ಚಿತ್ರರಂಗದಲ್ಲಿ ಉಳಿಯಲು ಕಠಿಣ ಪರಿಶ್ರಮ ಅಗತ್ಯ: ಅಕ್ಷಯ್

ಮುಂಬೈ ಡಿ.30 – ಚಿತ್ರರಂಗದಲ್ಲಿ ಉಳಿಯಲು ಶ್ರಮಿಸುವುದು ಬಹಳ ಮುಖ್ಯ ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೇಳಿದ್ದಾರೆ.

ಅಕ್ಷಯ್ ಕುಮಾರ್ ಚಿತ್ರರಂಗಕ್ಕೆ ಕಾಲಿಟ್ಟು ಮೂರು ದಶಕಗಳಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸಿನ ಛಾಪು ಮೂಡಿಸಿದ ಅಕ್ಷಯ್, ಯಶಸ್ಸು ತನಗೆ ವಿವಿಧ ರೀತಿಯ ಕೆಲಸಗಳನ್ನು ಮಾಡಲು ಮತ್ತು ಸಾಹಸ ಮಯ ಹೆಜ್ಜೆ ಇಡಲು ಅನುಕೂಲಮಾಡಿಕೊಟ್ಟಿದೆ ಎಂದು ತಿಳಿಸಿದ್ದಾರೆ.

“ಗುಡ್ ನ್ಯೂಸ್” ಚಿತ್ರಕ್ಕಾಗಿ ಪ್ರೇಕ್ಷಕರಿಂದ ಸಿಗುತ್ತಿರುವ ಪ್ರೀತಿಯನ್ನು ಕಂಡು ಅಕ್ಷಯ್ ಸಂತೋಷಗೊಂಡಿದ್ದಾರೆ. “ನನ್ನ ಎಲ್ಲಾ ಚಲನಚಿತ್ರಗಳು ಪ್ರೇಕ್ಷಕರಿಂದ ಪ್ರೀತಿಸಲ್ಪಟ್ಟಿವೆ. ನನ್ನ ಚಲನಚಿತ್ರಗಳು ಇಷ್ಟು ಹಣವನ್ನು ಗಳಿಸಿವೆ ಎಂದು ನಂಬಲು ಸಾಧ್ಯವಿಲ್ಲ. ಈಗ ಉದ್ಯಮದಲ್ಲಿ ಹಣ ಹೆಚ್ಚುತ್ತಿದೆ, ಈ ಕಾರಣದಿಂದಾಗಿ ನಿರ್ಮಾಪಕರು ಎಲ್ಲಾ ರೀತಿಯ ಚಲನಚಿತ್ರಗಳನ್ನು ಮಾಡುತ್ತಿದ್ದಾರೆ” ಎಂದಿದ್ದಾರೆ.

ಧರ್ಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿರುವ “ಗುಡ್ ನ್ಯೂಸ್” ಚಿತ್ರದಲ್ಲಿ ಕರೀನಾ ಕಪೂರ್ ಖಾನ್, ದಿಲ್ಜಿತ್ ದೋಸಾಂಜ್ ಮತ್ತು ಕಿಯಾರಾ ಅಡ್ವಾಣಿ ಜೊತೆಗೆ ಅಕ್ಷಯ್ ಕುಮಾರ್ ನಟಿಸಿದ್ದಾರೆ. ಈ ವರ್ಷ, ಅಕ್ಷಯ್ ಅವರ ಇತರ ಮೂರು ಚಿತ್ರಗಳಾದ ‘ಕೇಸರಿ’, ‘ಮಿಷನ್ ಮಂಗಲ್’, ‘ಹೌಸ್ ಫುಲ್ 4’ ಸಹ ಬಿಡುಗಡೆಯಾಗಿ ಯಶ ಕಂಡಿವೆ.

Leave a Comment