ಚಿಣ್ಣರಿಗೆ ಚಳಿ ತಡೆಯವ ಉಡುಪುಗಳ ವಿತರಣೆ

ಪಾವಗಡ, ಜ. ೧೧- ಪಟ್ಟಣದಲ್ಲಿ ಇತ್ತೀಚೆಗೆ ಚಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕ ಮಕ್ಕಳು ಸ್ವೆಟರ್ ಇಲ್ಲದೆ ಚಳಿಯಲ್ಲಿ ಓಡಾಡುವುದನ್ನು ಕಂಡು ಚಿಕ್ಕ ಮಕ್ಕಳಿಗೆ ಚಳಿಯನ್ನು ತಡೆಯುವಂತಹ ಉಡುಪುಗಳನ್ನು ನೀಡಲಾಗಿದೆ ಎಂದು ಶ್ರೀ ಜಪಾನಂದಾಜೀ ಸ್ವಾಮೀಜಿ ತಿಳಿಸಿದರು.

ಪಟ್ಟಣದಲ್ಲಿ ಪುಟ್ಟ ಪುಟ್ಟ ಕಂದಮ್ಮಗಳಿಗೆ ಬೆಚ್ಚನೆಯ ಉಣ್ಣೆ ಸ್ವೆಟರ್ ಹಾಗೂ ಟೋಪಿಗಳನ್ನು ವಿತರಿಸಿ ಅವರು ಮಾತನಾಡಿದರು.

ವಾತ್ಸಲ್ಯ ಸುಧಾ ಯೋಜನೆಯಡಿ ಮಕ್ಕಳಿಗೆ ಚಳಿ ತಡೆಯುವಂತಹ ಉಣ್ಣೆ ಸ್ವೆಟರ್, ಟೋಪಿ ನೀಡಿದ್ದು, ಪ್ರತಿನಿತ್ಯ ಬಿಸಿ ಹಾಲನ್ನು ಕೊಡಲಾಗುವುದು ಎಂದು ತಿಳಿಸಿದರು.

ಪಾವಗಡದಲ್ಲಿ ಎಂದಿಲ್ಲದ ಚಳಿ ಹಾಗೂ ಶೀತಗಾಳಿ ಬೀಸುತ್ತಿದೆ. ಈ ಸಂದರ್ಭದಲ್ಲಿ ಪ್ರತಿನಿತ್ಯ “ವಾತ್ಸಲ್ಯ ಸುಧಾ” ಯೋಜನೆಯಡಿ ಪ್ರತಿದಿನ ಮಕ್ಕಳಿಗೆ ಬಿಸಿ ಹಾಲು, ಹಣ್ಣು, ಬ್ರೆಡ್, ಉಪ್ಪಿಟ್ಟು ಮುಂತಾದವುಗಳನ್ನು ಹಲವು ವರ್ಷಗಳಿಂದ ನೀಡುತ್ತಾ ಬರುತ್ತಿವುದು ಎಲ್ಲರಿಗೂ ತಿಳಿದ ವಿಚಾರವೇ ಸರಿ. ಪ್ರತಿಯೊಂದು ಮಗುವಿಗೂ ತಾವೇ ನೀಡಿ ಮಕ್ಕಳೊಂದಿಗೆ ಆನಂದವನ್ನು ಅನುಭವಿಸಿದರು. ವಿಪರೀತ ಚಳಿಯಲ್ಲಿಯೂ ಮಕ್ಕಳು ಸಂತಸದ ಹೊನಲು ಹರಿಸುತ್ತಿರುವುದು ಸ್ವಾಮಿ ವಿವೇಕಾನಂದರು ಬಯಸಿದ ಸೇವಾಜ್ಞವಲ್ಲದೆ ಮತ್ತೇನು? ಅಲ್ಲವೇ ಒಮ್ಮೆ ಯೋಚಿಸಿ ನೋಡಿ ಎಂದರು.

Leave a Comment