ಚರ್ಚ್ ಫಾರ್ಮ್ ಹೌಸ್‌ನಲ್ಲಿ ಬೆಂಕಿ

ಮಂಗಳೂರು, ಡಿ.೭- ಮಾಂಟ್ರಾಡಿ-ಪೆಂಚಾರು ಎಂಬಲ್ಲಿ ಶಿರ್ತಾಡಿ ಚರ್ಚ್‌ಗೆ ಸಂಬಂಧಿಸಿದ ಫಾರ್ಮ್ ಹೌಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದ್ದು, ಸುಮಾರು ಮೂರು ಲಕ್ಷ ರೂ.ವರೆಗಿನ ಸೊತ್ತುಗಳು ನಾಶವಾಗಿವೆ. ಮಾಂಟ್ರಾಡಿ ಪೆಂಚಾರಿನಲ್ಲಿ ಶಿರ್ತಾಡಿ ಮೌಂಟ್ ಕಾರ್ಮಲ್ ಚರ್ಚ್ ಅಧೀನದಲ್ಲಿರುವ ಫಾರ್ಮ್ ಹೌಸ್‌ನ ಹಳೇ ಮನೆಯಲ್ಲಿ ಕಾಣಿಸಿಕೊಂಡಿತ್ತು. ಈ ಬೆಂಕಿಯಿಂದ ಅಲ್ಲಿದ್ದ ಸುಮಾರು ಒಂದು ಸಾವಿರ ರಬ್ಬರ್ ಶೀಟ್, ರಬ್ಬರ್ ಡ್ರೈಯರ್ ಹಾಗೂ ಮನೆಯ ಅರ್ಧಭಾಗ ಹಾನಿಗೊಳಗಾಗಿದೆ. ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರು. ಮೂಡುಬಿದಿರೆ ಅಗ್ನಿಶಾಮಕ ಠಾಣಾಧಿಕಾರಿ ಕಿಶೋರ್ ನೇತೃತ್ವದಲ್ಲಿ ಬೆಂಕಿ ಶಮನ ಮಾಡಲಾಯಿತು.

Leave a Comment