ಚಡಚಣ ಹತ್ಯೆ : ಡಿಎಸ್‍ಪಿ ಶಿರೂರ ಅಮಾನತ್ತು

ವಿಜಯಪುರ: ಭೀಮಾತೀರದ ಹಂತಕ ಧರ್ಮರಾಜ ಚಡಚಣ ಸಹೋದರ ಗಂಗಾಧರ ಚಡಚಣ ನಿಗೂಡ ಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು ಈಗ ಇದೆ ಪ್ರಕರಣದಲ್ಲಿ ಇಂಡಿ ಡಿವೈಎಸ್‍ಪಿ ರವೀಂದ್ರ ಶಿರೂರ ಅಮಾನತ್ತಾಗಿದ್ದಾರೆ.

ಕಳೆದ ವರ್ಷ ಅಕ್ಟೋಬರ್ 30 ರಂದು ನಡೆದ ಧರ್ಮರಾಜ ಎನ್‍ಕೌಂಟರ್ ದಿನದಂದೇ ಈತನ ಸಹೋದರನನ್ನು ಅಪಹರಣ ಮಾಡಿ ಹತ್ಯೆ ಮಾಡಲಾಗಿತ್ತು ಘಟನೆ ವೇಳೆ ಮೇಲುಸ್ತುವಾರಿ ಹಾಗೂ ಮೇಲ್ವಿಚಾರಣೆ ವಿಚಾರದಲ್ಲಿ ಕರ್ತವ್ಯಲೋಪ ಆರೋಪದ ಮೇಲೆ ರಾಜ್ಯ ಗೃಹ ಇಲಾಖೆ ಅಮಾನತ್ತು ಮಾಡಿ ಆದೇಶಿಸಿದೆ. ಇಡೀ ಪ್ರಕರಣದಲ್ಲಿ ಈಗಾಗಲೇ ಓರ್ವ ಪಿಎಸ್‍ಐ ಹಾಗೂ ಮೂರು ಪೇದೇಗಳು ಬಂಧವಾಗಿದ್ದಾರೆ. ಇದೇ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಒರ್ವ ಆರೋಪಿ ಸಿಪಿಐ ಎಂ ಬಿ ಅಸೋಡೆಯನ್ನು ಸಹ ಅಮಾನ್ತತ್ತು ಮಾಡಲಾಗಿದೆ. ಸಧ್ಯ ಕಲಬುರಗಿಯ ಪೊಲೀಸ್ ತರಬೇತಿ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ಸಿಪಿಐ ಅಸೋಡೆ ಪೊಲೀಸ್ ತರಬೇತಿ ವಿಭಾಗದ ಡಿಜಿ ಅಮಾನತ್ತು ಮಾಡಿ ಆದೇಶಿಸಿದ್ದಾರೆ..

Leave a Comment