ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಆಯುಕ್ತರ ಭೇಟಿ

ದಾವಣಗೆರೆ.ಆ.4; ನಗರದ ಘನತ್ಯಾಜ್ಯ ವಿಲೇವಾರಿಯ ಆವರಗೊಳ್ಳ ಘಟಕಕ್ಕೆ ಮಹಾನಗರ ಪಾಲಿಕೆ ಆಯುಕ್ತರಾದ ಮಂಜುನಾಥ್ ಆರ್. ಬಳ್ಳಾರಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘನತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ಮಾಡಬೇಕೆಂಬ ಉದ್ದೇಶದಿಂದ ಹೆಚ್ಚಿನ ಆಸಕ್ತಿ ವಹಿಸಿರುವ ಆಯುಕ್ತರು ಘಟಕದ ಸಣ್ಣಪುಟ್ಟ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಿ ಪರಿಹಾರ ಒದಗಿಸಿದರು.
ಘಟಕಕ್ಕೆ ಹೋಗುವ ರಸ್ತೆಯನ್ನು ಸಹ ದುರಸ್ತಿ ಪಡಿಸಲಾಗುತ್ತಿದ್ದು, ವಾಹನಗಳ ಸಂಚಾರಕ್ಕೆ ತೊಂದರೆ ಆಗದಂತೆ ಶೀಘ್ರ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಸೂಚಿಸಿದರು. ಈ ಸಂದರ್ಭದಲ್ಲಿ ಅಧೀಕ್ಷಕ ಅಭಿಯಂತರರಾದ ಸತೀಶ್, ಅಭಿಯಂತರರಾದ ರಾಮಚಂದ್ರಪ್ಪ, ಪರಿಸರ ಅಧಿಕಾರಿ ಡಾ. ಚಂದ್ರಶೇಖರ್ ಸುಂಕದ್ ಹಾಗೂ ಅಧಿಕಾರಿವರ್ಗದವರು, ನೌಕರರು ಉಪಸ್ಥಿತರಿದ್ದರು.

Leave a Comment