ಚಂದ್ರನ ಅಂಗಳದಲ್ಲಿ ಮುಗ್ಗರಿಸಿದ ಇಸ್ರೇಲ್‌ನ ಬಾಹ್ಯಾಕಾಶ ನೌಕೆ

  • ಉತ್ತನೂರು ವೆಂಕಟೇಶ್

ಚಂದ್ರ ಶೋಧನೆಗೆ ತೆರಳಿದ್ದ ಇಸ್ರೇಲ್ ಬಾಹ್ಯಾಕಾಶ ನೌಕೆ ಬೆರೆಶೀಟ್ ಚಂದ್ರನ ಮೇಲೆ ಇಳಿಯುವ ಕೊನೇ ಹಂತದಲ್ಲಿ ವಿಫಲಗೊಳ್ಳುವ ಮೂಲಕ, ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ನಾಲ್ಕನೇ ರಾಷ್ಟ್ರ ಎನಿಸಿಕೊಳ್ಳುವ ಇಸ್ರೇಲ್ ಕನಸು ಕೊನೇ ಕ್ಷಣದಲ್ಲಿ ಭಗ್ನ ಗೊಂಡಿದೆ.

  • ಚಂದ್ರನ ಮೇಲೆ ನೌಕೆಯನ್ನು ಇಳಿಸಿದ ನಾಲ್ಕನೇ ರಾಷ್ಟ್ರ ಎಂಬ ಐತಿಹಾಸಿಕ ದಾಖಲೆಯಿಂದ ವಂಚಿತವಾದ ಇಸ್ರೇಲ್.

  • ನೌಕೆಯನ್ನು ಚಂದ್ರನ ಅಂಗಳದವರೆಗೂ ಯಶಸ್ವಿಯಾಗಿ ತಲುಪಿಸಿದ್ದು ಪುಟ್ಟ ದೇಶದ ದೊಡ್ಡ ಸಾಧನೆ

  • ಯಶಸ್ಸಿನ ಶಿಕರದ ಕೊನೆ ಮಟ್ಟಿಲಲ್ಲಿ  ಎಡವಿದ ಪುಟ್ಟ ನೌಕೆ ಬೆರೆಶೇಟ್.

  • ಅಂತಿಮ ಘಟ್ಟದಲ್ಲಿಯ ಈ ವಿಫಲತೆಯಿಂದ ನಾವು ದೃತಿಗೆಟ್ಟಿಲ್ಲ ಎಂದ ಇಸ್ರೇಲ್ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ.

ಆದರೂ ಚಂದ್ರನ ಅಂಗಳದವರೆಗೂ ತನ್ನ ಬಾಹ್ಯಾಕಾಶ ನೌಕೆಯನ್ನು ಕಳುಹಿಸುವಲ್ಲಿ ಯಶಸ್ವಿಯಾದ ಇಸ್ರೇಲ್ ಸಾಧನೆ ದಾಖಲೆಯಾಗಿ ಉಳಿಯುತ್ತದೆ. ಪುಟ್ಟ ದೇಶವಾದ ಇಸ್ರೇಲ್ ನ ಈ ಸಾಧನೆಯನ್ನು ಅಮೇರಿಕಾ, ಭಾರತ ಸೇರಿದಂತೆ ಬಾಹ್ಯಾಕಾಶ ಕ್ಷೇತ್ರದ ಮುಂಚೂಣಿ ರಾಷ್ಟ್ರಗಳು ಮುಕ್ತ ಕಂಠದಿಂದ ಹೊಗಳಿವೆ.

14vichara2

ಬಾಹ್ಯಾಕಾಶ ಸಂಶೋಧನೆಯಲ್ಲಿ ಇಂತಹ ವಿಫಲತೆಗಳು ಸಾಮಾನ್ಯ.. ಅಮೇರಿಕಾವೇ ಇಂತಹ ವಿಫಲತೆಗಳನ್ನು ಅನುಭವಿಸಿದೆ. ಅಮೆರಿಕಾ, ರಷ್ಯಾ ಚೀನಾ ಬಿಟ್ಟರೆ, ಇದುವರೆವಿಗೂ ಯಾವುದೇ ದೇಶ ತನ್ನ ಚಂದ್ರ ಶೋಧನಾ ನೌಕೆಯನ್ನು ಚಂದ್ರನ ಮೇಲೆ ಇಳಿಸಿಲ್ಲ .ಅಂತಹ ದೊಡ್ಡ ಸಾಧನೆಗೆ ಮುಂದಾದ ಪುಟ್ಟ ದೇಶವಾದ ಇಸ್ರೇಲ್ ತನ್ನ ಮೊದಲ ಯತ್ನದಲ್ಲೇ ನೌಕೆಯನ್ನು ಯಶಸ್ವಿಯಾಗಿ ಚಂದ್ರನ ಅಂಗಳಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿತ್ತು.

ಫೆಬ್ರವರಿಯಲ್ಲಿ ಪ್ಲಾರಿಡಾದ ಬಾಹ್ಯಾಕಾಶ ಕೇಂದ್ರದಿಂದ  ಸ್ಫೇಸ್ ಎಕ್ಸ್ ಕಾಕೆಟ್ ಮೂಲಕ ಚಂದ್ರ ನತ್ತ ಸಾಗಿದ್ದ ಬೆರೆಶೀಟ್ ನೌಕೆ,  ನಾಲ್ಕು ದಶಲಕ್ಷ ಮೈಲುಗಳಷ್ಟು ದೀರ್ಘ ಯಾನದ ನಂತರ ಏ. ೪ ರಂದು  ಚಂದ್ರನ ಕಕ್ಷೆ ಸೇರಿತ್ತು. ನಿಗಧಿಯಾಗಿದ್ದಂತೆ ಏ.೧೧ ರಂದು ಚಂದ್ರನ  ಮೇಲೆ ನೌಕೆಯ ಲ್ಯಾಂಡರ್ ಕಾಲೂರ ಬೇಕಿತ್ತು .

ಇಳಿಯುವ ಜಾಗವೂ ನಿಗಧಿಯಾಗಿತ್ತು .ಈ ಹಿಂದೆ  ಅಮೇರಿಕಾದ  ಅಪೊಲೊ ನೌಕೆ ಇಳಿದಿದ್ದ ಪ್ರದೇಶದಲ್ಲಿಯೇ ನೌಕೆಯನ್ನು ಇಳಿಸಲು ಇಸ್ರೇಲ್ ವಿಜ್ಷಾನಿಗಳು

ಯತ್ನ ನಡೆಸಿದ್ದರು. ಇದಕ್ಕಾಗಿ ನೌಕೆಯ ಇಂಜಿನ್ ವೇಗವನ್ನು ನಿಯಂತ್ರಿಸಲಾಗಿತ್ತು .ನೌಕೆ ನಿಧಾನವಾಗಿ ಚಂದ್ರನ ಮೇಲೆ ಕಾಲೂರುವ ಯತ್ನದಲ್ಲಿತ್ತು. ಇನ್ನೇನು ಕಾಲೂರಬೇಕು ಎನ್ನುವಷ್ಟರಲ್ಲಿ ನೌಕೆಯ ಇಂಜಿನ್ ನಲ್ಲಿ  ತಾಂತ್ರಿಕ  ದೋಷ ಉಂಟಾಗಿ ಅದು ಭೂ ಕೇಂದ್ರದ ಸಂಪರ್ಕ ಕಳೆದುಕೊಂಡು ಚಂದ್ರನಮೇಲೆ

ಅಪ್ಪಳಿಸುವ ಮೂಲಕ ನೌಕೆ ಸ್ಪೋಟಗೊಂಡು ಚೂರು ಚೂರಾಯಿತು.

Leave a Comment