ಚಳಿಗಾಲದ ಸಮಸ್ಯೆ ನಿವಾರಣೆ ಹೇಗೆ?

ಚಳಿಗಾಲದಲ್ಲಿ ಕೂದಲಿನ ರಕ್ಷಣೆ ಮಾಡಬೇಕಾದುದು ಅತಿ ಮುಖ್ಯ. ಯಾಕೆಂದರೆ ಈ ತಂಪಾದ ಹವಾಗುಣದಲ್ಲಿ ಕೂದಲಿಗೆ ಒಂದಲ್ಲ ಒಂದು ರೀತಿಯ ತೊಂದರೆ ಬಂದೇ ಬರುತ್ತದೆ. ನಿಮಗೂ ಸಹ ಕೂದಲು ಉದುರುವಿಕೆ, ತಲೆಹೊಟ್ಟು, ಸೀಳು ಕೂದಲು ತೊಂದರೆ ಕಾಣಿಸಿಕೊಂಡರೆ ಏನು ಮಾಡುವುದು ಎಂದು ತಲೆ ಮೇಲೆ ಕೈ ಹೊತ್ತು ಕುಳಿತ್ತಿದ್ದೀರಿ ಅಲ್ಲವೇ..?

ಬೇವಿನ ಎಲೆಯಲ್ಲಿ ಆಂಟಿಸೆಪ್ಟಿಕ್ ಗುಣ ಇರುವುದರಿಂದ ಇದು ಕೂದಲು ಉದುರುವಿಕೆ, ತಲೆ ಹೊಟ್ಟನ್ನು ನಿವಾರಿಸುತ್ತದೆ. ಬೇವಿನ ಎಲೆಗಳ ಪೇಸ್ಟ್ ತಯಾರಿಸಿ ಕೂದಲಿಗೆ ಹಚ್ಚಿ ಅರ್ಧಗಂಟೆ ನಂತರ ಹೇರ್ ವಾಶ್ ಮಾಡಿದರೆ ಕೂದಲು ಉದುರುವಿಕೆ ತಲೆ ಹೊಟ್ಟನ್ನು ತಡೆಗಟ್ಟಬಹುದು.

ಕೊತ್ತಂಬರಿ ಸೊಪ್ಪು ಸಹ ಕೂದಲಿನ ರಕ್ಷಣೆಗೆ ಅತ್ಯುತ್ತಮ ಮದ್ದು. ಕೊತ್ತಂಬರಿ ಸೊಪ್ಪು ಪೇಸ್ಟ್ ತಯಾರಿಸಿ ಅದನ್ನು ತಲೆಗೆ ಹಾಕಿ ಬಿಸಿ ನೀರಿನಿಂದ ಕೂದಲನ್ನು ತೊಳೆಯುವುದರಿಂದಲೂ ಕೂದಲಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಕೂದಲನ್ನು ದಟ್ಟವಾಗಿಸಲು ಕರಿಬೇವಿನ ಎಲೆ ಅತ್ಯಂತ ಉತ್ತಮ ಮನೆ ಮದ್ದು. ಕೊಬ್ಬರಿ ಎಣ್ಣೆಗೆ ಒಂದು ಕಪ್ ಕರಿಬೇವು ಎಲೆ ಮತ್ತು ಮೆಂತ್ಯೆ ಸೇರಿಸಿ ಬಿಸಿ ಮಾಡಿ ನಂತರ ೧೫ ನಿಮಿಷದ ವರೆಗೆ ಅದನ್ನು ಕುದಿಸಿ ತಣ್ಣಗಾದ ಮೇಲೆ ಕೂದಲಿಗೆ ಹಚ್ಚಿಕೊಳ್ಳಬಹುದು. ಇದನ್ನು ದಿನನಿತ್ಯ ಪಾಲಿಸಿದರೆ ಕೂದಲು ಕಪ್ಪು ಹಾಗೂ ದಟ್ಟವಾಗಿ ಬೆಳೆಯುತ್ತದೆ.

ಆಲೋ ವೆರಾ ಜೆಲ್ ಹಾಕುವುದರಿಂದ ಕೂದಲು ಉದುರುವುದು ಕಡಿಮೆಯಾಗುವುದಲ್ಲದೆ, ಕೂದಲಿನ ಬೆಳವಣಿಗೆಗೂ ಸಹಕಾರಿಯಾಗಲಿದೆ.

Leave a Comment