ಚಿತ್ರದುರ್ಗ: ದಿ.23ಕ್ಕೆ 3ನೇ ರಾಜ್ಯ ಸಮ್ಮೇಳನ

ರಾಯಚೂರು.ಏ.21- ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪಂಗಡ ನೌಕರರ ಒಕ್ಕೂಟ ರಾಜ್ಯ ಸಮಿತಿಯ ಮೂರನೇ ರಾಜ್ಯ ಸಮ್ಮೇಳನ ಹಾಗೂ ಅಂಬೇಡ್ಕರ್ ಜನ್ಮದಿನ ಸಮಗ್ರ ಮೀಸಲಾತಿ ಸಂರಕ್ಷಣಾ ದಿನ, ವಿಚಾರ ಸಂಕೀರ್ಣವನ್ನು ದಿ. 23 ರಂದು ಚಿತ್ರದುರ್ಗದ ಗುರುಭವನದಲ್ಲಿ ಹಮ್ಮಿಕೊಳ್ಳಲಾಗಿರುವುದಾಗಿ ರಾಜ್ಯ ಸಮಿತಿ ಸಂಚಾಲಕ ನರಸಿಂಹಲು ಹೇಳಿದರು.

ಅವರಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಪರಿಶಿಷ್ಟ ಜಾತಿ, ಪಂಗಡ ನೌಕರ ಬಾಂಧವರ ಹಿಂಬಡ್ತಿ ನಿಯಮಕ್ಕೆ ಒಳಗಾದಲ್ಲಿ 16 ಸಾವಿರಕ್ಕೂ ಅಧಿಕ ನೌಕರರು ಸಂಕಷ್ಟಕ್ಕೆ ತುತ್ತಾಗಲಿದ್ದಾರೆ. ಸಂವಿಧಾನಿಕ ಮೀಸಲಾತಿ ಮುಂಬಡ್ತಿ ಮೀಸಲಾತಿ ಸಂರಕ್ಷಣೆಗಾಗಿ ಸಂಘಟಿತರಾಗಿ ಹಕ್ಕೊತ್ತಾಯ ಕುರಿತು ಪ್ರಭುತ್ವದ ಮೇಲೆ ತೀವ್ರ ಒತ್ತಡವೇರುವ ನಿಟ್ಟಿನಲ್ಲಿ ಚಿತ್ರದುರ್ಗದ ಗುರುಭವನದಲ್ಲಿ ಬೆಳಿಗ್ಗೆ 10.30 ಕ್ಕೆ 3 ನೇ ರಾಜ್ಯ ಸಮ್ಮೇಳನ ಹಾಗೂ ರಾಜ್ಯಮಟ್ಟದ ವಿಚಾರ ಸಂಕೀರ್ಣ ಆಯೋಜಿಸಲಾಗಿದೆ.

ರಾಜ್ಯದ ಪ್ರಮುಖ ಅಧಿಕಾರಿಗಳು, ಚಿಂತಕರು, ಲೇಖಕರು, ನ್ಯಾಯವಾದಿಗಳು, ಚಿಂತನ-ಮಂಥನ ವಿಚಾರ ಸಂಕೀರ್ಣದಲ್ಲಿ ಭಾಗವಹಿಸಲಿದ್ದು, ಪರಿಶಿಷ್ಟ ಜಾತಿ, ಪಂಗಡದ ಕೇಂದ್ರ, ರಾಜ್ಯ ಅರೆ ಸರಕಾರಿ ಸ್ಥಳೀಯ ಸಂಸ್ಥೆ, ಖಾಸಗಿ ಶಿಕ್ಷಣ ಸಂಸ್ಥೆ ಅಧಿಕಾರಿಗಳು ಮತ್ತು ವಿದ್ಯಾರ್ಥಿ ಯೋಜನೆ ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಂವಿಧಾನ ರಕ್ಷಣೆಗೆ ಕೈಜೋಡಿಸ ಬೇಕೆಂದರು.  ರಾಜ್ಯ ಸಂಚಾಲಕರಾದ ಎಸ್.ಮಾರೆಪ್ಪ, ತಿಮ್ಮಪ್ಪ, ಲಕ್ಷ್ಮೀರೆಡ್ಡಿ, ಚಂದ್ರಶೇಖರ, ಶಾಂತಕುಮಾರ, ರಾಮಚಂದ್ರಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment