ಚಾಮುಂಡೇಶ್ವರಿ ಸಮರ ಕತ್ತಿ ಜಳಪಿಸಿದ ಸಿಎಂ

ಮೈಸೂರು,ಏ. ೧೬- ರಾಜ್ಯ ವಿಧಾನ ಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಚುನಾವಣಾ ಕಣ ರಂಗೇರುತ್ತಿದ್ದು, ಪ್ರತಿಷ್ಟೆಯ ಕಣ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕತ್ತಿ ಜಳಪಿಸುವ ಮೂಲಕ ರಣಾಂಗಣಕ್ಕಿಳಿದಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮೂರನೇ ಹಂತದ ಚುನಾವಣಾ ಪ್ರಚಾರ ಆರಂಭವಾಗಿದ್ದು, ಲಿಂಗಬುದ್ದಿ ಪಾಳ್ಯದ ಸಿದ್ದಪಾಜಿ, ರಾಮಮಂದಿರ, ಮಂಟೇಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಚಾಮುಂಡಿ ಅಧಿಪತ್ಯಕ್ಕೆ ನಾನು ರೆಡಿ ಎಂದು ಸಿಎಂ ಸಿದ್ದರಾಮಯ್ಯ ಕತ್ತಿಹಿಡಿದು ಭರ್ಜರಿ ಸ್ಟೆಪ್ ಹಾಕಿದರು.
ಲಿಂಗಬುದ್ದಿ ಪಾಳ್ಯದ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸಿ ಹೊರ ಬಂದ ಬಳಿಕ ವೀರಭದ್ರ ಕುಣಿತದ ವೇಳೆ ಕತ್ತಿ ಹಿಡಿದು ಸಿಎಂ ಸಿದ್ದರಾಮಯ್ಯ ಒಂದು ಸ್ಟೆಪ್ ಹಾಕುವ ಮೂಲಕ ಚಾಮುಂಡೇಶ್ಚರಿ ರಣಾಂಗಣದಲ್ಲಿ ಕತ್ತಿ ಜಳಪಿಸಿದರು.
ಮೂರನೇ ಹಂತದ ಚುನಾವಣಾ ಪ್ರಚಾರವನ್ನ ಸಿಎಂ ಸಿದ್ದರಾಮಯ್ಯ ಮೈಸೂರಿನ ಲಿಂಗಾಬುದಿಯಲ್ಲಿ ಶುರುಮಾಡಿದ್ದು, ತೆರೆದ ವಾಹನದಲ್ಲಿ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ, ಜೊತೆ ಸೇರಿ ಸಿಎಂ ಪ್ರಚಾರ ನಡೆಸುತ್ತಿದ್ದಾರೆ. ಗ್ರಾಮಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯಗೆ ಲಿಂಗಾಬುದಿ ಗ್ರಾಮದ ಪುರುಷರೇ ಆರತಿ ಮಾಡಿದರು. ಬಿಸಿ ಬೇಸಿಗೆಯ ಜಳದಲಿ ಬಿಸಿಲ ತಾಪಕ್ಕೆ ಸಿಎಂ ಸಿದ್ದರಾಮಯ್ಯ ಟೋಪಿ ಮೊರೆ ಹೋಗಿದ್ದಾರೆ

Leave a Comment