ಚಂದ್ರನಿಂದ ಇಂಧನ ಪೂರೈಕೆ

ಚಂದ್ರನಲ್ಲಿ ಯಥೇಚ್ಛವಾಗಿರುವ ಹೀಲಿಯಂನಿಂದ ಭೂಮಿಗೆ 10 ಸಾವಿರ ವರ್ಷಗಳವರೆಗೆ ಇಂಧನ ಪೂರೈಸಬಹುದು ಎಂದು ಚೀನಾ ಹೇಳಿದೆ.

ದೇಶ ಎದುರಿಸುತ್ತಿರುವ ಇಂಧನದ ಕೊರತೆಯನ್ನು ಚಂದ್ರನಲ್ಲಿರುವ ಹೀಲಿಯಂನಿಂದ ಪೂರೈಸಿಕೊಳ್ಳಬಹುದು. 2030ರ ವೇಳೆಗೆ ಇದು ಸಾಧ್ಯವಾಗಲಿದೆ ಎಂದು ಇಸ್ರೋದ ಖ್ಯಾತ ಪ್ರಾಧ್ಯಾಪಕ ಶಿವತಾರು ಪಿಳ್ಳೈ ಹೇಳಿದ್ದಾರೆ.

ಚಂದ್ರನಲ್ಲಿಯ ಹೀಲಿಯಂ-3 ಅನ್ನು ತೆಗೆದು ತರುವ ಯತ್ನದಲ್ಲಿ ಚೀನಾ ಸೇರಿದಂತೆ, ಇತರೆ ದೇಶಗಳು ಈಗಾಗಲೇ ಮುಂದಾಗಿವೆ.

ಇಸ್ರೋ ಈ ವಿಷಯಕ್ಕೆ ಆದ್ಯತೆ ನೀಡಬೇಕು ಎಂದೂ ಶಿವತಾರು ಪಿಳ್ಳೈ ಹೇಳಿದ್ದಾರೆ. ಚಂದ್ರನಲ್ಲಿ ಯಥೇಚ್ಛವಾಗಿರುವ ಹೀಲಿಯಂನಿಂದ ಭೂಮಿಗೆ 10 ಸಾವಿರ ವರ್ಷಗಳವರೆಗೆ ಇಂಧನ ಪೂರೈಸಬಹುದು ಎಂದು ಚೀನಾ ವಿಜ್ಞಾನಿಗಳು ಹೇಳಿದ್ದಾರೆ.

ಎರಡು ಬಾಹ್ಯಾಕಾಶ ನೌಕೆಗಳು ತುಂಬಿ ತರುವ ಸುಮಾರು 40 ಟನ್ ಹೀಲಿಯಂನಿಂದ ಇಡೀ ಅಮೆರಿಕದ ಒಂದು ವರ್ಷದ ಇಂಧನ ಬೇಡಿಕೆ ಪೂರೈಸಬಹುದು ಎಂದು ನಾಸಾ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಚಂದ್ರನಿಗೂ, ಭೂಮಿಗೂ ಇರುವ ದೂರ 384,400 ಕಿ.ಮೀ. ಎಂಬುದನ್ನು ಮರೆಯುವಂತಿಲ್ಲ.

ಭೂಮಿಗಿಂತ ಅತಿ ಹೆಚ್ಚಿನ ಪ್ರಮಾಣದಲ್ಲಿ ಚಂದ್ರನಲ್ಲಿ ಹೀಲಿಯಂ -3 ಉಪಲಬ್ಧವಿದ್ದು, ಅದರ ಗಣಿಗಾರಿಕೆಯಿಂದ ಜಗತ್ತಿನ ಇಂಧನ ಬೇಡಿಕೆಯನ್ನು ಪೂರೈಸುವಷ್ಟು ಇಂಧನವನ್ನು ಪಡೆಯಬಹುದು ಎಂದು ಇತ್ತೀಚೆಗೆ ತಾನೆ ಇಸ್ರೋ ವಿಜ್ಞಾನಿ ಶಿವತಾರು ಪಿಳ್ಳೈ ಹೇಳಿದ್ದರು.

ಅವರು ಕಲ್ಪನಾ ಚಾವ್ಲಾ ಅಬ್ಸರ್ವರ್ ಸಂಶೋಧನಾ ಪ್ರತಿಷ್ಠಾನ ಹಮ್ಮಿಕೊಂಡಿದ್ದ  ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತ ಹೇಳಿದ್ದರು.

ಚಂದ್ರನಲ್ಲಿಯ ಹೀಲಿಯಂ ಗಣಿಗಾರಿಕೆಗೆ ಹಲವು ರಾಷ್ಟ್ರಗಳು ಈಗಾಗಲೇ ಯೋಜನೆಗಳನ್ನು ರೂಪಿಸಿದ್ದು, ಇಸ್ರೋ ಈ ಬಗ್ಗೆ ಆದ್ಯತೆ ನೀಡಬೇಕು ಎಂದು ಶಿವತಾರು ಪಿಳ್ಳೈ ಹೇಳಿದ್ದಾರೆ. ಇವರು ಇಸ್ರೋದ ಹೆಸರುವಾಸಿ ಪ್ರೊಫೆಸರ್ ಕೂಡ ಆಗಿದ್ದಾರೆ.

ಎರಡು ಬಾಹ್ಯಾಕಾಶ ನೌಕೆಗಳ ತುಂಬಾ ತಂದ ಹೀಲಿಯಂ ಸುಮಾರು 40 ಟನ್‌ನಿಂದ ಇಡೀ ಅಮೆರಿಕಾದ ಒಂದು ವರ್ಷದ ಇಂಧನದ ಅಗತ್ಯವನ್ನು ಪೂರೈಸಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕವಾಗಿ ಮುಂದಿನ ಇಂಧನದ ಅಗತ್ಯತೆಯನ್ನು ಪೂರೈಸಲು ಚಂದ್ರನಲ್ಲಿಯ ಹೀಲಿಯಂ – 3 ಮೊರೆ ಹೋಗಬೇಕು ಎಂದು ಚೀನಾದ ಚಂದ್ರ ಶೋಧನಾ ಯೋಜನೆಯ ಮುಖ್ಯ ವಿಜ್ಞಾನಿ ಮತ್ತು ಪ್ರೊಫೆಸರ್ ಒಯಾಂಗ್ ಝಿಯುನ್ ಅಭಿಪ್ರಾಯಪಟ್ಟಿದ್ದಾರೆ.

ಹೀಲಿಯಂ – 3 ಹಗುರವಾದ ಹಾಗೂ ವಿಕಿರಣ ಮುಕ್ತ ಐಸೊ ಟೋಪ್ ಆಗಿದ್ದು, ಇದು ಎರಡು ಪೊಟ್ರಾನ್ ಮತ್ತು ಒಂದು ನ್ಯೂಟ್ರಾನ್ ಅನ್ನು ಹೊಂದಿದೆ.

ಭೂಮಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಚಂದ್ರನಲ್ಲಿ ಹೀಲಿಯಂ -3 ಇದೆ. ಸೌರ ಗುಳಿಯಿಂದ ಚಂದ್ರನಲ್ಲಿ ಯಥೇಚ್ಛ ಪ್ರಮಾಣದಲ್ಲಿ ಹೀಲಿಯಂ ಶೇಖರಣೆಯಾಗುತ್ತದೆ.

ಚಂದ್ರನಲ್ಲಿಯ ಹೀಲಿಯಂನ ವಿಭಜನೆ ಅದನ್ನು ಭೂಮಿಗೆ ತರುವ ರಾಕೆಟ್ ನಿರ್ಮಾಣ ಯೋಜನಾ ವೆಚ್ಚ ಅಂದಾಜು 20 ಶತಕೋಟಿ ಡಾಲಱ್ಸ್ ಎಂದು ಅಮೆರಿಕ ವಿಜ್ಞಾನಿಗಳು ಹೇಳಿದ್ದಾರೆ.

ಚಂದ್ರನಲ್ಲಿ ಹೀಲಿಯಂ-3 ಹೇರಳವಾಗಿದೆ. ಅಂದ ಮಾತ್ರಕ್ಕೆ ಭೂಮಿಯಲ್ಲಿಯ ನಮ್ಮ ಇಂಧನ ಪೂರೈಕೆಗೆ ಅದನ್ನು ಬಳಸಿಕೊಳ್ಳುವುದು ಸುಲಭದ ಮಾತಲ್ಲ.

ಚಂದ್ರನಿಂದ ಭೂಮಿಗೆ ಇರುವ ದೂರ 384,400 ಕಿ.ಮೀ. ಇಷ್ಟು ದೂರದವರೆಗೆ ಅದನ್ನು ಸಾಗಿಸಿ ತರಬೇಕು. ಇದಕ್ಕೆ ಬಾಹ್ಯಾಕಾಶ ನೌಕೆ ರಾಕೆಟ್‌ಗಳ ನಿರ್ಮಾಣ ಮಾಡಬೇಕು. ಸದ್ಯಕ್ಕೆ ಇದರ ಖರ್ಚು ವೆಚ್ಚ ಅಸಾಧ್ಯವೆಂದರೂ ಜಾಗತಿಕವಾಗಿ ಮುಂದಿನ ಜಾಗತಿಕ ಇಂಧನದ ಬೇಡಿಕೆ ಪೂರೈಕೆ ಮುಂದೆ ಇದು ಗೌಣವೆನಿಸಲೂಬಹುದು.

-ಉತ್ತನೂರು ವೆಂಕಟೇಶ್

Leave a Comment