ಚಂದ್ರನ ಕತ್ತಲು ಭಾಗಕ್ಕೆ ಚೀನಾ ನೌಕೆ

  • ಉತ್ತನೂರು ವೆಂಕಟೇಶ್

ಚೀನಾದ ಚಾಂಗ್-೪ ಬಾಹ್ಯಾಕಾಶ ನೌಕೆ ನಮಗೆ ಕಾಣದ ಚಂದ್ರ ಮತ್ತೊಂದು ಮಗ್ಗುಲಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ ಹೊಸ ಇತಿಹಾಸ ಬರೆದಿದೆ. ಈವರೆವಿಗೆ ಅಮೆರಿಕಾ ರಷ್ಯಾಗಳು  ಭೂಮಿಗೆ ಅಭಿಮುಖವಾಗಿರುವ ಚಂದ್ರನ ಭಾಗದಲ್ಲಿ ತಮ್ಮ ಬಾಹ್ಯಾಕಾಶ ನೌಕೆಗಳನ್ನು ಇಳಿಸಿವೆಯಾದರೂ , ಕಡು ಗತ್ತಲೆಯ ಇನ್ನೊಂದು ಭಾಗದಲ್ಲಿ ಇಳಿಸುವ ಯತ್ನ ಮಾಡಿರಲಿಲ್ಲ. ಚೀನ ತನ್ನ  ಬಾಹ್ಯಾಕಾಶ ನೌಕೆ ಚಾಂಗ್-೪ ಅನ್ನು ಚಂದ್ರನ ಇನ್ನೊಂದು ಮಗ್ಗುಲಾದ ದಕ್ಷಿಣ ಧೃವದಲ್ಲಿ ಯಶಸ್ವಿಯಾಗಿ ಇಳಿಸುವ ಮೂಲಕ ಆ ಭಾಗದಲ್ಲಿ ಗಗನ ನೌಕೆಯನ್ನು ಇಳಿಸಿದ ಮೊಟ್ಟ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗೂ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ನೂತನ ದಾಖಲೆ ನಿರ್ಮಿಸಿದೆ.ಈ ಸಾಧನೆ ಮಾಡಿರುವ ಚೀನಾವನ್ನು ಅಮೆರಿಕದ ನಾಸಾ ಅಭಿನಂಧಿಸಿದೆ.

ಕಳೆದ ವರ್ಷ ಡಿ.೮ ರಂದು ಬೆಳಿಗ್ಗೆ ಚೀನಾದ ದಕ್ಷಿಣ ಭಾಗದ ಕ್ಷಿಚಾಂಗ್ ಉಪಗ್ರಹ ಉಡಾವಣ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಗೊಂಡಿದ್ದ ಚಾಂಗ್-೪ ಚಂದ್ರ ಶೋಧನಾ ನೌಕೆ ೨೨ ದೆಸೆಗಳ ಯಾನ ಮುಗಿಸಿ ಭಾರತೀಯ ಕಾಲಮಾನ ಗುರುವಾರ ಬೆಳಗಿನ ೨.೩೦ ಕ್ಕೆ ಚಂದ್ರನ ದಕ್ಷಿಣ ಧೃವದಲ್ಲಿಯ ವಾನ್ ಕರ್ಮಾನ್ ಪ್ರದೇಶದ ಇಟ್‌ಕೆನ್ ಸಮತಟ್ಟಾದ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿದಿದೆ. ಇಳಿಯುವುದಕ್ಕೆ ಮೊದಲು ನೌಕೆ ೧೦೦ ಮೀಟರ್ ಎತ್ತರದಲ್ಲಿರುವಾಗಲೇ ಇಳಿಸಬೇಕಾದ ಸುಕ್ತ ಸ್ಥಳದ ಪರಿಶೀಲನೆ ನಡೆಸಿ, ಕಲ್ಲು ಬಂಡೆಗಳಿಲ್ಲದೆ ಸಮತಟ್ಟಾದ ಬಯಲು ಪ್ರದೇಶದಲ್ಲಿ ಇಳಿಸಲಾಯಿತು ಎಂದು ಚೀನಾ ಬಾಹ್ಯಾಕಾಶ ಸಂಶೋಧನಾ ಆಡಳಿತ ಹೇಳಿದೆ.

ನೌಕೆಯ ಲ್ಯಾಡರ್ ನಿಂದ ರೋವರ್‌ಅನ್ನು ಇಳಿಸುವಲ್ಲಿ ಭೂನಿ ನಿಯಂತ್ರಣ ಕೇಂದ್ರದ ಪಾತ್ರವಿಲ್ಲ. ನೌಕೆಯು ತನ್ನಲ್ಲಿರುವ ರಾಕೆಟ್ ಬೂಸ್ಟರ್ ಮತ್ತು ಕ್ಯಾಮರಾಗಳ ಸಹಾಯದಿಂದ  ಸೂಕ್ತ ಸ್ಥಳದಲ್ಲಿ ರೋವರ್ ಅನ್ನು ಇಳಿಸಿದೆ. ನೌಕೆ ಇಳಿದ ಚಂದ್ರನ ಕತ್ತಲು ಭಾಗದೊಂದಿಗೆ ಭೂಮಿಯಿಂದ ಸಂವಹನ ಇಲ್ಲದ ಕಾರಣ , ನೌಕೆ ತೆಗೆದ ಛಾಯಾಚಿತ್ರಗಳನ್ನು ಸಂವಹನ ಉಪಗ್ರಹದ  ಮೂಲಕ ಭೂಮಿಗೆ ರವಾನಿಸಲಾಗಿದೆ ಎಂದು ಚೀನ ಬಾಹ್ಯಾಕಾಶ ಸಂಶೋದನಾ ಆಡಳಿತ ಮೂಲಗಳು ತಿಳಿಸಿವೆ.

6vichara1

ನಮಗೆ ಎಂದೂ ಕಾಣದ ಚಂದ್ರನ ಇನ್ನೊಂದು ಭಾಗದಲ್ಲಿ ಚೀನಾ ಮೊಟ್ಟಮೊದಲ ಬಾರಿಗೆ ತನ್ನ ಬಾಹ್ಯಾಕಾಶ ನೌಕೆಯನ್ನು ಇಳಿಸಿದೆ. ಚಂದ್ರನ ಕಡುಕತ್ತಲು ದಕ್ಷಿಣ ಧೃವದ ಭಾಗದಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮೊಟ್ಟ ಮೊದಲ ದೇಶ ಎಂಬ ಹೆಮ್ಮೆಗೆ ಚೀನಾ ಪಾತ್ರವಾಗಿದೆ.

ಕಳೆದ ವರ್ಷ ಡಿಸೆಂಬರ್ 8 ರಂದು ಉ‌ಡಾವಣೆಗೊಂಡಿದ್ದ ಚಾಂಗ್-೪ ಬಾಹ್ಯಾಕಾಶ ನೌಕೆ 22 ದಿನಗಳ ಯಾನದ ನಂತರ ಗುರುವಾರ ಬೆಳಗಿನ ಜಾವ 2.30 ರಲ್ಲಿ ತನ್ನ ನಿಗದಿತ ಸ್ಥಳದಲ್ಲಿ ಯಶಸ್ವಿಯಾಗಿ ಇಳಿದಿದೆ.

Leave a Comment