ಚರ್ಮ ಸಮಸ್ಯೆಗಳು, ಪರಿಹಾರ

ಚರ್ಮ ಖಾಯಿಲೆಗಳು ಪ್ರತಿಯೊಬ್ಬರನ್ನು ಬಾಧಿಸುತ್ತದೆ. ಪುರುಷ ಮತ್ತು ಮಹಿಳೆಯರನ್ನು ಕಾಡುತ್ತಿರುವ ಅತಿ ಸಾಮಾನ್ಯ ಚರ್ಮದ ಸಮಸ್ಯೆಗಳು ಯಾವುವು ಮತ್ತು ಅವುಗಳಿಗೆ ಸರಳ ಪರಿಹಾರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

ಕೀವುಗುಳ್ಳೆ

ಕೀವುಗುಳ್ಳೆ ಪ್ರತಿಯೊಬ್ಬರಲ್ಲಿ ಆಗುತ್ತದೆ. ಕೀವು ಗುಳ್ಳೆಯಾಗುವುದಕ್ಕೆ  ಕಾರಣಗಳು ಹಲವು. ಬೆವರು ಮತ್ತು ಚರ್ಮದಿಂದ ಹೊರ ಬರುವ ಜಿಡ್ಡಿನ ಅಂಶ ಚರ್ಮದ ಮೇಲೆ ಹರಡಿ ಧೂಳು, ಮತ್ತು ಮಾಲಿನ್ಯವನ್ನು ಸೆಳೆಯುತ್ತದೆ. ಇದು ಚರ್ಮದ ರಂಧ್ರಗಳನ್ನು ಮುಚ್ಚಿ ಗುಳ್ಳೆಗಳಾಗುವುದಕ್ಕೆ, ಮೊಡವೆಗಳಾಗುವುದಕ್ಕೆ ಕಾರಣವಾಗುತ್ತದೆ.

ಹಾರ್ಮೋನ್‌ಗಳಲ್ಲಿ ಆಗುವ ವ್ಯತ್ಯಾಸ, ಒತ್ತಡ ಮತ್ತು ಧೂಮಪಾನದಿಂದಾಗಿಯೂ ಗುಳ್ಳೆಗಳಾಗಬಹುದು. ದಿಂಬಿನ ಹೊದಿಕೆ ಆಗಾಗ ಬದಲಿಸದಿರುವುದು ಮತ್ತು ಕೊಳೆಯಾದ ಕೈಗಳನ್ನು ಮುಖದ ಮೇಲಿಡುವುದು ಕೂಡ ಮೊಡವೆಗಳಿಗೆ ಕಾರಣವಾಗುತ್ತದೆ. ಸೂಕ್ತ ಸಮಯಕ್ಕೆ ಆಹಾರ ಸೇವಿಸದೇ ಇರುವುದು ಮತ್ತು ಅನಾರೋಗ್ಯಕರವಾದ ಕುರುಕಲು ತಿಂಡಿಯನ್ನು ತಿನ್ನುವುದರಿಂದಲೂ ಗುಳ್ಳೆಗಳಾಗತ್ತವೆ.

ಈ ಗುಳ್ಳೆಗಳು ಕೆಲ ದಿನಗಳಾದರು ವಾಸಿಯಾಗದಿದ್ದರೆ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು. ಮನೆಯಲ್ಲೂ ಆರೈಕೆಗಳನ್ನು ಮಾಡುವುದರಿಂದಲೂ ಗುಳ್ಳೆಗಳನ್ನು ನಿಯಂತ್ರಿಸಬಹುದು.

ನಿಯಮಿತವಾಗಿ ನಿಮ್ಮ ಮುಖ ಮತ್ತು ದೇಹವನ್ನು ಸ್ವಚ್ಛಗೊಳಿಸುವುದು. ಬೇವು, ತುಳಸಿ, ಅಲೋ ವೆರಾ ಇರುವ  ಕೋಮಲವಾದ, ತೀಕ್ಷ್ಣವಲ್ಲದ ಸಾಬೂನು ಬಳಸುವುದರಿಂದ ಚರ್ಮ ಸ್ವಚ್ಛವಾಗಿರುತ್ತದೆ ಮತ್ತು ಮೊಡವೆಗಳನ್ನು ದೂರವಿಡುತ್ತದೆ. ಜಿಡ್ಡಿಲ್ಲದ ಮಾಯಿಶ್ಚರೈಸರ್ ಮತ್ತು ಸನ್ ಸ್ಕ್ರೀನ್ ಬಳಸಿ ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಿ.

ಬೆನ್ನಿನ ಮೇಲೆ ಗುಳ್ಳೆಗಳು

ಗುಳ್ಳೆಗಳು ಕೇವಲ ಮುಖದ ಮೇಲೆ ಕಾಣಿಸಿಕೊಳ್ಳುವುದಿಲ್ಲ. ಭಾರತೀಯ ಪುರುಷ ಮತ್ತು ಮಹಿಳೆಯರಿಗೆ ಬೆನ್ನ ಭಾಗದಲ್ಲೂ ಗುಳ್ಳೆಗಳಾಗುತ್ತವೆ ಇದಕ್ಕೂ ಹಲವು ಕಾರಣಗಳಿವೆ. ಹಿಂಬದಿಯಲ್ಲೂ ತೈಲಗ್ರಂಥಿಗಳಿವೆ. ಹಾಗೆಯೇ ಕೈ, ಪೃಷ್ಟ, ಎದೆ ಭಾಗದಲ್ಲೂ ಗ್ರಂಥಿಗಳಿದ್ದು, ಗುಳ್ಳೆಗಳಾಗುವುದಕ್ಕೆ ಕಾರಣವಾಗಬಹುದು. ಬಿಗಿಯಾದ ಕೈ ಕಟ್ಟುವುದು, ವ್ಯಾಯಾಮದ ಬಳಿಕ ಸ್ನಾನ ಮಾಡದಿರುವುದು, ಬೆನ್ನನ್ನು ಚೆನ್ನಾಗಿ ಸ್ವಚ್ಛ ಮಾಡಿಕೊಳ್ಳದಿರುವುದು, ತೀಕ್ಷ್ಣವಾದ ಸಾಬೂನು ಬಳಕೆ, ಹಾರ್ಮೋನ್‌ಗಳಲ್ಲಾಗುವ ಬದಲಾವಣೆಗಳೂ ಗುಳ್ಳೆಗಳಾಗುವುದಕ್ಕೆ ಕಾರಣ. ಹಾಗಾಗಿ ಆದಷ್ಟು ಸ್ವಚ್ಛವಾಗಿ ದೇಹವನ್ನು ಇಟ್ಟುಕೊಂಡರೆ ಗುಳ್ಳೆಗಳಿಂದ ಪಾರಾಗಬಹುದು.

ಶುಷ್ಕ ಚರ್ಮ

ಭಾರತೀಯ ಹವಾಮಾನವೂ ಬೇಸಿಗೆ ಮತ್ತು ಚಳಿಗಾಲ ಸೇರಿದಂತೆ ಅತಿಯಾಗಿರುತ್ತವೆ. ಈ ವಾತಾವರಣದಿಂದಾಗಿ ಚರ್ಮದ ಶುಷ್ಕತೆಯೂ ಭಾರತೀಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸದೇ ಇರುವುದು, ಶುಷ್ಕ ಚರ್ಮಕ್ಕೆ ಮುಖ್ಯವಾದ ಕಾರಣ. ವಿಟಮಿನ್ ಇ ಇರುವ ಮಾಯಿಶ್ಚರೈಸರ್ ಅನ್ನು ಬಳಸುವುದು ಚರ್ಮ ಶುಷ್ಕವಾಗುವುದನ್ನು ತಪ್ಪಿಸುತ್ತದೆ. ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಒಳ್ಳೆಯದು. ಅತಿಯಾಗಿ ಬಿಸಿ ಇರುವ ಅಥವಾ ಅತಿಯಾಗಿ ತಣ್ಣಗಿರುವ ನೀರಿನಲ್ಲಿ ಸ್ನಾನ ಮಾಡಬೇಡಿ. ಯಾವಾಗಲೂ ಸನ್ಸ್ ಕ್ರೀನ್ ಹಚ್ಚಿಕೊಳ್ಳಿ.

ಸುಡುವ ಬಿಸಿಲಿನಿಂದ ದದ್ದು

ಅತಿಯಾದ ಬಿಸಿಲಿನಿಂದಾಗಿ ಬೆವರಿನ ಗ್ರಂಥಿಗಳು, ಚರ್ಮದ ರಂಧ್ರಗಳು ಮತ್ತು ಸೆಬಾಶಿಯಸ್ ಗ್ರಂಥಗಳು ಮುಚ್ಚಿಕೊಳ್ಳಬಹುದು. ಇದರಿಂದ ಅತಿ ಬಿಸಿಲಿನಿಂದ ದದ್ದುಗಳು ಕಾಣಿಸಿಕೊಳ್ಳುತ್ತವೆ. ಇವುಗಳನ್ನು ತಡೆಯುವುದು ಹೇಗೆ?

ಹತ್ತಿಯ ಬಟ್ಟೆಗಳನ್ನು ತೊಡುವುದು ಚರ್ಮದ ನಿರಾಳವಾಗಿವುದಕ್ಕೆ ನೆರವಾಗುತ್ತದೆ. ವ್ಯಾಯಾಮ ಮಾಡುವಾಗಲೂ ಅನುಕೂಲಕರವಾದ ಬಟ್ಟೆಗಳನ್ನೇ ತೊಡಿ. ವ್ಯಾಯಾಮದ ಬಳಿಕ ಬದಲಿಸಿ. ಹೆಚ್ಚು ಹೆಚ್ಚು ನೀರು ಕುಡಿಯಿರಿ.

ದೇಹದ ದುರ್ಗಂಧ

ಚರ್ಮಕ್ಕೆ ಸಂಬಂಧಿಸಿದ ಮತ್ತೊಂದು ಗಂಭೀರ ಸಮಸ್ಯೆ ಎಂದರೆ ದುರ್ಗಂಧ. ನಮ್ಮ ಚರ್ಮ ಹಲವು ಕಡೆಗಳಲ್ಲಿ ಸಂದುಗಳನ್ನು ಹೊಂದಿದ್ದು ಬ್ಯಾಕ್ಟೀರಿಯಾಗಳು ಅದರಲ್ಲಿ ಸೇರಿಕೊಂಡಿರುತ್ತವೆ. ಬೆವರು ಮತ್ತು ಬ್ಯಾಕ್ಟೀರಿಯಾಗಳು ಸೇರಿ ದೇಹದಲ್ಲಿ ಒಂದು ಗಂಧ ಹುಟ್ಟುತ್ತದೆ, ಅದು ಕೆಟ್ಟದಾಗಿರುತ್ತದೆ. ಇದನ್ನು ತಪ್ಪಿಸುವುದು ಹೇಗೆ? ಪ್ರತಿ ದಿನ ಕೋಮಲವಾದ ಕ್ಲೆನ್ಸರ್ ಅಥವಾ ಸೋಪನ್ನು ಬಳಸಿ ಸ್ನಾನ ಮಾಡಿ. ಚರ್ಮದ ಒಣಗದಂತೆ ಎಚ್ಚರವಹಿಸಿ. ಬಗಲುಗಳಲ್ಲಿ ಟಾಲ್ಕಮ್ ಪೌಂಡರ್ ಅಥವಾ ಡಿಯೋಡ್ರಂಟ್ಗಳನ್ನು ಬಳಸಿ.

ಈ ಸಲಹೆಗಳನ್ನು ಪಾಲಿಸಿದರೆ ಚರ್ಮದ ಸಮಸ್ಯೆಗಳನ್ನು ದೂರವಿಡಬಹುದು.

Leave a Comment