ಚಂದ್ರನ ದಕ್ಷಿಣ ಧೃವ ಅಮೇರಿಕಾ ಮುಂದಿನ ಗುರಿ

  • ಉತ್ತನೂರು ವೆಂಕಟೇಶ್‍

ಚಂದ್ರನ ದಕ್ಷಿಣ ಧೃವಕ್ಕೆ ಅಮೇರಿಕಾದ ಗಗನ ಯಾನಿಗಳನ್ನು ಕಳುಹಿಸುವ ಯೋಜನೆಯ ಸಿದ್ದತೆಯನ್ನು ನಾಸಾ ಕೈಗೊಂಡಿದೆ. ಅಮೇರಿಕಾದ ಗಗನ ಯಾನಿಗಳನ್ನು ಚಂದ್ರನ ದಕ್ಷಿಣ ಧೃವದಲ್ಲಿ ಇಳಿಸುವ ಯೋಜನೆ ರೂಪಿಸಲು ಅಧ್ಯಕ್ಷ ಟ್ರಂಪ್ ನಾಸಾಗೆ ನೀಡಿರುವ ನಿರ್ದೇಶನವೇ ನಾಸಾದ ಈ ಸಿದ್ಥತೆಗೆ ಪ್ರಮುಖ ಕಾರಣ.

ಅಮೇರಿಕಾದ ಗಗನಯಾನಿಗಳನ್ನು ಚಂದ್ರನ ದಕ್ಷಿಣ ಧೃವದಲ್ಲಿ ಇಳಿಸುವುದು ನಾಸಾದ ಮುಂದಿನ ಗುರಿ. ಈ ಸಾಧನೆಯ ಯಾನ 2020 ರಲ್ಲಿ ಕೈಗೊಳ್ಳುವ ಗುರಿಯೊಂದಿಗೆ ನಾಸಾ ಸಿದ್ಧತೆ ನಡೆಸಿದೆ.

ಈ ಯಾನದ ಮುಖ್ಯ ಉದ್ದೇಶ ಅಲ್ಲಿಯ ಹಿಮದಿಂದ ರಾಕೇಟ್ ಇಂಜಿನ್ ಉತ್ಪತ್ತಿ ಮಾಡುವುದು. ಮತ್ತು ಅಲ್ಲಿಂದಲ್ಲೇ ಶಕ್ತಿ ಶಾಲಿ ರಾಕೇಟ್ ಮೂಲಕ ಮಂಗಳನಲ್ಲಿಗೆ ತಲುಪಬಹುದಾಗಿದೆ.

ಅಮೇರಿಕಾದ ಈ ಮಹಾತ್ವಕಾಂಕ್ಷೆ ಯೋಜನೆಯಾದ ಚಂದ್ರನ ದಕ್ಷಿಣ ಧೃವ ಯಾನ ಕುರಿತಂತೆ ವಿವರ ನೀಡಿರುವ ಉಪಾಧ್ಯಕ್ಷ ಮೈಕ್ ಪೆನ್ಸ್, “ಅಮೇರಿಕಾದ ಗಗನಯಾನಿಗಳು 2020ರ ಸುಮಾರಿಗೆ ಚಂದ್ರನ ದಕ್ಷಿಣ ಧೃವದಲ್ಲಿ ಇಳಿಯಲಿದ್ದಾರೆ” ಎಂದಿದ್ದಾರೆ. ಹಾಗೇಯೇ ದಕ್ಷಿಣ ಧೃವದಲ್ಲೇ ಯಾಕೆ ಇಳಿಯಬೇಕು ಎನ್ನುವುದರ ಮಹತ್ವದ ಬಗ್ಗೆಯೂ ವಿವರಣೆ ನೀಡಿರುವ ಪೆನ್ಸ್, ದಕ್ಷಿಣ ಧೃವ ಭಾರೀ ಹಿಮದಿಂದ ಕೂಡಿದೆ. ಈ ಹಿಮವನ್ನೇ ಬಾಹ್ಯಾಕಾಶ ನೌಕೆಯ ರಾಕೆಟ್ ಇಂಧನವಾಗಿ ಮಾರ್ಪಾಡಿಸಿಕೊಳ್ಳುವುದಾಗಿ ಹೇಳಿದ್ದಾರೆ.

ಮುಂದಿನ ಚಂದ್ರಯಾನ ಹೆಚ್ಚಿನ ಮಹತ್ವಹೊಂದಿದೆ. ಇದು ಬರೀ ಚಂದ್ರನಲ್ಲಿಗೆ ಗಗನಯಾನಿಗಳನ್ನು ಕಳುಹಿಸುವುದಷ್ಟೇ ಈ ಯಾನದ ಉದ್ದೇಶವಲ್ಲ, ಜೊತೆಗೆ ಚಂದ್ರನ ಶಿಲೆಗಳಲ್ಲಿರುವ ಅಪಾರ ಪ್ರಮಾಣದ ಹಿಮದಿಂದ ಆಮ್ಲಜನಕ ಮತ್ತು ನೀರನ್ನು ಹೊರತೆಗೆಯುವುದು ಇದರ ಮುಖ್ಯ ಭಾಗವಾಗಿದೆ. ಇದರಿಂದ ಬಾಹ್ಯಾಕಾಶ ನೌಕೆಯ ಮುಂದಿನ ಯಾನಕ್ಕಾಗಿ ರಾಕೇಟ್ ಇಂಧನವನ್ನು ತಯಾರಿಸಿಕೊಳ್ಳುವ ಮೂಲಕ ಅಲ್ಲಿಂದ ಮಂಗಳ ಗ್ರಹ ಶೀಘ್ರ ಅವಧಿಯಲ್ಲಿ ತಲುಪಲು ಸಾಧ್ಯ. ಈ ಹಿಂದೆ ಮಂಗಳ ಗ್ರಹ ತಲುಪಲು ವರ್ಷಗಟ್ಟಲೇ ಹಿಡಿಯುತ್ತಿದ್ದು, ಮಂಗಳ ಯಾನ ತಿಂಗಳುಗಳಲ್ಲಿ ಮುಗಿಯುತ್ತದೆ ಎಂದೂ ಪೆನ್ಸ್ ಹೇಳಿದ್ದಾರೆ.

ಚಂದ್ರನಲ್ಲಿ ನೀರು ಇದೆ ಎಂಬುದರ ಬಗ್ಗೆ ಒಂದು ದಶಕದ ಹಿಂದಿನವರೆಗೂ ಖಚಿತತೆ ಇರಲಿಲ್ಲ. ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ ಇಸ್ರೋ ತನ್ನ ಯಶಸ್ವಿ ಚಂದ್ರಯಾನ -1 ಸಂಗ್ರಹಿಸಿದ್ದ ದತ್ತಾಂಶದಿಂದ ಚಂದ್ರನ ದಕ್ಷಿಣ ಧೃವದ ಹಿಮಕೊರ ಕಲ್ಲುಗಳಲ್ಲಿ ನೀರಿನ ಅಂಶ ಇರುವುದು ಖಚಿತ ಪಟ್ಟಿದೆ.

ದಕ್ಷಿಣ ಧೃವ ಭಾಗಕ್ಕೆ ಸೂರ್ಯನ ಬೆಳಕು ಹೋಗದೆ ಅಲ್ಲಿಯ ತಾಪಮಾನ ಮೈನಸ್ 250 ಡಿ.ಗ್ರಿ. ಫ್ಯಾನರ್ ಹೀಟ್ ಅನ್ನು ಮೀರುವುದಿಲ್ಲ. ಹೀಗಾಗಿ ಮಂಜು ಆವಿಯಾಗಿ ವಾತಾವರಣಕ್ಕೆ ಹೋಗದೆ ಅಲ್ಲೇ ಶೇಖರಣೆಯಾಗುತ್ತದೆ.

ಇದೇ ವೇಳೆ ಮಂಜುನಿಂದ ರಾಕೇಟ್ ಇಂಧನ ಉತ್ಪತ್ತಿ ಮಾಡುವುದಾದ್ದರೇ ಅಂತಹ ಇಂಧನ ಬಳಸಿಕೊಳ್ಳುವ ರಾಕೇಟ್ ನ ತಂತ್ರಜ್ಞಾನದಲ್ಲೂ ಬದಲಾವಣೆ ಯಾಗಬೇಕು. ಆಗೆಯೇ ಹಿಮ ಯಾವ ರೀತಿಯಲ್ಲಿ ಅದರಿಂದ ನೀರನ್ನು ಹೊರತೆಗೆಯಬೇಕಾದ ತಂತ್ರಜ್ಞಾನವು ಅಗತ್ಯವಿದ್ದು, ನಾಸಾ ಆ ಬಗ್ಗೆಯೂ ಶೋಧನೆಯಲ್ಲಿ ತೊಡಗಿದೆ ಎಂದು ನಾಸಾ ಮೂಲಗಳು ಹೇಳಿವೆ.

Leave a Comment