ಚಿಕ್ಕಬಳ್ಳಾಪುರ ಜನಜೀವನ ಯಥಾಸ್ಥಿತಿ

ಚಿಕ್ಕಬಳ್ಳಾಪುರ, ಜ. ೯- ಕರ್ನಾಟಕ ಪ್ರಾಂತ ರೈತಸಂಘ ಮತ್ತು ಸಿ.ಐ.ಟಿ.ಯು. ಸಂಘಟನೆಗಳು 12 ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ನೀಡಿದ್ದ 2 ದಿನಗಳ ಬಂದ್ ಕರೆಯ 2ನೇ ದಿನವಾದ ಇಂದು ಜನಜೀವನ ಯಥಾಸ್ಥಿತಿಯಲ್ಲಿದೆ.

ಶಾಲಾ- ಕಾಲೇಜುಗಳು ಎಂದಿನಂತೆ ಆರಂಭಗೊಂಡಿದೆ. ವಾಣಿಜ್ಯ ವಲಯಗಳಲ್ಲಿ ಬ್ಯಾಂಕುಗಳು, ಅಂಗಡಿ, ಮುಂಗಟ್ಟುಗಳು, ಆಟೋ ರಿಕ್ಷಾ, ಒಳಗೊಂಡಂತೆ ವಿವಿಧ ಸಾರಿಗೆ ವಾಹನಗಳು ಬೀದಿಗಿಳಿದಿವೆ.

ಒಟ್ಟಾರೆ ಬಂದ್ ಪರಿಣಾಮ ನಿನ್ನೆ ಬಹುಮಟ್ಟಿಗೆ ಸಾಫಲ್ಯತೆ ಹೊಂದಿದ್ದರೆ, ಇಂದು ತನ್ನ ಪರಿಣಾಮವನ್ನು ಬೀರುವಲ್ಲಿ ವಿಫಲವಾಗಿದೆ. ಆದರೂ ಸಹ ಕೆಎಸ್‌ಆರ್‌ಟಿಸಿ ಬಸ್‌ಗಳು ಇಂದು ಸಹ ರಸ್ತೆಗಿಳಿಯದೆ ಇರುವ ಕಾರಣ ಜಿಲ್ಲಾ ಕೇಂದ್ರಕ್ಕೆ ಬರಲು ಮತ್ತು ಜಿಲ್ಲಾ ಕೇಂದ್ರಕ್ಕೆ ಹೊರಡಲು ಪ್ರಯಾಣಿಕರಿಗೆ ಅಡಚಣೆ ಉಂಟಾಗಿದೆ.

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪೋಸ್ಟ್ ಆಫೀಸ್ ಇಂದು ಸಹ ಕಾರ್ಯಾರಂಭ ಮಾಡಿಲ್ಲ. ನಾಗರೀಕರ ಅನಿಸಿಕೆ ಪ್ರಕಾರ ಮೇಲಿಂದ ಮೇಲೆ ಬಂದ್‌ಗೆ ಕರೆ ಕೊಡುವುದು. ಬಡವರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿದಂತಾಗುತ್ತದೆ ಎಂಬ ನಿರಾಶೆಯ ಮಾತುಗಳು ಕೇಳಿ ಬಂದವು.

Leave a Comment