ಚಾಮುಡೇಶ್ವರಿ ಸನ್ನಿಧಿಗೆ ನಟ ದರ್ಶನ್ ಭೇಟಿ

ಮೈಸೂರು, ಜು ೫- ಆಷಾಢ ಶುಕ್ರವಾರದ ಹಿನ್ನಲೆಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಾನಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ ಭೇಟಿ ದೇವಿಯ ದರ್ಶನ ಪಡೆದಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ಪ್ರತಿ ವರ್ಷ ಆಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಅದೇ ರೀತಿ ಈ ವರ್ಷವೂ ಕೂಡ ಆಷಾಢ ಶುಕ್ರವಾರ ಹಿನ್ನೆಲೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ದೇವಿ ದರ್ಶನ ಪಡೆದಿದ್ದಾರೆ.

ಇಂದು ಶಕ್ತಿದೇವತೆ ಚಾಮುಂಡಿಗೆ ವಿಶೇಷ ಪೂಜೆ, ಪುನಸ್ಕಾರ ನೆರವೇರಲಿದೆ. ಮುಂಜಾನೆಯೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಚಾಮುಂಡಿ ಸನ್ನಿಧಿಗೆ ಬರ್ತಿದ್ದಾರೆ. ಬೆಟ್ಟದ ತುದಿವರೆಗೆ ಇದ್ದ ವಾಹನ ಸಂಚಾರ ಸ್ಥಗಿತಗೊಳಿಸಿ, ಸಂಚಾರ ದಟ್ಟಣೆ ತಡೆಯಲಾಗಿದೆ. ದೇವಿಯನ್ನ ಸಿಂಗರಿಸಿ ವಿವಿಧ ಪೂಜೆಗಳನ್ನ ನೆರವೇರಿಸಲಾಗ್ತಿದ್ದು, ಚಾಮುಂಡಿ ಬೆಟ್ಟದಲ್ಲಿ ಸಡಗರ ಮನೆ ಮಾಡಿದೆ.

ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ದರ್ಶನ್,  ನಾನು ಪ್ರತಿವರ್ಷವೂ ಚಾಮುಂಡಿ ಬೆಟ್ಟಕ್ಕೆ ಬಂದು ತಾಯಿ ದರ್ಶನ ಪಡೀತಿನಿ. ಆ ತಾಯಿಯಿಂದನೇ ನಾವೆಲ್ಲ ಇರೋದು. ದೇವಿ ಎಲ್ಲರಿಗೂ ಒಳ್ಳೆಯದು ಮಾಡಲಿ ಅಂತ ನಾನು ಪ್ರಾರ್ಥಿಸುತ್ತೇನೆ ಎಂದರು. ಇನ್ನು  ಚಾಮುಂಡೇಶ್ವರಿಯ ಸನ್ನಿಧಿಗೆ ಆಗಮಿಸಿದ ಭಕ್ತರು ತಮ್ಮ ನೆಚ್ಚಿನ ನಟ ದರ್ಶನ್ ಜೊತೆ ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.

Leave a Comment