ಚಂದ್ರಯಾನ  ಇಸ್ರೋ ಸಜ್ಜು

ಬೆಂಗಳೂರು, ಜೂ. ೧೨- ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ ಯೋಜನೆ ಭಾಗವಾಗಿರುವ ಆರ್ಬಿಟರ್, ಲ್ಯಾಂಡರ್, ರೋವರ್‌ಗಳನ್ನು ಉಡಾವಣೆಗೆ ಇಸ್ರೋ ಸಜ್ಜುಗೊಳಿಸಿದೆ.
ನಗರದ ಮಾರತಹಳ್ಳಿ ಇಸ್ರೋ ಕೇಂದ್ರದಲ್ಲಿ ಚಂದ್ರಯಾನ ಯೋಜನೆಯ ಭಾಗವಾಗಿರುವ ಈ ಮೂರು ಸಾಧನಗಳನ್ನು ಇಂದು ಮಾಧ್ಯಮಗಳಿಗೆ ಮೊದಲ ಬಾರಿ ಇಸ್ರೋ ಪ್ರದರ್ಶಿಸಿತು.
ಜುಲೈ ಮೊದಲ ವಾರ ಚಂದ್ರಯಾನ – 2 ಈಗಾಗಲೇ ಸಿದ್ಧಪಡಿಸಿರುವ ಯೋಜನೆಯನ್ವಯ ಭೂಸ್ಥಿರ ಉಡಾವಣಾ ವಾಹಕ ಈ ಮೂರು ಸಾಧನಗಳನ್ನು ಹೊತ್ತು ನಭಾಕ್ಕೆ ಜಿಗಿಯಲಿದೆ. ಸೆಪ್ಟೆಂಬರ್ ವೇಳೆಗೆ ಈ ಆರ್ಬಿಟರ್ ಚಂದ್ರನ ಆವರಣ ತಲುಪಲಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದರು.

Leave a Comment