ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡ ನಾಗಿಣಿ -2 ಧಾರಾವಾಹಿ

ಬೆಂಗಳೂರು, ಫೆ ೨೦- ಕನ್ನಡ ಕಿರುತೆರೆಯಲ್ಲಿಯೇ ಪ್ರಫ್ರಥಮ ಬಾರಿಗೆ ನಾಗಿಣಿ-2 ಧಾರಾವಾಹಿಯ ಪ್ರೀಮಿಯರ್ ಶೋ ಅನ್ನು ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಗಿದೆ.

ಇತ್ತೀಚೆಗೆ ಆರಂಭವಾದ ನಾಗಣಿ-2 ಧಾರಾವಾಹಿ ಅಪಾರ ಪ್ರೇಕ್ಷಕರನ್ನು ಹೊಂದುವ ಮೂಲಕ ಆಕರ್ಷಿಸಿದ್ದು, ಕಿರುತೆರೆಯಲ್ಲಿ ಹೊಸ ಸಂಚಲನ ಮೂಡಿಸಿದೆ.

ಕಿರುತೆರೆ ಲೋಕದಲ್ಲಿ ದಾಖಲೆ ಸೃಷ್ಟಿ ಮಾಡಿದ “ನಾಗಿಣಿ” ಧಾರಾವಾಹಿ, ಇದೀಗ ನಾಗಿಣಿ-2 ಆಗಿ ಮತ್ತೆ ಹೊಸ ರೂಪದಲ್ಲಿ ಕಾಣಿಸಿಕೊಂಡಿದೆ. ಕುತೂಹಲ ಮೂಡಿಸುವಂಥ ಚಿತ್ರಕಥೆ, ಹೆಸರಾಂತ ತಾರಾಬಳಗ, ನೈಜ ಅನಿಸುವಂಥ ಗ್ರಾಫಿಕ್ಸ್ ಮತ್ತು ಅದ್ಧೂರಿ ಸೆಟ್ ಹಾಗೂ ಹೊಸತನ ಎನಿಸುವಂಥ ಮೇಕಿಂಗ್‌ನಿಂದಾಗಿ “ನಾಗಿಣಿ 2” ವಿಶೇಷ ಅನಿಸಿದೆ.

nagini-7

ಕನ್ನಡ ಕಿರುತೆರೆ ಲೋಕದಲ್ಲಿ ನಾನಾ ಪ್ರಯೋಗಗಳನ್ನು ಮಾಡಿರುವ ಜೀ ಕನ್ನಡ ವಾಹಿನಿ ನಾಗಿಣಿ-2 ಲಾಂಚ್ ಅನ್ನು ವಿಶೇಷವಾಗಿ ಆಯೋಜನೆ ಮಾಡಲಾಗಿತ್ತು. ಕಿರುತೆರೆ ಲೋಕದಲ್ಲೇ ಪ್ರಥಮ ಎನ್ನುವಂತೆ ಈ ಧಾರಾವಾಹಿಯ ಪ್ರೀಮಿಯರ್ ಶೋ ಅನ್ನು ಥಿಯೇಟರ್‌ನಲ್ಲಿ ಆಯೋಜನೆ ಮಾಡಲಾಗಿತ್ತು. ಮೈಸೂರು, ಶಿವಮೊಗ್ಗ, ಗದಗ ಮತ್ತು ಹಾಸನದ ಮಲ್ಟಿಪ್ಲಕ್ಸ್ ಚಿತ್ರಮಂದಿರಗಳಲ್ಲಿ ಆಯೋಜನೆ ಮಾಡಲಾಗಿದ್ದ ನಾಗಿಣಿ-೨ ಧಾರಾವಾಹಿಯ ವಿಶೇಷ ಪ್ರದರ್ಶನದಲ್ಲಿ ಜೀ ಕನ್ನಡ ವಾಹಿನಿಯ ಸ್ಪಂದನಾ ಮಹಿಳಾ ಕ್ಲಬ್ ಸದಸ್ಯರು ಮತ್ತು ಅವರ ಕುಟುಂಬದ ಸದಸ್ಯರು ಭಾಗಿಯಾಗಿದ್ದರು.

nagini

ಪ್ರೀಮಿಯರ್ ಶೋ ವೀಕ್ಷಿಸಿದವರು ಗ್ರಾಫಿಕ್ಸ್, ದೃಶ್ಯ ವೈಭವ, ಕುತೂಹಲ ಮೂಡಿಸುವಂತಹ ಕಥೆ ಮತ್ತು ಕಲಾವಿದರ ನಟನೆ ಮೆಚ್ಚಿಗೆ ವ್ಯಕ್ತಪಡಿಸಿದರು.

ಹತ್ತು ಹಲವು ವಿಶೇಷಗಳನ್ನು ಹೊತ್ತು ಬರುತ್ತಿರುವ “ನಾಗಿಣಿ-2 ” ಧಾರಾವಾಹಿಯಲ್ಲಿ ಅನೇಕ ಕೌತುಕದ ವಿಷಯಗಳಿವೆ. ಪವಿತ್ರ ಹುಣ್ಣಿಮೆ ದಿನದಂದು ನಾಗಮಣಿಯನ್ನು ಹೊರಗಿಟ್ಟು ಮೈ ಮರೆಯುವ ಹಾವುಗಳು, ನಾಗಮಣಿಯನ್ನು ಕಳೆದುಕೊಳ್ಳುವ ಸನ್ನಿವೇಶವನ್ನು ವಿಭಿನ್ನವಾಗಿ ಚಿತ್ರಿಸಲಾಗಿದೆ. ಅದಕ್ಕಾಗಿ ವಿಶೇಷ ಸೆಟ್ ಕೂಡ ಹಾಕಲಾಗಿದೆ. ಜತೆಗೆ ಪ್ರತಿ ಸಂಚಿಕೆಯನ್ನೂ ವಿಭಿನ್ನವಾಗಿ ಚಿತ್ರೀಕರಿಸಲಾಗಿದೆ.

ಫೆ.೧೭ರಿಂದ ಶುರುವಾಗಿರುವ “ನಾಗಿಣಿ -2” ಧಾರಾವಾಹಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತಿದೆ.

 

Leave a Comment