ಚಿತ್ರದುರ್ಗ; ಹುತ್ಮಾತರ ದಿನಾಚರಣೆ

ಚಿತ್ರದುರ್ಗ.ಜ.31- ತಾಲ್ಲೂಕು ಕಕ್ಕೇಹರವು ಗ್ರಾಮದಲ್ಲಿ ಭಾರತ ಸರ್ಕಾರ ನೆಹರು ಯುವಕೇಂದ್ರ ಚಿತ್ರದುರ್ಗ ಕುವೆಂಪು ಸಾಮಾಜಿಕ, ಸಾಹಿತ್ಯ, ಸಾಂಸ್ಕøತಿಕ ಕಲಾ ಯುವಕ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹುತ್ಮಾತರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಕುರಿತು ಗ್ರಾಮದ ಮುಖಂಡರಾದ ದುರುಗಪ್ಪ.ಟಿ ಮಾತನಾಡಿ ನಮ್ಮ ದೇಶದ ರಕ್ಷಣೆಗಾಗಿ ಸಾವಿರಾರು ಹೋರಾಟಗಾರರು ಹೋರಾಟ ಮಾಡಿ ತಮ್ಮ ಜೀವನವನ್ನು ಮುಡುಪಾಗಿಟ್ಟು ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ ಎಂದು ತಿಳಿಸಿದರು. ನಂತರ ಯುವ ಮುಖಂಡರಾದ ಮಹಾಂತೇಶ್.ಟಿ ಮಾತನಾಡಿ ಸ್ವಾತಂತ್ರಕ್ಕಾಗಿ ಅನೇಕರು ರಾತ್ರಿ ಹಗಲು ಎನ್ನದೇ ಹೋರಾಟ ಮಾಡಿದ್ದಾರೆ. ಈ ದಿನ ಅವರ ನೆನಪಿಗಾಗಿ ಹುತ್ಮಾತರ ದಿನಾಚರಣೆಯನ್ನು ಮಾಡುತ್ತಿದ್ದು ಅವರಿಗೆ ನಮ್ಮ ದೇಶದ ನಾಗರೀಕರಿಂದ ನಮನವನ್ನು ಸಲ್ಲಿಸುತ್ತೇವೆ. ಅದೇ ರೀತಿ ಪ್ರತಿಯೊಬ್ಬರು ದೇಶಕ್ಕಾಗಿ ದುಡಿದ ಹುತ್ಮಾತರಿಗೆ ಅವರ ಸ್ವರಣೆ ಮಾಡಿ ಗೌರವ ಸಲ್ಲಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಯುವ ಪ್ರಶಸ್ತಿ ಪುರಸ್ಕøತರಾದ ಮಂಜುನಾಥ್, ರುದ್ರಪ್ಪ, ಕರಿಯಪ್ಪ, ಗೌಡ್ರು ತಿಮ್ಮಣ್ಣ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಡಿ.ಮುರುಗೇಂದ್ರಪ್ಪ, ಅಪ್ಪಿ, ಮಾರುತಿ, ನಾಗರಾಜ್, ವiಹಾಂತೇಶ್, ಯುವ ಸಂಘದ ಪದಾಧಿಕಾರಿಗಳು ಭಾಗವಹಿಸಿದರು.

Leave a Comment