ಚಂದ್ರನ ಕತ್ತಲು ಬದಿಯ ಶೋಧನೆಗೆ ಚೀನಾ ನೌಕೆ

  • ಉತ್ತನೂರು ವೆಂಕಟೇಶ್

ಚಂದ್ರನ ಹಿಂಬದಿಯ ನಿಗೂಢ ಭಾಗದ ಶೋಧನೆಗೆ ಚೀನಾ ಚಾಂಗ್- ಎ-೪ ಹೆಸರಿನ ಬಾಹ್ಯಾಕಾಶ ನೌಕೆಯನ್ನು ನಿನ್ನೆ ಡಿಸೆಂಬರ್ ೮ ರಂದು ಉಡಾವಣೆ ಮಾಡಿದೆ.

ಕತ್ತಲಿನಿಂದ ಕೂಡಿರುವ ಚಂದ್ರನ ಇನ್ನೊಂದು ಬದಿಯ ಶೋಧನೆ ಇದುವರೆವಿಗೂ ನಡೆದಿಲ್ಲ. ಹೀಗಾಗಿ ಇಂತಹ ಶೋಧನೆಗಾಗಿ ತನ್ನ ನೌಕೆಯನ್ನು ಚೀನಾ ಉಡಾವಣೆ ಮಾಡಿದ್ದು ಅದು ಚಂದ್ರನ ಕತ್ತಲು ಭಾಗದಲ್ಲಿ ಇಳಿಯಲಿದೆ. ಹೀಗೆ ಚಂದ್ರಿನ ಇನ್ನೊಂದು ಬದಿಯಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸುವ ವಿಶ್ವದ ಮೊದಲ ರಾಷ್ಟ್ರ ಎಂಬ ಖ್ಯಾತಿಯನ್ನು ಚೀನಾ ತನ್ನದಾಗಿಸಿಕೊಳ್ಳಲಿದೆ.

  • ಚಂದ್ರನ ಹಿಂಬದಿಯ ‘ಕತ್ತಲು ಭಾಗದ’ ನಿಗೂಢತೆಯನ್ನು ಭೇದಿಸಲು ಚೀನಾ ಬಾಹ್ಯಾಕಾಶ ನೌಕೆಯನ್ನು ನಿನ್ನೆ ಉಡಾವಣೆ ಮಾಡಿದೆ.

  • ಭೂಮಿಯತ್ತ ಮುಖ ಮಾಡಿರುವ ಚಂದಿರನ ಶೋಧನೆಗಳು ನಡೆದಿದ್ದರೂ, ಇನ್ನೊಂದು ಬದಿಯ ಶೋಧನೆ ಇದೇ ಮೊದಲು.

  • ಲಾಂಗ್ ಮಾರ್ಚ್ 3ಬಿ ರಾಕೆಟ್ ಬೆನ್ನೇರಿ ಹೊರಟಿರುವ ಚಾಂಗ್ – ಎ-4 ನೌಕೆ 27 ದಿನಗಳ ಯಾನದ ನಂತರ ಚಂದಿರನ ಹಿಂಬದಿ ಕತ್ತಲು ಭಾಗ ತಲುಪುತ್ತದೆ.

  • ಚಂದಿರನ ದಕ್ಷಿಣ ಧೃವದ ಭಾಗವಾದ ವನ್‌ರಾರ್ ಮನ್ ಕುಳಿಯ ಬಳಿ ನೌಕೆ ಇಳಿಯಲಿದೆ ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತದ ಮೂಲಗಳು ತಿಳಿಸಿವೆ.

ಹಾಗೆಯೇ ಆ ಮೂಲಕ ಬಾಹ್ಯಾಕಾಶ ಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಅಮೇರಿಕಾ, ರಷ್ಯಾಗಳನ್ನು ಹಿಂದಿಕ್ಕುವ ಮಹಾತ್ವಾಕಾಂಕ್ಷಿ ಯೋಜನೆಯೂ ಇದಾಗಿದೆ. ಭೂಮಿ ಎಂದೂ ಕಾಣದ ಭಾಗದ ಮಾಹಿತಿಯನ್ನು ಈ ನೌಕೆ ಭೂಮಿಗೆ ರವಾನಿಸಲಿದೆ.

9vichara2

ಭೂಮಿಯತ್ತ ಮುಖ ಮಾಡಿರುವ ಚಂದಿರನ ಕುರಿತಂತೆ ಹೆಚ್ಚು ಮಾಹಿತಿ ಈವರೆಗಿನ ಚಂದ್ರಯಾನಿಗಳಿಂದ ದೊರೆತಿದೆ. ಆದರೆ, ಕಾರಣದ ಚಂದಿರನ ಇನ್ನೊಂದು ಭಾಗದ ವಾತಾವರಣ ಹೇಗಿದೆ, ಅಲ್ಲಿಯ ತಾಪಮಾನ, ಅಲ್ಲಿಯ ನೆಲ. ಅದರಲ್ಲಿಯ ರಾಸಾಯನಿಕ ಅಂಶಗಳು ಕುರಿತಂತೆ ಮೊದಲ ಬಾರಿಗೆ ಶೋಧನೆ ನಡೆಯಲಿದೆ.

ಚೀನಾದ ಚಾಂಗ್- ಎ- ೪ ಬಾಹ್ಯಾಕಾಶ ನೌಕೆ. ತನ್ನೊಂದಿಗಿನ ಕೋಶದಲ್ಲಿ ಬೀಜಗಳನ್ನು ಮತ್ತು ಕ್ರಿಮಿಗಳ ಮೊಟ್ಟೆಗಳನ್ನು ಹೊತ್ತೊಯ್ಯಲಿದೆ. ಒಂದು ಗ್ರಹದಲ್ಲಿಯ ಜೈವಿಕ ವಸ್ತುಗಳಾದ ಇವು ಬಾಹ್ಯಾಕಾಶದ ಇನ್ನೊಂದು ಗ್ರಹದಲ್ಲಿ ಹೇಗೆ ಬೆಳೆಯುತ್ತವೆ ಎಂಬುದನ್ನು ತಿಳಿದುಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ ಎಂದು ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ (ಸಿ.ಎನ್.ಎಸ್.ಎ.) ಹೇಳಿದೆ.

ಚಾಂಗ್- ಎ-೪ ಬಾಹ್ಯಾಕಾಶ ನೌಕೆ ತನ್ನ ೨೭ ದಿನಗಳ ಪ್ರಯಾಣದ ನಂತರ ಚಂದಿರನ ಹಿಂಬದಿಯ ಭಾಗದ ದಕ್ಷಿಣ ಧೃವದಲ್ಲಿ ಇಳಿಯಲಿದೆ. ಲ್ಯಾಂಡರ್ ಮತ್ತು ರೋವರ್‌ನ್ನು ಹೊಂದಿರುವ ಚಾಂಗ್-೪ ನೌಕೆ ಚಂದಿರ ಆ ಭಾಗದ ಮೇಲ್ಮೈ ಹಾಗೂ ಒಳಭಾಗದ ಶೋಧನೆ ಆರಂಭಿಸಲಿದೆ ಎಂದು ಚೀನಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹೇಳಿದೆ.

ಭೂಮಿಗೆ ಮುಖ ಮಾಡಿರುವ ಚಂದಿರನ ಹಿಂಬದಿ ಭಾಗವನ್ನು ಕತ್ತಲೆಯ ಭಾಗ ಎಂದು ಕರೆಯುತ್ತೇವೆ. ಇದರ ಬಗ್ಗೆ ಈವರೆಗೆ ಶೋಧನೆ ಇಲ್ಲದೆ ನಿಗೂಢವಾಗೆ ಉಳಿದಿದೆ. ಈವರೆಗಿನ ಚಂದ್ರಯಾನಗಳೆಲ್ಲ, ಚಂದಿರನ ಭೂಮಿಯತ್ತ ಮುಖ ಮಾಡಿರುವ ಭಾಗದ ಶೋಧನೆ ನಡೆಸಿವೆ. ಶನಿವಾರ ಚಾಂಗ್-೪ ಬಾಹ್ಯಾಕಾಶ ನೌಕೆ, ಲಾಂಗ್ ಮಾರ್ಚ್ -೩ ಬಿ ರಾಕೆಟ್ ಏರಿ ನಭಾಕ್ಕೆ ಜಿಗಿದಿದ್ದು ಇದು ಚಂದಿರನ ಶೋಧನಾ ಕಾರ್ಯದಲ್ಲಿ ತೊಡಗಲಿದೆ. ಚೀನಾ ಐದು ವರ್ಷಗಳ ಹಿಂದೆ ತನ್ನ ಬಾಹ್ಯಾಕಾಶ ನೌಕೆ, ಯುಟು ಅಥವಾ ‘ಜಡೆ ರಾಬಿಟ್‘ ಅನ್ನು ಉಡಾವಣೆ ಮಾಡಿತ್ತು.

ಭೂಮಿಗೆ ಮುಖ ಮಾಡದ ಚಂದಿರನ ಹಿಂಬದಿ ಭಾಗ ಭೂಮಿಯ ಮೇಲೆ ಯಾವುದೇ ಪರಿಣಾಮ ಮಾಡುವುದಿಲ್ಲ. ಭೂಮಿಯತ್ತ ಮುಖ ಮಾಡಿರುವ ಚಂದಿರನ ಭಾಗದ ಗುರುತ್ವಾಕರ್ಷಣೆ ಮಾತ್ರ ಭೂಮಿ ಮೇಲೆ ಪರಿಣಾಮಗಳನ್ನು ಬೀರುತ್ತದೆ.

Leave a Comment