ಚತುರನಿಗೆ ಮುಹೂರ್ತ

ಒಬ್ಬ ಯುವತಿ ಹಳ್ಳಿಯಿಂದ ಕಾಣೆಯಾಗಿ ನಗರಕ್ಕೆ  ಬಂದಾಗ ಆಕೆಯನ್ನು ಜನ ಹೇಗೆ ಕಾಣುತ್ತಾರೆ, ಪೋಲೀಸರು ಆಕೆಯನ್ನು ಹೇಗೆ ಬೆನ್ನತ್ತಿ ಪತ್ತೆ ಹಚ್ಚುತ್ತಾರೆ ಎನ್ನುವ ಥ್ರಿಲ್ಲರ್ ಕಥೆ ಹೊಂದಿದ ಚತುರ ಚಿತ್ರದ ಮುಹೂರ್ತ ಸಮಾರಂಭ ಕಳೆದ ಸೋಮವಾರ ಹನುಮಂತನಗರದ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು.

ಇತ್ತೀಚಿಗಷ್ಟೇ ಬಿಡುಗಡೆಯಾದ ಗಾಯತ್ರಿ ಚಿತ್ರವನ್ನು ನಿರ್ದೇಶಿಸಿದ್ದ ಸತ್ಯ ಸಾಮ್ರಾಟ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ  ಚತುರ  ಚಿತ್ರದಲ್ಲಿ ಮುನಿ ಹಾಗೂ ಪೂಜಾ ಲೋಕೇಶ್  ನಾಯಕ, ನಾಯಕಿಯರ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮುಹೂರ್ತದ ನಂತರ  ಮಾತನಾಡಿದ ಸತ್ಯ ಸಾಮ್ರಾಟ್  ಒಬ್ಬ ಹುಡುಗಿ ಹಳ್ಳಿಯಲ್ಲಿ ಮಿಸ್ ಆಗಿ ಸಿಟಿಗೆ ಬಂದಾಗ ಆಕೆಯನ್ನು ಜನ ಹೇಗೆ ಕಾಣುತ್ತಾರೆ, ಪೋಲೀಸ್ ಹೇಗೆ ಟ್ರೇಸ್ ಮಾಡುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ನೂರು ಜನ ಮಿಸ್ ಆದರೆ ಅವರಲ್ಲಿ  ೭೦ ಜನ ಸಿಗೋದೇ ಇಲ್ಲ, ಅವರೆಲ್ಲ ಎಲ್ಲಿಗೆ ಹೋಗ್ತಾರೆ ಎಂಬುದನ್ನು ಈ ಚಿತ್ರದಲ್ಲಿ ಕಂಡುಹಿಡಿಯವ ಪ್ರಯತ್ನ ಮಾಡಲಾಗಿದೆ.

ಚಿತ್ರಕಥೆ, ಸಂಭಾಷಣೆಗಳನ್ನು ಬರೆದು ನಿರ್ದೇಶನ ಮಾಡುತ್ತಿರುವ ಸತ್ಯ ಸಾಮ್ರಾಟ್ ಫೆಬ್ರವರಿ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭಿಸಿ ಬೆಂಗಳೂರು, ಮೈಸೂರು ಹಾಗೂ ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಿದ್ದಾರೆ. ಹಳ್ಳಿಯಿಂದ ಪಟ್ಟಣಕ್ಕೆ ಬಂದ ಹುಡುಗಿಯನ್ನು ಜನ ಹೇಗೆಲ್ಲ ಕಾಣುತ್ತಾರೆ ಎಂಬ ಅಂಶದ ಮೇಲೆ ಈ ಕಥೆ ನಡೆಯಲಿದೆ. ಖಳ, ಪೋಷಕ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದ ನಟ ಮುನಿ ಅಪರೂಪಕ್ಕೆನ್ನುವಂತೆಈ ಚಿತ್ರದ ಮೂಲಕ  ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಅಲ್ಲದೆ ನಟಿ ಪೂಜಾ ಲೋಕೇಶ್ ಈ ಚಿತ್ರದಲ್ಲಿ ಬಹಳ ದಿನಗಳ ನಂತರ ನಾಯಕಿಯಾಗಿ ನಟಿಸುವ ಮೂಲಕ ಬಣ್ಣ ಹಚ್ಚಲಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ೧೨ ವರ್ಷಗಳ ನಂತರ ನನ್ನ ಪುನರಾಗಮನ ಎಂದೇ ಹೇಳಬಹುದು. ೨ನೇ ಇನ್ನಿಂಗ್ಸ್. ತುಂಬಾ ಪವರ್ ಫುಲ್ ಪಾತ್ರವನ್ನು ಈ ಚಿತ್ರದಲ್ಲಿ ಪ್ಲೇ ಮಾಡ್ತಿದೇನೆ. ಒಬ್ಬ ಹಳ್ಳೀ ಹುಡುಗಿಯಾದ ನನಗೆ ೪-೫ಷೇಡ್ಸ್ ಇದೆ. ಎಂದು ಹೇಳಿಕೊಂಡರು.

ಶ್ರೀ ದಳವಾಯಿ ಬೀರೇಶ್ವರ ಸಿನಿ ಪ್ರೊಡಕ್ಷನ್ ಲಾಂಛನದಲ್ಲಿ ಮಂಜು.ಎಸ್. ಪಟೇಲ್ ಹಾಗೂ ಸುಮತಿ ಶ್ರೀನಿವಾಸ್ ನಿರ್ಮಿಸುತ್ತಿರುವ ಚತುರ ಚಿತ್ರಕ್ಕೆ ವಿನೋದ್ ಭಾರತಿ ಅವರ ಛಾಯಾಗ್ರಹಣವಿದೆ. ಚಿತ್ರದ ೪ ಹಾಡುಗಳಿಗೆ  ಅಭಿಷೇಕ್ ರಾಯ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.  ಎಸ್.ಸಾಮ್ರಾಟ್ ಸಾಹಿತ್ಯ, ದುರ್ಗ ಪಿ.ಎಸ್. ಸಂಕಲನವಿದೆ.  ಮುನಿ, ಪೂಜಾ ಲೋಕೇಶ್, ರಮೇಶ್ ಪಂಡಿತ್, ಶೋಭರಾಜ್, ಹರೀಶ್ ರಾಯ್ ಕೋಟೆ ಪ್ರಭಾಕರ್, ಪೆಟ್ರೋಲ್ ಪ್ರಸನ್ನ, ಕರುಣಾಕರ್, ಲಕ್ಷ್ಮೀ ಸಿದ್ದಯ್ಯ, ವಾಸು, ಮೈಕೋ ನಾಗರಾಜ್ ಅನಂತ್ ವೇಲು, ಅಪೂರ್ವ, ರಾಣಿ ಮುಂತಾದವರು ತಾರಾಬಳಗವಿದೆ.

Leave a Comment