ಚಂದ್ರಯಾನ -೨ ಪಾಕ್ ನಟಿ ವೀಣಾ ಮಲಿಕ್ ವ್ಯಂಗ್ಯ

ಲಾಹೋರ್, ಸೆ ೧೨- ಬಾಲಿವುಡ್, ಸ್ಯಾಂಡಲ್ ವುಡ್‌ನಲ್ಲಿ ನಟಿಸಿದ ಪಾಕಿಸ್ತಾನದ ನಟಿ ವೀಣಾ ಮಲಿಕ್ ಚಂದ್ರಯಾನ-೨ ಬಗ್ಗೆ ವ್ಯಂಗ್ಯವಾಡುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇತ್ತೀಚೆಗೆ ಚಂದ್ರಯಾನದ-೨ ವಿಕ್ರಮ್ ಲ್ಯಾಂಡಿಂಗ್ ವೇಳೆ ಸಂಪರ್ಕ ಕಳೆದುಕೊಂಡಾಗ ಇಡೀ ಭಾರತೀಯರು ದುಃಖ ವ್ಯಕ್ತಪಡಿಸಿ ಇಸ್ರೋ ಬೆನ್ನಿಗೆ ನಿಂತ ಬೆಂಬಲಿಸಿದ್ದರು. ಆದರೆ ಚಂದ್ರಯಾನ ೨ ಸಂದರ್ಭದಲ್ಲಿ ಕೊನೇ ಹಂತದಲ್ಲಿ ಉಂಟಾದ ಸಮಸ್ಯೆಯನ್ನೇ ನೆಪವಾಗಿಸಿಕೊಂಡ ಪಾಕಿಸ್ತಾನದ ನಟಿ ವೀಣಾ ಮಲಿಕ್ ಭಾರತದ ಬಗ್ಗೆ ವ್ಯಂಗ್ಯವಾಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸೆ.೭ ರಂದು ನಡೆದ ಚಂದ್ರಯಾನ ೨ ರ ಅಂತಿಮ ಹಂತದಲ್ಲಿ ಸಂಪರ್ಕ ಕಡಿತಗೊಂಡಿದ್ದು, ಇಸ್ರೋಗೆ ಸಂದೇಶ ರವಾನೆ ಸಾಧ್ಯವಾಗಿರಲಿಲ್ಲ. ಅದನ್ನೇ ನೆಪವಾಗಿಸಿಕೊಂಡ ನಟಿ ವೀಣಾ ಮಲಿಕ್, ‘ಊಪ್ಸ್..ಚಾಂದ್ ನೆ ಇಂಡಿಯಾಕೊ ಮಾಮೂ ಬನಾ ದಿಯಾ’, ‘ಇದರ ಬದಲು ಭಾರತ ಶೌಚಲಯವನ್ನಾದರೂ ಕಟ್ಟಿಸಬಹುದಿತ್ತು ಎಂದು ಟೀಕೆ ಮಾಡಿದ್ದಾರೆ.
ಇದನ್ನು ಕಂಡ ಕೆಂಡಮಂಡಲವಾದ ಭಾರತೀಯರು ವೀಣಾ ಮಲಿಕ್‌ಗೆ ಸಕತ್‌ಗೆ ಟಾಂಗ್ ಕೊಟ್ಟಿದ್ದಾರೆ. ಮೊದಲ ನಿಮ್ಮ ದೇಶದಲ್ಲಿ ಶೌಚಲಯ ವ್ಯವಸ್ಥೆಯಾಗಿ ಇದ್ದೇಯೆ ನೋಡಿಕೊಳ್ಳಿ, ೪೧ ಮಿಲಿಯನ್ ಪಾಕಿಸ್ತಾನಿಗಳಿಗೆ ಶೌಚಲಯವೇ ಇಲ್ಲ ಎಂದು ರಿಟ್ವಿಟ್ ಮಾಡಿದ್ದಾರೆ. ಇನ್ನು ಭಾರತದಲ್ಲಿ ಅವಕಾಶ ಗಿಟ್ಟಿಸಿಕೊಂಡು ತಿಂದು ತೇಗಿ ಪಾಕಿಸ್ತಾನದಲ್ಲಿ ಶೌಚಲಯಕ್ಕೆ ಹೋಗುತ್ತೀಯ ಎಂದು ಛೀಮಾರಿ ಹಾಕಿದ್ದಾರೆ.

Leave a Comment