಡಿದಾಗ, ತಾಯಿ ಆಗಲು ನಾನು ಮನಸ್ಸು ಮಾಡಿದಾಗ. ನಟನೆ ಸೇರಿದಂತೆ ಎಲ್ಲದರಿಂದಲೂ ಬ್ರೇಕ್ ತೆಗೆದುಕೊಳ್ಳುತ್ತೇನೆ. ಆ ಸಮಯದಲ್ಲಿ ಮಗುವೇ ನನ್ನ ಜಗತ್ತಾಗಿರುತ್ತದೆ. ಹಾಗಾಗಿ ಇನ್ನು ಎರಡು-ಮೂರು ವರ್ಷಗಳಲ್ಲಿ ಒಪ್ಪಿಕೊಂಡಿರುವ ಚಿತ್ರಗಳನ್ನೆಲ್ಲ ಮುಗಿಸಿಕೊಡುತ್ತೇನೆ ಎಂದು ಹೇಳುವ ಮೂಲಕ ನಿವೃತ್ತಿ ಬಗ್ಗೆ ಸುಳಿವು ನೀಡಿದ್ದಾರೆ.

Leave a Comment