ಚಳಿಗಾಲದ ಶೀತಕ್ಕೆ ಮನೆಮದ್ದು

ಚಳಿಗಾಲದಲ್ಲಿ ಕಾಡುವ ಶೀತದ ಸಮಸ್ಯೆಯಿಂದ ಪಾರಾಗಲು ಯಾವಾಗಲೂ ಮಾತ್ರೆಗಳನ್ನು ಸೇವಿಸುವುದು ಒಳ್ಳೆಯದಲ್ಲ, ಅನಿರೀಕ್ಷಿತವಾಗಿ ವಾತಾವರಣದಲ್ಲಿ ಬದಲಾವಣೆಯಾದರೆ ಮೊತ್ತ ಮೊದಲು ಕಾಡುವ ತೊಂದರೆ ಎಂದರೆ ಶೀತ. ಕಟ್ಟಿದ ಮೂಗು, ಗಂಟಲ ಬೇನೆ, ಬದಲಾದ ಸ್ವರ ಕಾಡುವ ಜ್ವರ, ನಡುಕವೂ ಕೆಲವರಿಗೆ ಸಾಮಾನ್ಯವಾಗಿ ಕಾಡುವ ಸಮಸ್ಯೆಯಾಗಿದೆ. ಶೀತ ಆದಾಗ ಏನು ಮಾಡಬೇಕು, ಏನು ಮಾಡಬಾರದು? ಹೆಚ್ಚಿನವರು ಇದಕ್ಕಾಗಿ ಸಾಮಾನ್ಯ ಪ್ಯಾರಾಸೆಟಮಾಲ್ ಮಾತ್ರೆಗಳನ್ನು ವೈದ್ಯರ ಅಪ್ಪಣೆಯಿಲ್ಲದೇ ಸೇವಿಸುತ್ತಾರೆ. ವೈದ್ಯರನ್ನು ಭೇಟಿಯಾಗಲು ಸಮಯ ಸಿಗದವರು ತಮಗೆ ತೋಚಿದ ಇನ್ನಾವುದೋ ಔಷಧಿಗಳನ್ನು ತಾವೇ ಮಾಡಿಕೊಳ್ಳುತ್ತಾರೆ.
ಶೀತವನ್ನು ಕಡಿಮೆಗೊಳಿಸಲು ಉತ್ತಮವೆಂದರೆ ಜೇನು. ಇದರ ಜೊತೆಗೆ ಹಸಿಶುಂಠಿ ಸಹಾ ಶೀತವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಇವುಗಳಲ್ಲಿರುವ ಪ್ರತಿಜೀವಕ ಗುಣಗಳು ಶೀತದ ರೋಗಾಣುಗಳನ್ನು ಕೊಲ್ಲಲು ಸಮರ್ಥವಾಗಿವೆ. ಜೇನು ಹಸಿಶುಂಠಿಯನ್ನು ಜಜ್ಜಿ ಸಮಪ್ರಮಾಣದ ಜೇನಿನೊಂದಿಗೆ ಬೆರೆಸಿ ಅರ್ಧ ಲೋಟ ಬಿಸಿ ಹಾಲಿನೊಂದಿಗೆ ಸೇವಿಸುವ ಮೂಲಕ ಶೀತ ತಕ್ಷಣವೇ ಕಡಿಮೆಯಾಗುತ್ತದೆ. ಅಲ್ಲದೇ ಕಟ್ಟಿಕೊಂಡಿದ್ದ ಮೂಗನ್ನು ತೆರೆದು ಶ್ವಾಸ ಎಳೆದುಕೊಳ್ಳುವುದನ್ನು ಸುಲಭವಾಗಿಸುತ್ತದೆ ಹಾಗೂ ಕಫವನ್ನು ನಿವಾರಿಸಿ ಗಂಟಲ ಬೇನೆಯನ್ನು ಕಡಿಮೆಗೊಳಿಸುತ್ತದೆ.
ಶೀತವನ್ನು ಕಡಿಮೆಗೊಳಿಸಲು ಇರುವ ಇನ್ನೊಂದು ಸಾಮಾಗ್ರಿ ಎಂದರೆ ಅರಿಶಿನ. ಇದನ್ನು ಒಂದಕ್ಕಿಂತ ಹೆಚ್ಚು ವಿಧದಲ್ಲಿ ಬಳಸಬಹುದು. ಅರಿಶಿನದ ಹಸಿ ಕೊಂಬುಗಳಿದ್ದರೆ ಒಂದು ಕೊಂಬನ್ನು ಕೆಂಡದ ಮೇಲೆ ಸುಟ್ಟು ಇದರಿಂದ ಹೊಮ್ಮುವ ಹೊಗೆಯನ್ನು ಮೂಗಿನಿಂದ ಎಳೆದುಕೊಳ್ಳುತ ಮೂಲಕ ತಕ್ಷಣದ ಪರಿಹಾರ ದೊರಕುತ್ತದೆ. ಅರಿಶಿನದ ಪುಡಿಯನ್ನು ಕೊಂಚ ಹಾಲಿನೊಂದಿಗೆ ಕುದಿಸಿ ಕುಡಿದು ಮಲಗುವ ಮೂಲಕವೂ ಉತ್ತಮವಾದ ಪರಿಹಾರ ದೊರಕುತ್ತದೆ.
ಗಂಟಲ ಬೇನೆಗೆ ಬೆಲ್ಲ ಉತ್ತಮವ ಪರಿಹಾರವಾಗಿದೆ. ಕೊಂಚ ನೀರಿನಲ್ಲಿ ಕೆಲವು ಕಾಳುಮೆಣಸುಗಳನ್ನು ಅಥವಾ ಕರಿಮೆಣಸನ್ನು ಸೇರಿಸಿ ಕುದಿಸಿ. ಬಳಿಕ ಕೊಂಚ ಜೀರಿಗೆ ಹಾಕಿ ಪರಿಮಳ ಬೀರತೊಡಗಿದ ಬಳಿಕ ಕೆಲವು ತುಂಡು ಬೆಲ್ಲವನ್ನು ಹಾಕಿ ಚಿಕ್ಕ ಉರಿಯಲ್ಲಿ ಕುದಿಯುವುದನ್ನು ಮುಂದುವರೆಸಿ. ಹಾಲಿಗೆ ಬೆಲ್ಲ ಹಾಕಿ ಕುಡಿಯಿರಿ, ಆರೋಗ್ಯ ಪಡೆಯಿರಿ ಗಂಟಲ ಬೇನೆ ಇದ್ದರೆ ಗಂಟಲ ಬೇನೆ ಇದ್ದರೆ ಬೆಲ್ಲ ಪೂರ್ಣವಾಗಿ ಕರಗುವವರೆಗೆ ಕುದಿಸಿ. ಈ ಪಾನೀಯವನ್ನು ಕುಡಿಯುವ ಮೂಲಕ ಗಂಟಲ ಬೇನೆ ಕಡಿಮೆಯಾಗುತ್ತದೆ ಹಾಗೂ ಎದೆಯಲ್ಲಿ ಕಟ್ಟಿಕೊಂಡಿದ್ದ ಕಫವನ್ನು ನಿವಾರಿಸಿ ಕೆಲವಾರು ಸೋಂಕುಗಳಿಂದ ರಕ್ಷಿಸುತ್ತದೆ.
ಮಸಾಲಾ ಟೀ ಮಸಾಲಾ ಟೀ ಲವಂಗ, ಚೆಕ್ಕೆ, ಒಣ ಶುಂಠಿ, ಹಸಿಶುಂಠಿ, ಕಾಳುಮೆಣಸು ಇತ್ಯಾದಿಗಳನ್ನು ಬೆರೆಸಿ ಮುಚ್ಚಳ ಮುಚ್ಚಿ ಕುದಿಸಿ ಬಳಿಕ ಸೋಸಿ ಹಾಲಿಲ್ಲದೇ ಸೇವಿಸಿ. ಸಕ್ಕರೆ ಬದಲಿಗೆ ಬೆಲ್ಲ ಬೆರೆಸಿ. ಅಥವಾ ಜೇನನ್ನೂ ಬೆರೆಸಿ ಕುಡಿಯಬಹುದು. ಕೆಮ್ಮು ನೆಗಡಿ ಇದ್ರೆ ಚೆಕ್ಕೆ ಮಸಾಲಾ ಟೀ ಕುಡೀರಿ.

Leave a Comment