ಚಲನಚಿತ್ರ ಪ್ರಶಸ್ತಿ ಹರಾಜು ಟೇಶಿ ಆರೋಪ, ನಾನಾ ವ್ಯಾಖ್ಯಾನ

ಕನ್ನಡ ಚಿತ್ರರಂಗ ಇತ್ತೀಚೆಗೆ ಒಂದಿಲ್ಲೊಂದು ವಿಷಯಗಳಿಂದ ಸುದ್ದಿಯಾಗುತ್ತಿದೆ. ಮೀಟೂ ಬೆನ್ನಲ್ಲೇ ಈಗ ರಾಜ್ಯ ಚಲನಚಿತ್ರ ಪ್ರಶಸ್ತಿಯ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ಹೊರಾಟದ ಸಮರಕ್ಕೆ ಅಣಿಯಾಗುತ್ತಿದೆ.

ಇದು ತೀರ್ಪು ನೀಡಲಾಗದ ಪ್ರೇಮ ಕಥೆ ” ಬೆಸ್ಟ್ ಫ್ರೆಂಡ್” ಚಿತ್ರಕ್ಕೆ ೨೦೧೭ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ಸಲಿಂಗ ಕಾಮದ ಕುರಿತು ಮಾಡಿರುವ ಚಿತ್ರಕ್ಕೆ ಪ್ರಶಸ್ತಿ ಬಂದಿಲ್ಲ ಎಂದು ಬೆಸ್ಟ್ ಫ್ರೆಂಡ್ ಚಿತ್ರ ತಿರುಗಿ ಬಿದ್ದಿದೆ. ಹೀಗಾಗಿ ಕಾನೂನು ಹೋರಾಟ ನಡೆಸಲು ಚಿತ್ರತಂಡ ಮುಂದಾಗಿದೆ.
ಈ ಬಾರಿ ಪ್ರಶಸ್ತಿ ಪಡೆದಿರುವ ’ಹೆಬ್ಬೆಟ್ಟು ರಾಮಕ್ಕ’ ಹಾಗು ’ಮಾರ್ಚ್ ೨೨’ ಚಿತ್ರದ ವಿರುದ್ದ ನೇರಾ ನೇರಾ ವಾಗ್ದಾಳಿ ನಡೆಸಿರುವ ನಿರ್ದೇಶಕ ಟೇಶಿ ವೆಂಕಟೇಶ್,ಚಲನಚಿತ್ರ ಪ್ರಶಸ್ತಿ ಇತ್ತೀಚಿಗೆ ಹರಾಜಾಗುತ್ತಿವೆ. ಅಷ್ಟೇ ಅಲ್ಲ ಮಾರಾಟಕ್ಕೂ ಇವೆ ಎನ್ನುವ ಬಾಂಬ್ ಸಿಡಿಸಿದ್ದು ಚಿತ್ರರಂಗದಲ್ಲಿ ನಾನಾ ವ್ಯಾಖ್ಯಾನಕ್ಕೂ ಕಾರಣವಾಗಿದೆ.
ಚಿತ್ರರಂಗದಲ್ಲಿ ಅಧಿಕಾರದಲ್ಲಿರುವ ರಾಜಕೀಯ ನಾಯಕರೊಂದಿಗೆ ಸಂಬಂಧ ಹೊಂದಿರುವವರು ಮತ್ತು ಲಾಭಿ ಮಾಡುವರು ಪ್ರಶಸ್ತಿಗಳನ್ನು ಪಡೆಯುತ್ತಾರೆ. ಲಾಭಿ ಮಾಡುವರಿಗೆ ಪ್ರಶಸ್ತಿ ನೀಡುವುದಾದರೆ ಕಷ್ಟ ಪಟ್ಟು ಸಿನಿಮಾ ಮಾಡುವ ಮಂದಿ ಏನಾಗಬೇಕು ಎಂದು ಪ್ರಶ್ನಿಸಿದ್ದಾರೆ.
ಹೆಬ್ಬೆಟ್ಟು ರಾಮಕ್ಕ ಚಿತ್ರದ ನಿರ್ದೇಶಕ ನಂಜುಂಡೇಗೌಡಗೆ ವಿಧಾನಸೌಧದ ಪ್ರತಿಯೊಂದು ಕಲ್ಲುಗಳೂ ಗೊತ್ತು ಹೀಗಾಗಿ ಲಾಭಿ ಮಾಡಿ ಪ್ರಶಸ್ತಿ ಪಡೆದಿದ್ದಾರೆ. ಅಲ್ಲದೆ ನಟಿ ತಾರಾ ಅನುರಾಧ ತಮಗಿರುವ ರಾಜಕೀಯ ಪ್ರಭಾವ ಬಳಸಿ ಇತ್ತೀಚಿನ ವರ್ಷಗಳಲ್ಲಿ ಒಂದರಮೇಲೆ ಒಂದರಂತೆ ಐದು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಅದೇ ರೀತಿ ಮಾರ್ಚ್ ೨೨ ನಿರ್ದೇಶಕ ಕೋಡ್ಲು ರಾಮಕೃಷ್ಣ ಕೂಡ. ವಿಷ್ಣುವರ್ಧನ್ ಪ್ರಶಸ್ತಿಗೆ ನನ್ನ ಹೆಸರೇಳಿ ಎಂದು ತಮ್ಮ ಬಳಿಯೇ ಒತ್ತಾಯ ಹೇರಿದ್ದರು. ಇಂತವರಿಗೆ ಪ್ರಶಸ್ತಿ ಬಂದಿದೆ. ಲಾಭಿ ಮಾಡಿ ಪ್ರಶಸ್ತಿ ಪಡೆಯುವುದು ನಮಗೆ ಗೊತ್ತಿಲ್ಲ ಹೀಗಾಗಿ ಬೆಸ್ಟ್‌ಫ್ರೆಂಡ್ ಚಿತ್ರ ಪ್ರಶಸ್ತಿಯಿಂದ ವಂಚಿತವಾಗಿದೆ.
ಹೆಬ್ಬಟ್ಟು ರಾಮಕ್ಕ ಚಿತ್ರವನ್ನು ಜನ ನೋಡಲಿ. ಬೆಸ್ಟ್ ಫ್ರೆಂಡ್ ಚಿತ್ರ ಚೆನ್ನಾಗಿದೆಯೋ ಇಲ್ಲವೋ ಎನ್ನುವುದನ್ನು ನಿರ್ಧರಸಲಿ. ಚಿತ್ರಕ್ಕೆ ಪ್ರಶಸ್ತಿ ನೀದೆ ವಂಚಿಸಿರುವ ಬಗ್ಗೆ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿಕೊಂಡಿದ್ದಾರೆ.
ಬಾಕ್ಸ್
೨೦೧೭ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಬೆಸ್ಟ್ ಫ್ರೆಂಡ್ ಚಿತ್ರಕ್ಕೆ ಪ್ರಶಸ್ತಿ ಬರದ ಹಿನ್ನೆಲೆಯಲ್ಲಿ ಕಾನೂನು ಹೋರಾಟಕ್ಕೆ ತಂಡ ಮುಂದಾಗಿದೆ.

Leave a Comment