ಚಂದ್ರನ ಮೂಲಕ ಮಂಗಳಕ್ಕೆ

  • ಉತ್ತನೂರು ವೆಂಕಟೇಶ್

ಚಂದ್ರನ ಮೂಲಕ ಮಂಗಳ ಗ್ರಹಕ್ಕೆ ಮಾನವ ಸಹಿತ ಯಾನ ಕೈಗೊಳ್ಳುವ ಮಹತ್ವಾಕಾಂಕ್ಷಿ ಯೋಜನೆಯನ್ನು ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಕೈಗೊಂಡಿದೆ. ಈ ದೀರ್ಘಕಾಲದ ಯೋಜನೆಯ ಮೊದಲ ಹಂತವಾಗಿ ಮಾನವ ರಹಿತ ಬಾಹ್ಯಾಕಾಶ ನೌಕೆಯನ್ನು ಚಂದ್ರನತ್ತ ಕಳುಹಿಸುವುದು.

  • ಮಾನವ ಗಗನಯಾನಿಗಳನ್ನು ಮಂಗಳ ಗ್ರಹಕ್ಕೆ ಕಳುಹಿಸುವಂತ ದೀರ್ಘಕಾಲಿಕ ಯೋಜನೆಯನ್ನು ಹಮ್ಮಿಕೊಂಡಿದೆ.

  • ಈ ಯೋಜನೆಯ ಮೊದಲ ಭಾಗವಾಗಿ ಮಾನವ ಗಗನ ಯಾನಿಗಳನ್ನು ಚಂದ್ರನಲ್ಲಿಗೆ ಕಳುಹಿಸುವುದಾಗಿದೆ.

  • ಚಂದ್ರನಲ್ಲಿ ನೆಲೆಯೂರುವ ಗಗನ ಯಾತ್ರಿಗಳು ಅಲ್ಲಿಯ ಪರಿಸ್ಥಿತಿಗಳ ಪೂರ್ಣ ಅಧ್ಯಯನ ಮಾಡಲಿದ್ದಾರೆ.

  • ಈ ಅಧ್ಯಯನದ ಅನುಭವದೊಂದಿಗೆ ಯಾನಿಗಳು ಮಂಗಳ ಗ್ರಹಕ್ಕೆ ಕಳುಹಿಸುವುದು ನಾಸಾದ ಗುರಿಯಾಗಿದೆ. 

31vichara1

ಅದರ ಯಶಸ್ಸಿನ ಆಧಾರದಲ್ಲಿ ಮುಂದಿನ ಹಂತದಲ್ಲಿ ಮಾನವ ಸಹಿತ ನೌಕೆಯನ್ನು ಚಂದ್ರನಲ್ಲಿಗೆ ಕಳುಹಿಸಿ ಅಲ್ಲಿ ದೀರ್ಘಕಾಲದ ವರೆಗೆ ಗಗನಯಾತ್ರಿಗಳು ನೆಲೆಯೂರಿದ ನಂತರ ಅಲ್ಲಿಂದ ಮಂಗಳಕ್ಕೆ ಮಾನವ ಗಗನಯಾತ್ರಿಗಳನ್ನು ಕಳುಹಿಸುವುದು ಈ ಯೋಜನೆಯ ಮೂಲ ಗುರಿಯಾಗಿದೆ.

ಈ ಯೋಜನೆಯ ರೂಪುರೇಷೆಯನ್ನು ಈಗಾಗಲೇ ತಯಾರಿಸಿರುವ ನಾಸಾ ಅದರಂತೆ ೨೦೨೦ಕ್ಕೆ ಮಾನವ ರಹಿತ ಬಾಹ್ಯಾಕಾಶ ನೌಕೆಯನ್ನು ಚಂದ್ರನತ್ತ ರವಾನಿಸುತ್ತಿದೆ. ಈ ನೌಕೆ ಮಾನವ ಗಗನಯಾನಿಗಳು ಪ್ರಯಾಣಿಸಲು ಅನುಕೂಲವಾಗುವ ರೀತಿಯಲ್ಲಿ ನಿರ್ಮಾಣ ಮಾಡಲಾಗಿರುತ್ತದೆ.  ಆದರೆ ಇದರಲ್ಲಿ ಮಾನವ ಗಗನಯಾನಿ ಬದಲಿಗೆ ಡಮ್ಮಿ ಯಾನಿಯನ್ನು ಕಳುಹಿಸಲಾಗುತ್ತದೆ.

ಎರಡನೇ ಹಂತದ ಯಾನ ೨೦೨೨ ರಲ್ಲಿ ಕೈಗೊಳ್ಳುವುದು ಅದರಲ್ಲಿ ಮಾನವ ಗಗನಯಾನಿಗಳನ್ನು ಚಂದ್ರನಲ್ಲಿಗೆ ಕಳುಹಿಸಲಾಗುತ್ತದೆ. ಹೀಗೆ ಯಾನ ಕೈಗೊಂಡ ಗಗನಯಾನಿಗಳು ಚಂದ್ರನ ಕಕ್ಷೆಯನ್ನು ಸೇರಿ, ಕಕ್ಷೆಯಲ್ಲಿ ದೀರ್ಘಕಾಲದವರೆಗೆ ಸುತ್ತಲಿದ್ದಾರೆ. ಹಾಗೂ ಬಾಹ್ಯಾಕಾಶ ನೌಕೆ ನೆಲೆಯನ್ನು ನಿರ್ಮಾಣ ಮಾಡಲಿದ್ದಾರೆ.

೨೦೨೩ ರಲ್ಲಿ ಗಗನಯಾನಿಗಳನ್ನು ಲೂನಾರ್ ರೋವರ್ ಮೂಲಕ ಚಂದ್ರನಲ್ಲಿ ಇಳಿಸಲಾಗುತ್ತದೆ. ಗಗನ ಯಾನಿಗಳು ಚಂದ್ರನ ಶೋಧನೆ ನಡೆಸಲಿದ್ದಾರೆ.

ಚಂದ್ರನಲ್ಲಿ ನೆಲೆಯೂರಿ ಅಲ್ಲಿಯ ವಾತಾವರಣದಲ್ಲಿ ಎದುರಾಗುವ ಎಲ್ಲಾ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಿ ಗಗನ ಯಾನಿಗಳು ಅನುಭವ ಪಡೆಯಲಿದ್ದಾರೆ. ಈ ಅನುಭವ ಮುಂದಿನ ಮಂಗಳ ಯಾನಕ್ಕೆ ಅವರಿಗೆ ನೆರವಾಗಲಿದೆ. ಹೀಗಾಗಿ ಚಂದ್ರ ಒಂದು ರೀತಿಯಲ್ಲಿ ಈ ಯಾನದ ಪರೀಕ್ಷಾ ನೆಲೆಯೂ ಆಗಲಿದೆ. ಅಲ್ಲಿಂದ ಗಗನ ಯಾನಿಗಳು ಮಂಗಳನತ್ತ ಯಾನ ಬೆಳೆಸಲಿದ್ದಾರೆ. ಇದು ನಾಸಾದ ಈಗಿನ ಯೋಜನೆಯಂತೆ ಅಂತಿಮ ಘಟ್ಟವಾಗಲಿದೆ.

ಅತ್ಯಂತ ದೂರದಲ್ಲಿರುವ ಮಂಗಳನಲ್ಲಿಗೆ ಯಾನ ಬೆಳೆಸುವ ಮೊದಲು ಅದರ ಮೊದಲ ಹಂತವಾಗಿ ಚಂದ್ರನಲ್ಲಿ ನೆಲೆಯೂರಿ ಅಲ್ಲಿಂದ ಮಂಗಳನಲ್ಲಿಗೆ ಪಯಣಿಸುವುದು ಸುಲಭ ಹಾಗೂ ಹೆಚ್ಚಿನ ಸಾಧ್ಯತೆ ಇರುವ ಮಾರ್ಗ ಎಂದು ನಾಸಾ ಮೂಲಗಳು ಹೇಳಿವೆ.

Leave a Comment