ಚಾಕಲೇಟ್ ಬಾಯ್ ಚಾಣಾಕ್ಷ

ಹಿರಿಯ ಕಲಾವಿದ ಕೀರ್ತಿರಾಜ್ ಪುತ್ರ ನಟ ಧರ್ಮ ಕೀರ್ತಿರಾಜ್ “ಚಾಣಾಕ್ಷನಾಗಿದ್ದಾರೆ.

ಚಾಕಲೇಟ್ ಬಾಯ್ ಈಗ ಮಾಸ್ ಹೀರೋ ಆಗಲು ಹೊರಟಿದ್ದಾರೆ.ಅದುವೇ ಚಾಣಾಕ್ಷತನದಿಂದ.ಚಿತ್ರ ಸದ್ದುಗದ್ದಲವಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿದ್ದು ಹೊಸ ವರ್ಷದ ಆರಂಭದಲ್ಲಿ ತೆರೆಗೆ ಬರುವ ಎಲ್ಲಾ ಸಾಧ್ಯತೆಗಳಿವೆ. ಧರ್ಮ ಕೀರ್ತಿರಾಜ್‌ಗೆ ನಾಯಕಿಯಾಗಿ ಅರ್ಚನಾ ಕಾಣಿಸಿಕೊಂಡಿದ್ದಾರೆ.ಕಳದವಾರ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭವಿತ್ತು.ದರ್ಶನ್,ಕೀರ್ತಿರಾಜ್ ಸೇರಿ ಹಲವು ಗಣ್ಯರು ಆಗಮಿಸಿ ಚಿತ್ರಕ್ಕೆ ಮತ್ತು ತಂಡಕ್ಕೆ ಶುಭ ಹಾರೈಸಿಸದರು.

film-chanakshya-hero-dharma-keertiraja

ಈ ವೇಳೆ ದರ್ಶನ್,ಕಲಾವಿದರು ಮಕ್ಕಳಿಗೆ ಅವಕಾಶ ಸಿಗುವುದು ಕಷ್ಟದ ಕೆಲಸ. ಅವಕಾಶ ಸಿಕ್ಕಿ ಎರಡು ಮೂರು ಟೇಕ್ ತೆಗೆದುಕೊಂಡರೆ ಅವರ ಮಗ ಇವರಗ ಅನ್ನುತ್ತಾರೆ.ಧರ್ಮ ಚಾಕಲೇಟ್ ಹೀರೋ ಅಲ್ಲ ಮಾಸ್ ಹೀರೋ ಒಳ್ಳೆಯದಾಗಲಿ ಎಂದು ಹರಸಿದರು.

ನಿರ್ದೇಶಕ ಮಹೇಶ್ ಚಿನ್ಮಯಿ,ತಂದೆಯ ಕನಸನ್ನು ಮಗ ಚಾಣಾಕ್ಷತನದಿಂದ ಹೇಗೆ ಈಡೇರಿಸುತ್ತಾನೆ ಎನ್ನುವುದು ಚಿತ್ರದ ತಿರುಳು.ಧರ್ಮ ಮಾಸ್ ಹಿರೋ ಆಗಲಿದ್ದಾರೆ. ಲಾಕಪ್ ಡೆತ್ ಚಿತ್ರದ ಬಳಿಕ ಈ ಚಿತ್ರದಲ್ಲಿ ಥ್ರಿಲ್ಲರ್ ಮಂಜು ಅವರು ನಾಲ್ಕು ಆಕ್ಷನ್ ಸನ್ನಿವೇಶ ಚಿತ್ರೀಕರಿಸಿದ್ದಾರೆ.

ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದ್ದು ಜನವರಿ ೧೯ರಂದು ಬಿಡುಗಡೆ ಮಾಡುವ ಉದ್ದೇಶವಿದೆ. ಇದೊಂದು ಲವ್, ಆಕ್ಷನ್,ಸೆಂಟಿಮೆಂಟ್,ಕಾಮಿಡಿಯಿಂದ ಕೂಡಿದೆ ಎಂದರು. ನಿರ್ಮಾಪಕ ಜಿ.ವೆಂಕಟೇಶ್, ೮೦ ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.ಆಕ್ಷನ್ ಸನ್ನಿವೇಶ ಚಿತ್ರದ ಹೈಲೈಟ್ ಎಂದು ವಿವರ ನೀಡಿದರು.

ನಟ ಧರ್ಮ,ಇದೇ ಮೊದಲ ಬಾರಿಗೆ ಆಕ್ಷನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು  ಚಿತ್ರದ ಮೇಲೆ ಬಾರಿ ನಿರೀಕ್ಷೆ ಇದೆ. ಜೊತೆಗೆ ಆಕ್ಷನ್ ಸನ್ನಿವೇಶ ಚೆನ್ನಾಗಿ ಮೂಡಿ ಬಂದಿದೆ ಎಂದು ವಿವರ ನೀಡಿದರು.

ಮತ್ತೊಬ್ಬ ನಟ ಅಭಯ್,ಚಿತ್ರದಲ್ಲಿ ಇನ್ಸ್ ಪೆಕ್ಟರ್ ಪಾತ್ರ.ಹುಬ್ಬಳ್ಳಿ ಯಿಂದ ಬೆಂಗಳೂರಿಗೆ ಬರುತ್ತೇನೆ ಎಂದು ಪಾತ್ರದ ಬಗ್ಗೆ ವಿವರ ನೀಡಿದರು.ಲಹರಿ ಕಂಪನಿಯ ವೇಲು,ಧರ್ಮ ಕೀರ್ತಿರಾಜ್ ಚಿತ್ರರಂಗದಲ್ಲಿ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಸಂಗೀತ ನಿರ್ದೇಶಕ ಅಭಿಮಾನ್ ರಾಯ್,ಚಿತ್ರದಲ್ಲಿ ೫ ಹಾಡುಗಳಿವೆ ಎಲ್ಲವೂ ಒಂದಕ್ಕಿಂತ ಒಂದು ಚೆನ್ನಾಗಿ ಮೂಡಿ ಬಂದಿವೆ .ಜನ ಮೆಚ್ಚಿಕೊಂಡರೆ ನಮ್ಮ ಶ್ರಮ ಸಾರ್ಥಕ ಎಂದರು.

Leave a Comment