ಚಂದ್ರಬಾಬು ನಾಯ್ಡು ಆಂಧ್ರ ವಿಧಾನಸಭೆ ಪ್ರತಿಪಕ್ಷ ನಾಯಕ

ಅಮರಾವತಿ, ಜೂ 13-ತೆಲುದೇಶಂ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡ ಅವರಿಗೆ ರಾಜ್ಯ ವಿಧಾನ ಸಭೆಯ  ಅಧಿಕೃತ ಪ್ರತಿಪಕ್ಷ ನಾಯಕನ ಸ್ಥಾನಮಾನ ಕಲ್ಪಿಸಲಾಗಿದೆ ಎಂದು ಆಂಧ್ರ ಪ್ರದೇಶ ವಿಧಾನಸಭಾ ಸ್ಪೀಕರ್ ತಮ್ಮಿನೇನಿ ಸೀತಾರಾಂ ಗುರುವಾರ ಪ್ರಕಟಿಸಿದ್ದಾರೆ.

ವಿಧಾನಸಭೆಯ ಸ್ಪೀಕರ್ ಆಗಿ  ಅಧಿಕಾರ ವಹಿಸಿಕೊಂಡ ನಂತರ ಸದನದಲ್ಲಿ ಈ  ನಿರ್ಧಾರವನ್ನು  ಪ್ರಕಟಿಸಿದ್ದಾರೆ.  ತೆಲುಗು ದೇಶಂ ಶಾಸಕಾಂಗ ಪಕ್ಷ ತನ್ನ ನಾಯಕನನ್ನಾಗಿ  ಅಂಗೀಕರಿಸಿರುವ ನಿರ್ಣಯವನ್ನು ಆಧರಿಸಿ,  ಚಂದ್ರಬಾಬು ನಾಯ್ಡು ಅವರನ್ನು ವಿಧಾನಸಭೆಯ ಪ್ರತಿಪಕ್ಷ ನಾಯಕನ ಸ್ಥಾನ ಮಾನ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

 

Leave a Comment